ಕನ್ನಡ ಭಾಷಾಭಿಮಾನಕ್ಕೆ ಧಕ್ಕೆ: ರಾಜಕೀಯ ಹುನ್ನಾರ!
ನಟ ಕಮಲ್ ಹಾಸನ್ ಅವರ ಹೇಳಿಕೆ ಕರ್ನಾಟಕದಲ್ಲಿ ಭಾಷಾಭಿಮಾನಕ್ಕೆ ಸಂಬಂಧಿಸಿದಂತೆ ಹೊಸ ಚರ್ಚೆಯನ್ನೇ ಹುಟ್ಟುಹಾಕಿದೆ. ಬೆಂಗಳೂರಿನಲ್ಲಿ ಹಿಂದಿ ಭಾಷಿಕರು - ಕನ್ನಡಿಗರೊಂದಿಗೆ ಮಾಡುತ್ತಿರುವ ಜಗಳ ಪ್ರತಿ ದಿನವೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸಬೀನಾ ಎ, ಮೈಸೂರು ಅವರ ಬರಹ ಆಕರ್ಷಣೀಯವಾಗಿದೆ. ಭಾಷಾಭಿಮಾನಕ್ಕೆ ಧಕ್ಕೆ: ರಾಜಕೀಯ ಹುನ್ನಾರ ಎನ್ನುವ ಬರಹವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಭಾಷಾಭಿಮಾನಕ್ಕೆ ಧಕ್ಕೆ: ರಾಜಕೀಯ ಹುನ್ನಾರ ಎನ್ನುವ ಸಾಲಿನಲ್ಲಿ ಸಬೀನಾ ಅವರು ಸುದೀರ್ಘವಾಗಿ ಕನ್ನಡದ ಇಂದಿನ ಸ್ಥಿತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡಿಗರು ಮಾತ್ರವಲ್ಲ ದಕ್ಷಿಣ ರಾಜ್ಯಗಳ ಎಲ್ಲಾ ಜನಸಾಮಾನ್ಯರು ತಮ್ಮ ಭಾಷೆಗಳ ಬಗ್ಗೆ ಕೇವಲ ಭಾವುಕರಾಗದೆ, ಈ ಅವಹೇಳಿಕೆಗಳ ಹಿಂದಿನ ರಾಜಕಾರಣವನ್ನೂ ಕಣ್ತೆರೆದು ನೋಡಬೇಕಿದೆ ಎಂದು ಅವರು ಹೇಳಿದ್ದಾರೆ.

ಕನ್ನಡಿಗರನ್ನು ಕೆಣಕುವ ಉಳ್ಳವರ ಪ್ರಯತ್ನಗಳ ಹಿಂದಿನ ಕುತಂತ್ರ ಅರ್ಥೈಸಿಕೊಳ್ಳಬೇಕು ಎನ್ನಿಸುತ್ತದೆ. ದಕ್ಷಿಣ ಭಾರತದ ಮೇಲೆ ಸತತ ಹಿಂದಿ ಹೇರಿಕೆ ಮಾಡಿ, ಉತ್ತರದ ಜನಪ್ರತಿನಿಧಿಗಳು ಕೈ ಸುಟ್ಟುಕೊಂಡಿದ್ದಾರೆ ಮತ್ತು ಅವರ ಕಾನೂನುಗಳನ್ನು ವಿಮರ್ಶಿಸಿ ಪ್ರಜ್ಞಾವಂತರಾಗಿ ಒಗ್ಗಟ್ಟಿನಿಂದ ಎದುರಿಸುತ್ತಿರುವ ಪರಿಣಾಮ ದಕ್ಷಿಣದ ರಾಜ್ಯಗಳು ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಇತ್ತ ಶ್ರೀಮಂತಶಾಹಿಗಳ ಕಂಪನಿಗಳು, ಕನ್ನಡ ನೆಲದಲ್ಲೇ ನೆಲೆಕಂಡು ಕನ್ನಡವನ್ನೇ ಅಸ್ಪೃಶ್ಯದಂತೆ, ಕನ್ನಡಿಗರನ್ನು ಅಶಿಕ್ಷಿತರಂತೆ ಕಾಣುವ ಹಲವು ಉತ್ತರದ ಉದ್ಯೋಗಿಗಳು ತಮ್ಮ ನಾಡಿಗೆ ವಿಮುಖರಾಗುವುದನ್ನು ತಡೆದು ಕಂಪನಿ ಉಳಿಸುವ ಸಾಹಸ ಮಾಡುತ್ತಿವೆ ಎಂದಿದ್ದಾರೆ.
ಮುಂದುವರಿದು ಈ ಸವಾಲಿಗೆ ವಿರಾಮ ಹಾಕಲು ಸರ್ಕಾರ ಮತ್ತು ಶ್ರೀಮಂತಶಾಹಿಗಳು ಬಳಸುತ್ತಿರುವ ಏಕೈಕ ಅಸ್ತ್ರ ಒಡೆದು ಆಳುವ ತಂತ್ರ. ದಕ್ಷಿಣ ಭಾರತದ ಒಗ್ಗಟ್ಟನ್ನು ಮುರಿಯುವುದೇ ಏಕೈಕ ಪರಿಹಾರ ಎಂಬುದು ಅವರಿಗೆ ಗೊತ್ತಿದೆ. ಈ ಒಗ್ಗಟ್ಟನ್ನು ಮುರಿಯಲು ನೇರವಾಗಿ ಉತ್ತರದವರ ಹಸ್ತಕ್ಷೇಪದಿಂದ ಸಾಧ್ಯ ಇಲ್ಲ ಎಂಬುದನ್ನು ಚೆನ್ನಾಗಿ ಅರಿತಿರುವ ಅವರು ನಮ್ಮನ್ನೇ ನಮ್ಮ ವಿರುದ್ಧ ಎತ್ತಿಕಟ್ಟುವ ಕುತಂತ್ರ ಹೂಡಿವೆ. ಅದಕ್ಕೆ ಪಬ್ಲಿಕ್ ಫಿಗರ್ ಎನಿಸಿಕೊಂಡವರಿಂದ ಈ ರೀತಿಯ ಹೇಳಿಕೆ ನೀಡಿ ದಕ್ಷಿಣದ ರಾಜ್ಯಗಳು ಭಾಷೆ ವಿಷಯಕ್ಕೆ ಪರಸ್ಪರ ದ್ವೇಷ, ಅಸಹಕಾರ, ವೈಷಮ್ಯ ಬೆಳೆಸಿಕೊಳ್ಳುವಂತೆ ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿ ಯಾರೋ ಒಬ್ಬ ಈ ರೀತಿಯ ಹೇಳಿಕೆ ನೀಡಿದರೆ ಅದು ಇಡೀ ರಾಜ್ಯದವರ ವಿರುದ್ಧ ವೈಷಮ್ಯ ಹುಟ್ಟಿಸುತ್ತದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಜನ ಸಾಮಾನ್ಯರ ಬಗ್ಗೆಯೂ ದ್ವೇಷ ಹುಟ್ಟಿಸುತ್ತವೆ. ಹಾಗಾಗಿ ಜನರ ಭಾವನೆಗಳನ್ನು ಬಳಸಿಕೊಂಡು ಒಗ್ಗಟ್ಟು ಮುರಿಯುವ ವಿಷಜಂತುಗಳಿಗೆ ಸರಿಯಾದ ಪಾಠ ಕಲಿಸಿ ನಮ್ಮ ಒಗ್ಗಟ್ಟನ್ನು ಮತ್ತಷ್ಟು ಬಲಿಷ್ಠ ಗೊಳಿಸಬೇಕಿದೆ. ಹಾಗಂತ ಉತ್ತರ ಭಾರತದ ಎಲ್ಲಾ ಹಿಂದಿ ಭಾಷಿಕರನ್ನೂ ಅದೇ ತಕ್ಕಡಿಯಲ್ಲಿಟ್ಟು ತೂಗುವುದೂ ನ್ಯಾಯ ಅಲ್ಲ. ತಮ್ಮ ರಾಜಕೀಯ, ಲಾಭದ ಬೇಳೆ ಬೇಯಿಸಿಕೊಳ್ಳಲು ಬರುವವರ ವಿರುದ್ಧ ನಾವು ಸದಾ ಎಚ್ಚರಿಕೆ ವಹಿಸಬೇಕಾಗಿದೆ. ನಾವು ಕನ್ನಡಿಗರು, ದಕ್ಷಿಣದವರು ಜತೆ ಜತೆಗೆ ಭಾರತೀಯರು, ವಿಶ್ವಮಾನವರು ಎಂದಿದ್ದಾರೆ.
-
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ












Click it and Unblock the Notifications