Darshan: 'ದಾಸ'ನ ಜೈಲು ವಾಸ ಇಷ್ಟಕ್ಕೆ ಮುಗಿಯಲ್ಲ, ಮುಂದೆ ದರ್ಶನ್ ಇನ್ನೊಮ್ಮೆ ಜೈಲು : ಅಚ್ಚರಿ ಭವಿಷ್ಯ ನುಡಿದ ಜ್ಯೋತಿಷಿ..!
ಬೆಂಗಳೂರು,ಜುಲೈ 02: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದು, ದರ್ಶನ್ ಅವರ ಗ್ರಹ ಗತಿಗಳು ಸರಿ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ನವಗ್ರಹಗಳು ನಮ್ಮ ಭವಿಷ್ಯವನ್ನ ನಿರ್ಧರಿಸುತ್ತದೆ ಎಂದು ಎನ್ನುತ್ತಾರೆ. ಆದರೆ ಅದೇ ನವಗ್ರಹಗಳ ಮೂಲಕ ಮನುಷ್ಯನ ಕಾರ್ಯಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ಕಲ್ಪನೆಗೆ ಆಧಾರವೇ ಇಲ್ಲ.
ಸದ್ಯಕ್ಕೆ ಜೈಲು ಸೇರಿರುವ ನಟ ದರ್ಶನ್ ಹಣೆಬರಹಕ್ಕೆ ಈ ಗ್ರಹ ಗತಿಗಳೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಎದುರಾದ ಇದೊಂದು ಅಪಾಯವನ್ನು ದರ್ಶನ್ ಪಾರು ಮಾಡಿದರೆ ಮುಂದೆ ಯಾರಿಂದನೂ ದರ್ಶನ್ ಅವರನ್ನು ತಡೆಯಲು ಸಾಧ್ಯ ಇಲ್ಲ ಎಂಬ ಭವಿಷ್ಯವಾಣಿ ಕೇಳಿ ಬರುತ್ತಿವೆ.

ಇದಕ್ಕೆ ಪೂರಕವಾಗಿ ನಾನು ಅಂದರೆ ನಂಬರ್.. ನಂಬರ್ ಅಂದರೆ ನಾನು..ಎನ್ನುವ ಆರ್ಯವರ್ಧನ್ ಗುರೂಜಿ ಸೇರಿ ಅನೇಕರು ದರ್ಶನ್ ಅವರ ಜಾತಕದ ಬಗ್ಗೆ ಹಲವು ಜ್ಯೋತಿಷಿಗಳು ಹಲವು ಹೇಳಿಕೆಯನ್ನ ನೀಡಿದ್ದಾರೆ. ನಟ ದರ್ಶನ್ ಅವರ ಕುರಿತು ಒಂದಿಷ್ಟು ಅಂಶಗಳನ್ನ ಹಂಚಿಕೊಂಡಿದ್ದಾರೆ. ಅಲ್ಲದೇ ಸದ್ಯದಲ್ಲಿಯೇ ದರ್ಶನ್ ಬಂಧನದಿಂದ ಮುಕ್ತರಾಗುತ್ತಾರೆ ಎಂದು ಕೂಡ ಹೇಳುತ್ತಿದ್ದಾರೆ. ಈ ನಡುವೆ ಈಗ ದರ್ಶನ್ ಮುಂದಿನ ಜೀವನದ ಬಗ್ಗೆ ಈಗ ಜ್ಯೋತಿಷಿ ದಿನೇಶ್ ಭಟ್ ಸ್ಫೋಟಕವಾದ ಭವಿಷ್ಯವನ್ನು ಹೇಳಿದ್ದಾರೆ. ರಾಜಕೀಯದಲ್ಲಿ ದರ್ಶನ್ ಮಿಂಚುವುದು ಖಚಿತ.. ನಿಶ್ಚಿತ ಎಂಬ ಮಾತನ್ನು ಸಹ ಹೇಳಿದ್ದಾರೆ.
ವಿಸ್ತಾರ ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಜೋತಿಷಿ ದಿನೇಶ್ ಭಟ್ ಅವರು ಮಾತನಾಡಿ, ಸದ್ಯ ಆರು ತಿಂಗಳವರೆಗೂ ದರ್ಶನ್ ಸೆರೆವಾಸದಲ್ಲೇ ಇರೋ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನೂ ದರ್ಶನ್ ಪರಪ್ಪನ ಅಗ್ರಹಾರದ ಪಾಲಾದ ನಂತರ ಇದೆಲ್ಲವೂ ಸಹವಾಸ ದೋಷ ಮತ್ತು ಸ್ರ್ತೀ ದೋಷದಿಂದ ಎದುರಾದ ಗಂಡಾಂತರ ಎಂದು ಜನಸಾಮಾನ್ಯರೇ ಮಾತನಾಡಿಕೊಂಡಿದ್ದರು. ಈ ಮಾತುಗಳನ್ನೇ ಪುನರುಚ್ಚಿಸಿರುವ ದಿನೇಶ್ ಭಟ್, ದರ್ಶನ್ ಗೆ ಸ್ತ್ರೀ ದೋಷ ಇದೆ ಎಂದಿದ್ದಾರೆ.
ಅಜಾಗರೂಕತೆಯಿಂದ ಎದುರಾದ ಈ ಕಷ್ಟಗಳಿಂದ ದರ್ಶನ್ ಮತ್ತೆ ಹೊರ ಬರಲು ಕೆಲ ಸಮಯ ಬೇಕಾಗುತ್ತೆ ಎಂದಿರುವ ದಿನೇಶ್ ಭಟ್, 2026ರ ನಂತರ ದರ್ಶನ್ ಮತ್ತೆ ಕನ್ನಡ ಚಿತ್ರರಂಗದ ಸ್ಟಾರ್ ಹೀರೋ ಆಗಿ ಮಿಂಚುವುದು ನೂರಕ್ಕೆ ನೂರು ಸತ್ಯ ಎಂದಿದ್ದಾರೆ. ಜ್ಯೋತಿಷ್ಯದ ಪ್ರಕಾರ ದರ್ಶನ್ ಮುಂದೊಂದು ದಿನ ರಾಜಕೀಯಕ್ಕೆ ಧುಮುಕುವ ಸಾಧ್ಯತೆ ಕೂಡ ಇದೆ ಅಂದಿದ್ದಾರೆ. ಆದರೆ ಅದಕ್ಕೆ ದರ್ಶನ್ ಮನಸು ಮಾಡ್ತಿಲ್ಲ. ಮಾಡಿದರೆ ರಾಜಕೀಯದಲ್ಲಿ ದರ್ಶನ್ ಅವರಿಗೆ ವಜ್ರ ಖಚಿತ ಸಿಂಹಾಸನ ದಕ್ಕುವುದು ಗ್ಯಾರಂಟಿ ಎಂದು ಜೋತಿಷಿ ದಿನೇಶ್ ಭಟ್ ಅವರು ಹೇಳಿದ್ದಾರೆ.
ಇನ್ನೂ ದರ್ಶನ್ ಜೈಲು ಪಾಲಾಗಿದ್ದು ಇದು ಮೊದಲೇನಲ್ಲ. ಇಂದು ಮತ್ತು ಅಂದು. ದರ್ಶನ್ ಅವರಿಗೆ ಎರಡು ಬಾರಿ ಜೈಲಿನಲ್ಲಿದ್ದ ಅನುಭವ ಇದೆ. ಹಾಗಂಥ. ಇದು ಕೊನೆಯಲ್ಲ. ದಿನೇಶ್ ಭಟ್ ಅವರು ಹೇಳಿರುವ ಭವಿಷ್ಯದ ಪ್ರಕಾರ ಮುಂವರುವ ದಿನಗಳಲ್ಲಿ ದರ್ಶನ್‌ಗೆ ರಾಜಯೋಗ ಇದ್ದರೂ ಕೂಡ, ಕೆಲ ಕಷ್ಟಗಳು ಎದುರಾಗುತ್ತವೆ. ಇಷ್ಟೇ ಅಲ್ಲ.. ತನ್ನದಲ್ಲದ ತಪ್ಪಿಗೆ.. ಬೇರೆಯವರಿಗೆ ಉಪಕಾರ ಮಾಡಲು ಹೋಗಿ, ದರ್ಶನ್ ಭವಿಷ್ಯತ್ಕಾಲದಲ್ಲಿ ಮತ್ತೊಮ್ಮೆ ಜೈಲು ಸೇರುವ ಎಲ್ಲ ಸಾಧ್ಯತೆಯೂ ಇದೆ ಜ್ಯೋತಿಷಿ ದಿನೇಶ್ ಭಟ್ ಅವರು ಅಚ್ಚರಿ ಭವಿಷ್ಯವನ್ನ ನುಡಿದಿದ್ದಾರೆ.












Click it and Unblock the Notifications