ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸುಶಾಸನ' ದಿನ: ರಾಜ್ಯದ 10 ಸಾವಿರ ಯುವಜನರಿಗೆ ಉದ್ಯೋಗಪತ್ರ ವಿತರಣೆ:CM

|
Google Oneindia Kannada News

ಬೆಂಗಳೂರು, ಡಿಸೆಂಬರ್ 25: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ 'ಸುಶಾಸನ ದಿನ' ಆಚರಣೆಯಲ್ಲಿ ರಾಜ್ಯ ಒಟ್ಟು 10,000 ಯುವಜನರಿಗೆ ಉದ್ಯೋಗ ಪತ್ರ ವಿತರಿಸಲಾಯಿತು.

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ನಡೆದ ಸುಶಾಸನ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂಕೇತಿಕವಾಗಿ ಎಂಟು ಅಭ್ಯರ್ಥಿಗಳಿಗೆ ಉದ್ಯೋಗಾದೇಶಗಳನ್ನು ಹಸ್ತಾಂತರಿಸಿದರು. ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆಯ ಈ ಉಪಕ್ರಮದಡಿ, ಮಾಸಿಕ ಕನಿಷ್ಠ 18 ಸಾವಿರ ರೂ.ಗಳಿಂದ ಹಿಡಿದು ಗರಿಷ್ಠ 45 ಸಾವಿರ ರೂ. ವೇತನದವರೆಗಿನ ಉದ್ಯೋಗಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ. ಉದ್ಯೋಗ ಪಡೆದುಕೊಂಡವರಲ್ಲಿ ಎಂಜಿನಿಯರಿಂಗ್, ಬಿ.ಎಸ್ಸಿ, ಬಿ.ಕಾಂ., ನರ್ಸಿಂಗ್‌, ಡಿಪ್ಲೊಮಾ, ಪಾಲಿಟೆಕ್ನಿಕ್‌ ಪದವೀಧರರು ದ್ದಾರೆ. ಸಮಾರಂಭಕ್ಕೆ ಉದ್ಯೋಗ ಪತ್ರ ಉದ್ಯೋಗ ಪಡೆದುಕೊಂಡ 3 ಸಾವಿರ ಅಭ್ಯರ್ಥಿಗಳು ಆಗಮಿಸಿದ್ದರು.

ಅಟಲ್ ಬಿಹಾರಿ ವಾಜಪೇಯಿ ಪುತ್ಥಳಿ-ಉದ್ಯಾನ ಅನಾವರಣ: ಬೊಮ್ಮಾಯಿಅಟಲ್ ಬಿಹಾರಿ ವಾಜಪೇಯಿ ಪುತ್ಥಳಿ-ಉದ್ಯಾನ ಅನಾವರಣ: ಬೊಮ್ಮಾಯಿ

ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಕರ್ನಾಟಕವನ್ನು ಬಿಟ್ಟರೆ ಬೇರೆ ಯಾವ ರಾಜ್ಯದಲ್ಲೂ ಉದ್ಯೋಗ ನೀತಿ ಇಲ್ಲ. ಇದಕ್ಕೆ ಪೂರಕವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನೂ ತರಲಾಗಿದೆ. ಸ್ಥಳೀಯರಿಗೆ ಉದ್ಯೋಗ ಸಿಗಬೇಕೆನ್ನುವುದು ಸರ್ಕಾರದ ಗುರಿಯಾಗಿದೆ. ನೇಮಕಾತಿಗೆ ತಕ್ಕ ಪ್ರೋತ್ಸಾಹ ಕೊಡಲಾಗುತ್ತಿದೆ. ಇದರಂತೆ ವಿದ್ಯುತ್‌ ಚಾಲಿತ ವಾಹನಗಳ ಕ್ಷೇತ್ರದಲ್ಲಿ ಬೆಂಗಳೂರಿನಲ್ಲಿ ತಮ್ಮ ಆರ್‍‌ ಆಂಡ್ ಡಿ ಕೇಂದ್ರಗಳನ್ನು ಹೊಂದಿರುವ ಕಂಪನಿಗಳು ನಮ್ಮ ರಾಜ್ಯದಲ್ಲೇ ಉತ್ಪಾದನಾ ಘಟಕಗಳನ್ನೂ ಕಡ್ಡಾಯವಾಗಿ ಸ್ಥಾಪಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಮಹಿಳೆಯರ ಉದ್ಯಮಶೀಲತೆಗೆ ಉತ್ತೇಜನ

ಮಹಿಳೆಯರ ಉದ್ಯಮಶೀಲತೆಗೆ ಉತ್ತೇಜನ

ಕರ್ನಾಟಕದಲ್ಲಿ ಸ್ತ್ರೀ ಸಾಮರ್ಥ್ಯ' ಯೋಜನೆಯಡಿ ಒಂದು ಲಕ್ಷ ರೂ. ಸಬ್ಸಿಡಿ ಸಹಿತ ತಲಾ 5 ಲಕ್ಷ ರೂ.ಗಳ ಸಾಲ ಸೌಲಭ್ಯ ಒದಗಿಸುವ ಮೂಲಕ 5 ಲಕ್ಷ ಮಹಿಳೆಯರ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಲಾಗುವುದು. ಹಾಗೆಯೇ, 'ಸ್ವಾಮಿ ವಿವೇಕಾನಂದ ಯೋಜನೆ'ಯ ಮುಖಾಂತರ ಗ್ರಾಮೀಣ ಭಾಗಗಳ 5 ಲಕ್ಷ ಯುವಜನರಿಗೆ ಉದ್ಯೋಗ ಕೊಡಲಾಗುವುದು. ಇದರಿಂದ ರಾಜ್ಯದ ಆರ್ಥಿಕ ಬೆಳವಣಿಗೆಗೆ ವೇಗ ದೊರೆಯಲಿದೆ ಎಂದರು.

ಉದ್ಯೋಗಕ್ಕೆ ಯುವಕರನ್ನು ಸಜ್ಜುಗೊಳಿಸಲಾಗುತ್ತಿದೆ: ಸಿಎಂ

ಉದ್ಯೋಗಕ್ಕೆ ಯುವಕರನ್ನು ಸಜ್ಜುಗೊಳಿಸಲಾಗುತ್ತಿದೆ: ಸಿಎಂ

ರಾಜ್ಯಕ್ಕೆ ಇತ್ತೀಚೆಗೆ 8ಲಕ್ಷ ಕೋಟಿ ರೂ. ಹೂಡಿಕೆ ಬರುವುದು ಖಾತ್ರಿಯಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ಕೌಶಲ್ಯಾಭಿವೃದ್ಧಿ ನಿರ್ಣಾಯಕವಾಗಿದೆ. ಐಟಿಐ, ಜಿಟಿಟಿಸಿ, ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌ ಕಾಲೇಜುಗಳೆಲ್ಲವನ್ನೂ ಕೌಶಲ್ಯದ ವ್ಯಾಪ್ತಿಗೆ ತರಲಾಗಿದೆ. ಪ್ರಧಾನಮಂತ್ರಿಗಳ ಸ್ಕಿಲ್‌ ಇಂಡಿಯಾ ಮತ್ತು ದೀನ್‌ ದಯಾಳ್‌ ಉಪಾಧ್ಯಾಯ ಕೌಶಲ್ಯ ಯೋಜನೆಯಡಿ ಯುವಜನರನ್ನು ಉದ್ಯೋಗಗಳಿಗೆ ಅರ್ಹರನ್ನಾಗಿ ಸಜ್ಜು ಮಾಡಲಾಗುತ್ತಿದೆ. ಪ್ರಧಾನಿಯವರ ಮಹತ್ವಾಕಾಂಕ್ಷಿ ಯೋಜನೆಯಾದ 'ಮುದ್ರಾ'ದ ಅಡಿಯಲ್ಲಿ ರಾಜ್ಯದ 25 ಲಕ್ಷ ಜನರಿಗೆ ತಮ್ಮ ವಹಿವಾಟು/ಉದ್ಯಮಗಳನ್ನು ಆರಂಭಿಸಲು ಗರಿಷ್ಠ ತಲಾ 10 ಲಕ್ಷ ರೂ.ವರೆಗೆ ಸುಗಮವಾಗಿ ಸಾಲ ಕೊಡಲಾಗಿದೆ ಎಂದು ಅವರು ವಿವರಿಸಿದರು.

ಪಾಶ್ಚಾತ್ಯ ರಾಷ್ಟ್ರಗಳು ಈಗ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿದ್ದು, ಪಕ್ಕದ ಚೀನಾ ಕೋವಿಡ್‌ನಿಂದ ತತ್ತರಿಸುತ್ತಿದೆ. ಆದರೆ, ಶೇಕಡ 46ರಷ್ಟು ಯುವಜನರೊಂದಿಗೆ ಭಾರತವು ದೈತ್ಯ ಆರ್ಥಿಕ ಶಕ್ತಿಯಾಗುವತ್ತ ಮುನ್ನುಗ್ಗುತ್ತಿದೆ. ಯುವಜನರು ಜಾಗತಿಕ ಸ್ಪರ್ಧೆಯನ್ನು ಕಡೆಗಣಿಸದೆ ವೈಯಕ್ತಿಕ ಯಶಸ್ಸನ್ನು ಸಾಧಿಸಿ, ಸಾಮುದಾಯಿಕ ಸಾಧನೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ಬೊಮ್ಮಾಯಿ ಆಶಿಸಿದರು.

ಮೈಸೂರು ಬೆಂಗಳೂರು ದಶಪಥದ ನ್ಯೂನ್ಯತೆ ಸರಿಪಡಿಸುವಂತೆ ಸುಮಲತಾ ಮನವಿಮೈಸೂರು ಬೆಂಗಳೂರು ದಶಪಥದ ನ್ಯೂನ್ಯತೆ ಸರಿಪಡಿಸುವಂತೆ ಸುಮಲತಾ ಮನವಿ

ಸಚಿವ ಅಶ್ವಥ್ ನಾರಾಯಣರ ಕಾರ್ಯ ಶ್ಲಾಘಿಸಿದ ಸಿಎಂ

ಸಚಿವ ಅಶ್ವಥ್ ನಾರಾಯಣರ ಕಾರ್ಯ ಶ್ಲಾಘಿಸಿದ ಸಿಎಂ

ಐಟಿ ಬಿಟಿ ಸಚಿವ ಡಾ.ಸಿ. ಎನ್ ಅಶ್ವಥ್ ನಾರಾಯಣ ಅವರು ಏಕಕಾಲದಲ್ಲಿ 10 ಸಾವಿರ ಜನರಿಗೆ ಉದ್ಯೋಗಪತ್ರ ವಿತರಿಸುವ ಮೂಲಕ ದೇಶಕ್ಕೇ ಮಾದರಿಯಾಗಿದೆ. ಅವರಿಗೆ ಇಷ್ಟೊಂದು ಖಾತೆಗಳನ್ನೇಕೆ ಕೊಡಲಾಗಿದೆ ಎನ್ನುವ ಪ್ರಶ್ನೆಗೆ ಇವತ್ತಿನ ಅವರ ಕೆಲಸವೇ ಉತ್ತರವಾಗಿದೆ. ಅವರ ನೇತೃತ್ವದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಸಿಬ್ಬಂದಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಇದು ವಾಜಪೇಯಿಯವರಿಗೆ ನಿಜವಾದ ಗೌರವ ಸಲ್ಲಿಸುವ ಕೆಲಸವಾಗಿದೆ" ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ಭಾಷಣದ ಆರಂಭದಲ್ಲೇ ಶ್ಲಾಘಿಸಿದರು. ಜೊತೆಗೆ, ಇಂತಹ ಉಪಕ್ರಮವನ್ನು ತಿಂಗಳಿಗೆ ಒಮ್ಮೆಯಾದರೂ ನಡೆಸಬೇಕು; ಇದರಿಂದ ನಿರುದ್ಯೋಗ ಸಮಸ್ಯೆ ತನ್ನಿಂತಾನೇ ನಿವಾರಣೆ ಆಗುತ್ತದೆ ಎಂದು ಅವರು ಸಲಹೆ ನೀಡಿದರು.

30 ಐಟಿಐಗಳು ಈ ವರ್ಷ ಮೇಲ್ದರ್ಜೆಗೆ ಏರಲಿವೆ

30 ಐಟಿಐಗಳು ಈ ವರ್ಷ ಮೇಲ್ದರ್ಜೆಗೆ ಏರಲಿವೆ

ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಮಾತನಾಡಿ, "ಈ ವರ್ಷದಿಂದ ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ ವೃತ್ತಿ ತರಬೇತಿ ಪದವಿಯನ್ನು (ಬಿ.ವೋಕ್‌) ಪ್ರಾರಂಭಿಸಲಾಗುವುದು. ಇದಕ್ಕಾಗಿ ಜಿಟಿಟಿಸಿ ಮತ್ತು ವಿವಿ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರ ಮೂಲಕ 'ಸರ್ವರಿಗೂ ಉದ್ಯೋಗ' ನೀತಿಯ ಸಾಕಾರ ಮಾಡಲಾಗುವುದು.

ಈಗಾಗಲೇ ರಾಜ್ಯದಲ್ಲಿ ಸರ್ಕಾರಿ 150 ಐಟಿಐಗಳನ್ನು ಉನ್ನತೀಕರಿಸಲಾಗಿದೆ. ಈ ವರ್ಷ ಉಳಿದ 30 ಐಟಿಐಗಳನ್ನು ಮೇಲ್ದರ್ಜೆಗೇರಿಗೆ ಏರಿಸಲಾಗುವುದು. ಜಿಟಿಟಿಸಿಗಳಲ್ಲಿ ಈಗಾಗಲೇ ಅಲ್ಪಾವಧಿಯ 10 ಮತ್ತು ದೀರ್ಘಾವಧಿಯ 30 ಹೊಸ ಕೋರ್ಸುಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿರುವ ಉದ್ಯೋಗಾವಕಾಶಗಳು ಹೊರರಾಜ್ಯಗಳವರ ಪಾಲಾಗುವುದಕ್ಕಿಂತ ನಮ್ಮ ಯುವಜನರಿಗೇ ಸಿಗುವಂತೆ ಮಾಡುವುದು ನಮ್ಮ ಮುಂದಿರುವ ಹೆಗ್ಗುರಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.

ರಚನಾತ್ಮಕವಾಗಿ 'ಸುಶಾಸನ ದಿನ' ಆಚರಣೆ

ರಚನಾತ್ಮಕವಾಗಿ 'ಸುಶಾಸನ ದಿನ' ಆಚರಣೆ

ಉನ್ನತ ಶಿಕ್ಷಣ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಪಾರದರ್ಶಕತೆ, ಉತ್ತರದಾಯಿತ್ವ, ಸುಲಭ ವರ್ಗಾವಣೆ, ಕುಂದುಕೊರತೆಗಳ ಸುಗಮ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಸುಶಾಸನ ಮಾಸವನ್ನು ರಚನಾತ್ಮಕವಾಗಿ ಆಚರಿಸಲಾಗಿದೆ, ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌ ಮುಖಾಂತರ ವಿದ್ಯಾರ್ಥಿಗಳ ಆಸಕ್ತಿಗಳು ಇತ್ಯಾದಿಗಳನ್ನು ಗಮನಿಸಿ, ಸೂಕ್ತ ಕೌಶಲ್ಯಾಭಿವೃದ್ಧಿ ಒದಗಿಸಲಾಗುವುದು ಎಂದು ಅವರು ನುಡಿದರು.
ಇದೇ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಬೋಧಕೇತರ ಸಿಬ್ಬಂದಿಗಳ ಕುಂದುಕೊರತೆ ನಿವಾರಣೆಗೆ ರೂಪಿಸಿರುವ 'ಶಿಕ್ಷಣ ಸ್ಪಂದನ' ಉಪಕ್ರಮ ಮತ್ತು ಜಿಟಿಟಿಸಿ ಪುನಾರಚನೆ ವರದಿಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌ ಸೆಲ್ವಕುಮಾರ್‍‌, ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್‌ ಗೌಡ, ಜೀವನೋಪಾಯ ಮಿಷನ್ ವ್ಯವಸ್ಥಾಪಕ‌ ನಿರ್ದೇಶಕರು,ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆಯುಕ್ತರು ಮತ್ತಿತರರು ಪಾಲ್ಗೊಂಡಿದ್ದರು.

English summary
Atal Bihari Vajpayee Birthday: 10,000 job cards distributed to youth by CM Basavaraj Bommai at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X