ಲೋಕಸಭೆ ಚುನಾವಣೆ ಮುಗಿದ ಆರೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ: ಭವಿಷ್ಯ ನುಡಿದ ಬಿಜೆಪಿ ನಾಯಕ
ಮಂಗಳೂರು, ಮಾರ್ಚ್ 18: ಲೋಕಸಭೆ ಚುನಾವಣೆ ಮುಗಿದ ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತೆ ಎಂದು ನಮಗೆ ನೂರಕ್ಕೆ ನೂರು ವಿಶ್ವಾಸವಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರುತ್ತದೆ ತಯರಾಗಿ. ಈ ಬಗ್ಗೆ ನಮಗೆ ಅತ್ಯಂತ ಸ್ಪಷ್ಟ ವಿಶ್ವಾಸವಿದೆ ಎಂದು ಪದಾಧಿಕಾರಿಗಳ ಸಭೆಯಲ್ಲಿ ಅವರು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ಒಂದೂವರೆ ತಿಂಗಳಿಂದ ಬಿಜೆಪಿಯ ಮತಗಟ್ಟೆಯ ಕಾರ್ಯಗಳು ಪ್ರಾರಂಭವಾಗಿದೆ. ಜಿಲ್ಲೆಯ ಎಲ್ಲಾ ಬೂತ್ ಮಟ್ಟದ ಸಭೆಗಳು, ಶಕ್ತಿಕೇಂದ್ರ ಮಹಾಶಕ್ತಿ ಕೇಂದ್ರದ ಸಭೆಗಳು ಮುಗಿದಿವೆ ನಮ್ಮ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಒಂದು ಸುತ್ತಿನ ಪ್ರವಾಸ ಮುಗಿಸಿದ್ದಾರೆ. ಹಿಂದಿನ ಎಲ್ಲಾ ದಾಖಲೆ ಮುರಿದು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಬಂಡಾಯ ಸರಿಯಾಗುತ್ತದೆ. ರಾಜಕೀಯ ಪಾರ್ಟಿಯಲ್ಲಿ ಇರುವಂತದ್ದೇ. ನಮ್ಮಲ್ಲಿ ಎಲ್ಲಾ ಕಾರ್ಯಕರ್ತರ ಮನಸ್ಸು ಒಂದೇ ರೀತಿಯಿದೆ. ಮೋದಿಯವರ ಗೆಲುವಿಗಾಗಿ ನಾವು ಪರಿಶ್ರಮ ಪಡುತ್ತಿದ್ದೇವೆ. ಮೂರುವರೆ ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಲು ಪೂರ್ಣ ಪರಿಶ್ರಮ ಹಾಕುತ್ತೇನೆ. ರಾಷ್ಟ್ರೀಯ ನಾಯಕರ ಸೂಚನೆಗೆ ಅನುಕೂಲವಾಗಿ ಕೆಲಸ ಮಾಡುತ್ತೇನೆ. ಅವರು ಹೇಳಿದ ಕಡೆಗಳಲ್ಲಿ ಪ್ರವಾಸ ಮಾಡುತ್ತೇನೆ ಸಂಘಟನಾ ಕಾರ್ಯ ವಿಸ್ತರಣೆ ಮಾಡುತ್ತೇನೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು












Click it and Unblock the Notifications