2018ರ ಚುನಾವಣೆ ತಯಾರಿ, ಜೆಡಿಎಸ್ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

Posted By: Gururaj
Subscribe to Oneindia Kannada

ಬೆಂಗಳೂರು, ಆಗಸ್ಟ್ 29 : ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಕರ್ನಾಟಕ ಜೆಡಿಎಸ್ 136 ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬಂದಿರುವ ಎಚ್.ವಿಶ್ವನಾಥ್ ಅವರನ್ನು ಪ್ರಚಾರ ಸಮಿತಿ ಮತ್ತು ಚಿಂತನಾ ವಿಭಾಗಕ್ಕೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು. 25 ರಾಜ್ಯಉಪಾಧ್ಯಕ್ಷರು, 26 ಪ್ರಧಾನ ಕಾರ್ಯದರ್ಶಿಗಳು, 12 ಕಾರ್ಯದರ್ಶಿಗಳು, 25 ಜಂಟಿ ಕಾರ್ಯದರ್ಶಿಗಳು ಮತ್ತು 47 ಸಂಘಟನಾ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.

ಕಾಂಗ್ರೆಸ್ ತೊರೆಯಲು ಸಿದ್ದರಾಮಯ್ಯನವರೇ ಕಾರಣ -ವಿಶ್ವನಾಥ್

ಮಾಧ್ಯಮಗಳ ಜೊತೆ ಮಾತನಾಡಿದ ದೇವೇಗೌಡ, 'ಸೆಪ್ಟೆಂಬರ್ 22 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪರಿಶಿಷ್ಟ ಜಾತಿ/ಪಂಗಡದ ಸಮಾವೇಶ ನಡೆಸಲಾಗುತ್ತದೆ. ಅಕ್ಟೋಬರ್‌ನಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಸಮಾವೇಶ ಆಯೋಜಿಸಲಾಗುತ್ತದೆ' ಎಂದರು.

ಅಮಿತ್ ಶಾ ಕರ್ನಾಟಕಕ್ಕೆ ಬಂದ ಕಾರಣ ಬಿಚ್ಚಿಟ್ಟ ಎಚ್‌ಡಿಕೆ!

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಇಸ್ರೇಲ್ ಪ್ರವಾಸದಲ್ಲಿದ್ದು, ಅವರ ಅನುಪಸ್ಥಿತಿಯಲ್ಲಿಯೇ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಜೆಡಿಎಸ್ ಚುನಾವಗೆ ಅಧಿಕೃತ ತಯಾರಿ ಆರಂಭಿಸಿದೆ...

ಮಂಡ್ಯ : ರವೀಂದ್ರ ಶ್ರೀಕಂಠಯ್ಯ ಜೆಡಿಎಸ್‌ ಸೇರ್ಪಡೆ?

ಪ್ರಚಾರ ಸಮಿತಿಗೆ ಎಚ್.ವಿಶ್ವನಾಥ್

ಪ್ರಚಾರ ಸಮಿತಿಗೆ ಎಚ್.ವಿಶ್ವನಾಥ್

ಪ್ರಚಾರ ಸಮಿತಿ ಮತ್ತು ಚಿಂತನಾ ವಿಭಾಗಕ್ಕೆ ಎಚ್.ವಿಶ್ವನಾಥ್, ಸಂಸದೀಯ ಮಂಡಳಿಗೆ ಬಂಡೆಪ್ಪ ಕಾಶೆಂಪುರ. ರಾಜಕೀಯ ವ್ಯವಹಾರ ಸಮಿತಿಗೆ ಎಚ್.ಸಿ.ನೀರಾವರಿ, ಕಾನೂನು ವಿಭಾಗಕ್ಕೆ ಎ.ಪಿ.ರಂಗನಾಥ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಬೆಂಗಳೂರು ನಗರ ಉಸ್ತುವಾರಿ ಸಮಿತಿ

ಬೆಂಗಳೂರು ನಗರ ಉಸ್ತುವಾರಿ ಸಮಿತಿ

ಬೆಂಗಳೂರು ನಗರ ಮೇಲುಸ್ತುವಾರಿ ಸಮಿತಿಗೆ ಕುಪೇಂದ್ರ ರೆಡ್ಡಿ ಅವರು ಅಧ್ಯಕ್ಷರಾಗಿದ್ದಾರೆ. ಟಿ.ಎ.ಶರವಣ, ಗೋಪಾಲಯ್ಯ, ಆರ್.ಪ್ರಕಾಶ್, ಅನ್ವರ್ ಶರೀಫ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಎಲ್ಲಾ ಜಾತಿ/ಧರ್ಮದವರಿಗೂ ಅವಕಾಶ

ಎಲ್ಲಾ ಜಾತಿ/ಧರ್ಮದವರಿಗೂ ಅವಕಾಶ

'ಪದಾಧಿಕಾರಿಗಳ ಪಟ್ಟಿಯಲ್ಲಿ ಎಲ್ಲಾ ಜಾತಿ/ಧರ್ಮದ ಮುಖಂಡರಿಗೂ ಅವಕಾಶ ನೀಡಲಾಗಿದೆ' ಎಂದು ದೇವೇಗೌಡರು ಹೇಳಿದರು. ಮಹಿಳಾ ಘಟಕ್ಕೆ ಅರ್ಷಿಯಾ ಅಲಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದು, ಪ್ರಭಾವತಿ ಜಯರಾಂ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಜಿಲ್ಲಾ ಉಸ್ತುವಾರಿಗಳ ಪಟ್ಟಿ

ಜಿಲ್ಲಾ ಉಸ್ತುವಾರಿಗಳ ಪಟ್ಟಿ

* ಜಿ.ಟಿ.ದೇವೇಗೌಡ : ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು
* ಬಿ.ಬಿ.ನಿಂಗಯ್ಯ : ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ
* ಎನ್.ಎಚ್.ಕೋನರೆಡ್ಡಿ : ರಾಯಚೂರು, ಯಾದಗಿರಿ, ಬೀದರ್, ಕಲಬುರಗಿ

ಯಾವ ಜಿಲ್ಲೆಗೆ ಯಾರು?

ಯಾವ ಜಿಲ್ಲೆಗೆ ಯಾರು?

* ಮನೋಹರ್ : ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ
* ಆಲ್ಕೋಡ ಹನುಮಂತಪ್ಪ : ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ
* ಪಟೇಲ್ ಶಿವರಾಂ : ತುಮಕೂರು, ಹಾಸನ, ಚಿಕ್ಕಮಗಳೂರು, ರಾಮನಗರ
* ಕಾಂತರಾಜ್ : ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಕೊಪ್ಪಳ, ಬಳ್ಳಾರಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Janata Dal (Secular) supremo HD Deve Gowda announced district in-charge list for upcoming Karnataka assembly elections 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ