ಕರ್ನಾಟಕ ಕದನ 2018 : ಜಿದ್ದಾಜಿದ್ದಿನ ಹೋರಾಟ ನಿರೀಕ್ಷೆಯ ಕಣಗಳು
ಬೆಂಗಳೂರು, ಮೇ 10: ಕರ್ನಾಟಕದಲ್ಲಿ ಅಬ್ಬರ ಚುನಾವಣಾ ಪ್ರಚಾರ, ಆಶ್ವಾಸನೆಗಳ ಸುರಿಮಳೆಗಳ ನಡುವೆ ರಾಜ್ಯವು ಮತದಾನಕ್ಕೆ ಸಜ್ಜಾಗಿದೆ.
224 ವಿಧಾನಸಭಾ ಕ್ಷೇತ್ರಗಳ ಪೈಕಿ 223ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 12ರಂದು ಮತದಾನವಾಗಲಿದೆ.
ಜಿದ್ದಾಜಿದ್ದಿನ ಹೋರಾಟ ನಿರೀಕ್ಷೆ ಇರುವ ಕ್ಷೇತ್ರ
1. ಚಾಮುಂಡೇಶ್ವರಿ : ಸಿಎಂ ಸಿದ್ದರಾಮಯ್ಯ V/S ಜಿ.ಟಿ.ದೇವೇಗೌಡ
2. ಚನ್ನಪಟ್ಟಣ : ಎಚ್.ಡಿ.ಕುಮಾರಸ್ವಾಮಿ V/S ಎಚ್.ಎಂ ರೇವಣ್ಣ V/S ಸಿ.ಪಿ. ಯೋಗೀಶ್ವರ್
3. ವಿಜಯನಗರ(ಹೊಸಪೇಟೆ) : ಆನಂದ್ ಸಿಂಗ್ V/S ಗವಿಯಪ್ಪ
4. ಹುಬ್ಬಳ್ಳಿ-ಧಾರವಾಡ ಕೇಂದ್ರ : ಜಗದೀಶ್ ಶೆಟ್ಟರ್ V/S ಡಾ. ಮಹೇಶ್ ಸಿ.ನಲ್ವಾಡ್
5. ಮೊಳಕಾಲ್ಮೂರು : ಶ್ರೀರಾಮುಲು V/S ಡಾ. ಬಿ. ಯೋಗೇಶ್ ಬಾಬು
6. ಅಥಣಿ : ಲಕ್ಷ್ಮಣ್ ಸವದಿ V/S ಮಹೇಶ್ ಈರನಗೌಡ ಕುಮಟಳ್ಳಿ
7. ಬಬಲೇಶ್ವರ : ಎಂ.ಬಿ. ಪಾಟೀಲ್ V/S ವಿ.ಜೂ ಗೌಡ ಪಾಟೀಲ್
8. ತೇರದಾಳ : ಸಿದ್ದು ಸವದಿ ವಿರುದ್ಧ ಉಮಾಶ್ರೀ
9. ಚಿಕ್ಕಮಗಳೂರು : ಸಿ.ಟಿ.ರವಿ V/S ಬಿ.ಎಲ್. ಶಂಕರ್
10. ಬೆಳಗಾವಿ ಗ್ರಾಮೀಣ: ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಶಿವನಗೌಡ ಎಸ್ ವಿರುದ್ಧ ಸಂಜಯ್ ಪಾಟೀಲ್
11. ಬಾಗೇಪಲ್ಲಿ : ಸಾಯಿ ಕುಮಾರ್ ವಿರುದ್ಧ ಸಿ ಮನೋಹರ್ ವಿರುದ್ಧ ಸುಬ್ಬಾರೆಡ್ಡಿ ವಿರುದ್ಧ ಶ್ರೀರಾಮರೆಡ್ಡಿ
12. ಸೊರಬ : ಮಧು ಬಂಗಾರಪ್ಪ ವಿರುದ್ಧ ಕುಮಾರ ಬಂಗಾರಪ್ಪ
13. ಸಾಗರ : ಕಾಗೋಡು ತಿಮ್ಮಪ್ಪ ವಿರುದ್ಧ ಹರತಾಳು ಹಾಲಪ್ಪ
14. ಬಸವಕಲ್ಯಾಣ: ಮಲ್ಲಿಕಾರ್ಜುನ ಖೂಬಾ ವಿರುದ್ಧ ಪಿಜಿಆರ್ ಸಿಂಧ್ಯಾ
15 ಅರಕಲಗೂಡು : ಎಚ್ ಯೋಗರಮೇಶ್ ವಿರುದ್ಧ ಅರಕಲಗೂಡು ಮಂಜು ವಿರುದ್ಧ ಎ.ಟಿ ರಾಮಸ್ವಾಮಿ

ಕ್ಷೇತ್ರದಲ್ಲೂ ಜಿದ್ದಾಜಿದ್ದಿನ ಪೈಪೋಟಿ ಇದೆ
ಅಭ್ಯರ್ಥಿಗಳ ಪ್ರಭಾವ, ಹಾಲಿ ಶಾಸಕರು, ಸಚಿವರು ಮುಂತಾದ ಅಂಶಗಳನ್ನು ಪರಿಗಣಿಸಿ ಜಿದ್ದಾಜಿದ್ದಿನ ಕ್ಷೇತ್ರಗಳನ್ನು ಆಯ್ಕೆ ಮಾಡಲಾಗಿದೆ. ಈ ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದ ಕ್ಷೇತ್ರದಲ್ಲೂ ಜಿದ್ದಾಜಿದ್ದಿನ ಪೈಪೋಟಿ ಇದೆ ಎಂದ ಅನ್ನಿಸಿದರೆ ಓದುಗರು ಕಮೆಂಟ್ ಮೂಲಕ ತಿಳಿಸಬಹುದಾಗಿದೆ.

ಚಾಮುಂಡೇಶ್ವರಿ ಜಿದ್ದಾಜಿದ್ದಿನ ಹೋರಾಟ
1. ಚಾಮುಂಡೇಶ್ವರಿ : ಸಿಎಂ ಸಿದ್ದರಾಮಯ್ಯ V/S ಜಿ.ಟಿ.ದೇವೇಗೌಡ
ಸಿದ್ದರಾಮಯ್ಯ ಜೊತೆಗಿನ ಸ್ನೇಹ ಕಡಿದುಕೊಂಡ ಜಿ.ಟಿ.ದೇವೇಗೌಡರು ಬಿಜೆಪಿ ಸೇರಿದರು. ನಂತರ ಜೆಡಿಎಸ್ ಪಕ್ಷಕ್ಕೆ ಸೇರಿದರು. 2013ರ ಚುನಾವಣೆಯಲ್ಲಿ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ಕ್ಷೇತ್ರದಲ್ಲಿ 2.5 ಲಕ್ಷ ಮತದಾರರಿದ್ದು ಇದರಲ್ಲಿ 70,000 ಒಕ್ಕಲಿಗ ಮತಗಳಿವೆ. ದೇವೇಗೌಡರು ಒಕ್ಕಲಿಗರ ಕಣ್ಮಣಿಯಾಗಿ ಕ್ಷೇತ್ರದಲ್ಲಿ ಮೂಡಿ ಬಂದಿರುವುದು ಸಿಎಂ ಗೆಲುವಿಗೆ ತೊಡರುಗಾಲು ಆಗಬಹುದು ಎನ್ನಲಾಗಿದೆ.

ಚನ್ನಪಟ್ಟಣ ಜಿದ್ದಾಜಿದ್ದಿನ ಹೋರಾಟ
2. ಚನ್ನಪಟ್ಟಣ : ಎಚ್.ಡಿ.ಕುಮಾರಸ್ವಾಮಿ V/S ಎಚ್.ಎಂ ರೇವಣ್ಣ V/S ಸಿ.ಪಿ. ಯೋಗೀಶ್ವರ್
ಬೊಂಬೆನಾಡು ಚನ್ನಪಟ್ಟಣದಲ್ಲಿ ಸದ್ಯ ಸಿ.ಪಿ ಯೋಗೇಶ್ವರ ಅವರು ಹಾಲಿ ಶಾಸಕ. ಒಕ್ಕಲಿಗ ಮತದಾರರೇ ಇಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ.
ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ನಿಂದ ಎಚ್.ಎಂ.ರೇವಣ್ಣ, ಜೆಡಿಎಸ್ನಿಂದ ಎಚ್.ಡಿ.ಕುಮಾರಸ್ವಾಮಿ ಕಣದಲ್ಲಿದ್ದಾರೆ
2013 ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ ಸಿ.ಪಿ ಯೋಗೇಶ್ವರ್ 80,099 ಮತ ಪಡೆದು ಜಯಭೇರಿ ಗಳಿಸಿದ್ದರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ 73,635 ಮತ ಪಡೆದು ಗೆಲುವಿನಿಂದ ವಂಚಿತರಾಗಿದ್ದರು.

ವಿಜಯನಗರ (ಹೊಸಪೇಟೆ) ಕದನ
3. ವಿಜಯನಗರ (ಹೊಸಪೇಟೆ) : ಆನಂದ್ ಸಿಂಗ್ V/S ಗವಿಯಪ್ಪ
ಹೊಸಪೇಟೆ ಕ್ಷೇತ್ರದ ಶಾಸಕ ಆನಂದ್ ಸಿಂಗ್. ಮೂಲತಃ ಗಣಿ ಉದ್ಯಮಿ. ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ವಿಜಯನಗರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು, ಮತ್ತೆ ಸ್ಪರ್ಧೆಗೆ ಇಳಿದಿರುವ ಮಾಜಿ ಶಾಸಕ ಬಿ.ಎಸ್.ಆನಂದ್ ಸಿಂಗ್ ಹೊಸಪೇಟೆ ನಿವಾಸಿ. ಅವರು ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದು, ಹ್ಯಾಟ್ರಿಕ್ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಆನಂದ್ ಸಿಂಗ್ ಅವರ ಸೋದರ ದೀಪಕ್ ಸಿಂಗ್ ಅವರು ಜೆಡಿಎಸ್ ನಿಂದ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ಕ್ಷೇತ್ರದ ಹಿರಿಯ ರಾಜಕಾರಣಿ ಗವಿಯಪ್ಪ ಸ್ಪರ್ಧೆಯಲ್ಲಿದ್ದಾರೆ.

ಹುಬ್ಬಳ್ಳಿ-ಧಾರವಾಡ ಕೇಂದ್ರ ಜಿದ್ದಾಜಿದ್ದಿನ ಹೋರಾಟ
4. ಹುಬ್ಬಳ್ಳಿ-ಧಾರವಾಡ ಕೇಂದ್ರ : ಜಗದೀಶ್ ಶೆಟ್ಟರ್ V/S ಡಾ. ಮಹೇಶ್ ಸಿ.ನಲ್ವಾಡ್
ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಮರು, ಹಿಂದುಳಿದವರು, ದಲಿತರು, ಪಟ್ಟೇಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈದ್ಗಾ ಮೈದಾನದ ವಿವಾದ ಮತ್ತು ಎಲ್.ಕೆ.ಅಡ್ವಾಣಿ ಅವರ ರಥಯಾತ್ರೆ ಬಳಿಕ ಕ್ಷೇತ್ರದಲ್ಲಿ ಕಮಲ ಅರಳಿತು. ಬಿಜೆಪಿ ನಾಯಕರೂ ನಂತರ ಕ್ಷೇತ್ರವನ್ನು ಭದ್ರಕೋಟೆ ಮಾಡಿಕೊಂಡಿದ್ದಾರೆ.
1994ರ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದಲ್ಲಿ ಜನತಾದಳದಿಂದ ಶೆಟ್ಟರ್ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಡಾ.ಮಹೇಶ್ ನಲವಾಡ್ ಕಳೆದ ಬಾರಿ 40,447 ಮತಗಳ ಅಂತರದಿಂದ ಸೋಲು ಕಂಡಿದ್ದರು. ಜೆಡಿಎಸ್ ಪಕ್ಷ ರಾಜಣ್ಣ ಕೊರವಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. 2008ರಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಿದ್ದರು. 2013ರಲ್ಲಿ ಸ್ಪರ್ಧಿಸಿರಲಿಲ್ಲ.
ಆಮ್ ಆದ್ಮಿ ಪಕ್ಷ ಏರೋನಾಟಿಕಲ್ ಇಂಜಿನಿಯರ್ ಸಂತೋಷ್ ನರಗುಂದ ಅವರನ್ನು ಅಭ್ಯರ್ಥಿ

ಮೊಳಕಾಲ್ಮೂರು ಕದನ
ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎಸ್.ತಿಪ್ಪೇಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಹಾಲಿ ಜಿಪಂ ಸದಸ್ಯ ಡಾ. ಯೋಗೀಶ್ ಬಾಬು ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ, ಹಾಲಿ ಶಾಸಕ ತಿಪ್ಪೇಸ್ವಾಮಿ, ಬಿಎಸ್ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.












Click it and Unblock the Notifications