ಈ ವರ್ಷವೇ ಆನ್‌ಲೈನ್‌ನಲ್ಲಿ ಅಸೋಸಿಯೇಟ್ ಡಿಗ್ರಿ ಕೊರ್ಸ್ ಆರಂಭ
ಬೆಂಗಳೂರು ಆಗಸ್ಟ್ 17: ಪ್ರತಿಷ್ಠಿತ ಶ್ರೀ ಜಯಚಾಮರಾಜೇಂದ್ರ ಸರ್ಕಾರಿ ಪಾಲಿಟೆಕ್ನಿಕ್ (ಎಸ್‌ಜೆಪಿ) ಮತ್ತು ಅಮೆರಿಕದ ಅಥೆನ್ಸ್ ಸ್ಟೇಟ್ ಯೂನಿವರ್ಸಿಟಿ ಮಧ್ಯೆ ಒಡಂಬಡಿಕೆ ಆಧಾರದಲ್ಲಿ 'ಅಸೋಸಿಯೇಟ್ ಡಿಗ್ರಿ ಕೋರ್ಸ್' ಆರಂಭಿಸುವ ಕುರಿತು ಬುಧವಾರ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್ ಪೂರ್ವಭಾವಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಥ್ ನಾರಾಯಣ್, ಮಾಡಿಕೊಂಡ ಒಪ್ಪಂದಂತೆ ಸೈಬರ್ ಸೆಕ್ಯೂರಿಟಿ, ಇಂಗ್ಲಿಷ್ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಕೋರ್ಸುಗಳ ಅಡಿ ಅಸೋಸಿಯೇಟ್ ಡಿಗ್ರಿ ಕೋರ್ಸುಗಳಲ್ಲಿ ಸಂಯೋಜಿತ ಅಸೋಸಿಯೇಟ್ ಡಿಗ್ರಿ ಆರಂಭಿಸುವ ಚಿಂತನೆ ಇದೆ. ಅಥೆನ್ಸ್ ವಿವಿ ಜತೆಗೆ ಡಲ್ಲಾಸ್ ಕಮ್ಯುನಿಟಿ ಕಾಲೇಜಿನ ಜತೆಗೂ ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿವೆ ಎಂದು ಅವರು ಹೇಳಿದರು.
ಎಲ್ಲವು ಅಂದುಕೊಂಡಂತೆ ಆದರೆ ಡಲ್ಲಾಸ್ ಕಮ್ಯುನಿಟಿ ಕಾಲೇಜಿನ ವಿದ್ಯಾರ್ಥಿಗಳು ನಮ್ಮಲ್ಲಿಗೆ ಬಂದು ಅಧ್ಯಯನ ಮಾಡಲು ಅವಕಾಶ ನೀಡಲಾಗುವುದು. ಅಥೆನ್ಸ್ ವಿವಿ ಈಗಾಗಲೇ ಕುವೆಂಪು ವಿವಿ ಮತ್ತು ಶ್ರೀ ಕೃಷ್ಣದೇವರಾಯ ವಿವಿ ಜತೆ ಒಪ್ಪಂದ ಮಾಡಿಕೊಂಡಿರುವುದಾಗಿ ಅವರು ತಿಳಿಸಿದರು.

ಆನ್‌ಲೈನ್ ಮೂಲಕ ಕೋರ್ಸ್ ಆರಂಭ
ಸೈಬರ್ ಸೆಕ್ಯೂರಿಟಿ ಪ್ರೋಗ್ರಾಮ್ ಕಾರ್ಯಕ್ರಮದಡಿಯಲ್ಲಿ ಎಸ್‌ಜೆಪಿ 24 ವಿದ್ಯಾರ್ಥಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಈ ವರ್ಷ ಆನ್‌ಲೈನ್ ಮೂಲಕ ಅಮೆರಿಕದ 8 ಕೋರ್ಸ್ ಆರಂಭಿಸಲಾಗುತ್ತಿದೆ. 2023-24ರ ಶೈಕ್ಷಣಿಕ ವರ್ಷದಲ್ಲಿ ಈ ವಿದ್ಯಾರ್ಥಿಗಳು ಅಥೆನ್ಸ್ ವಿಶ್ವವಿದ್ಯಾಲಯಕ್ಕೆ ತೆರಳಿ ವ್ಯಾಸಂಗ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಥೆನ್ಸ್ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಗುಣಮಟ್ಟದ ಇಂಗ್ಲೀಷ್ ಕಲಿಸಲು ಉತ್ಸುಕವಾಗಿದೆ. ಅದಕ್ಕಾಗಿ ತರಬೇತಿ ಕೇಂದ್ರವೊಂದನ್ನು ಸ್ಥಾಪನೆ ಮಾಡಲು ಅಥೆನ್ಸ ವಿಶ್ವವಿದ್ಯಾಲಯ ಆಸಕ್ತಿ ತೋರಿದೆ. ಕೌಶಲ್ಯ ಅಭಿವೃದ್ಧಿ ವಿಷಯದಲ್ಲಿ ಅಮೆರಿಕದ ಈ ಸಂಸ್ಥೆ
ಕೋರ್ಸ್, ಒಪ್ಪಂದ ಬಗ್ಗೆ ವಿಚಾರ ವಿನಿಮಯ
ಮಂಗಳವಾರ ಕರ್ನಾಟಕಕ್ಕೆ ಆಗಮಿಸಿರುವ ಅಮೆರಿಕದ ಅಧಿಕಾರಿಗಳ ನಿಯೋಗವು ಹತ್ತು ದಿನ ರಾಜ್ಯದಲ್ಲಿ ಇರಲಿದೆ. ಗುರುವಾರ ಶ್ರೀ ಜಯಚಾಮರಾಜೇಂದ್ರ ಸರ್ಕಾರಿ ಪಾಲಿಟೆಕ್ನಿಕ್ (ಎಸ್‌ಜೆಪಿ)ಗೆ ಭೇಟಿ ನೀಡಿ ಒಪ್ಪಂದ, ಕೋರ್ಸ್ ಇನ್ನಿತರ ಅಂಶಗಳ ಜತೆಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ನಂತರ ಆಗಸ್ಟ್ 22ರಂದು ಕೃಷ್ಣದೇವರಾಯ ವಿಶ್ವವಿದ್ಯಾಲಯ ಕುಲಪತಿ ಜೊತೆ ಚರ್ಚೆ, ಆ.23ರಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ ಅವರೊಂದಿಗೆ ಚರ್ಚೆಗಳು ನಡೆಯಲಿವೆ ಎಂದು ಅಶ್ವಥ್ ನಾರಾಯಣ್ ವಿವರಿಸಿದರು.

ಅಮೆರಿಕದ ನಿಯೋಗವು ಆ.21ರ ಭಾನುವಾರ ವಿಶ್ವವಿಖ್ಯಾತ ಹಂಪಿ ಪ್ರವಾಸಿ ತಾಣಕ್ಕೆ ತೆರಳಿ ಅಲ್ಲಿನ ಐತಿಹಾಸಿಕ ಸ್ಥಳ ವೀಕ್ಷಿಸಲಿದೆ. ಸಭೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್, ನಿರ್ದೇಶಕ ಅಪ್ಪಾಜಿ ಗೌಡ, ಹೆಚ್ಚುವರಿ ನಿರ್ದೇಶಕ ಅಶೋಕ್ ಬಿ. ರೇವಣಕರ್, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು, ಜಂಟಿ ನಿರ್ದೇಶಕರು, ಸಲಹೆಗಾರರು ಹಾಗೂ ಅಥೆನ್ಸ್ ಸ್ಟೇಟ್ ಯೂನಿವರ್ಸಿಟಿ ಮುಖ್ಯಸ್ಥ ಫಿಲಿಫ್ ಕೆ.ವೇ. ಉಪಸ್ಥಿತರಿದ್ದರು.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications