Get Updates
Get notified of breaking news, exclusive insights, and must-see stories!

ಚುನಾವಣಾ ಫಲಿತಾಂಶ: ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯ

ಬೆಂಗಳೂರು, ಮೇ 2: ದೇಶದಲ್ಲಿ ಕುತೂಹಲ ಮೂಡಿಸಿದ್ದ, ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಕುರಿತು ಮಾಜಿ ಸಿಎಮ ಸಿದ್ದರಾಮಯ್ಯ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

"ದೇಶದಲ್ಲಿ ಬಿಜೆಪಿಯ ಅವನತಿಯ ಪರ್ವ ಶುರುವಾಗಿದ್ದು, ಪಶ್ಚಿಮ‌ ಬಂಗಾಳದಲ್ಲಿ‌ ದುಡ್ಡು,‌ ಅಧಿಕಾರ, ತೋಳ್ಬಲ ಮತ್ತು ವಾಮಮಾರ್ಗದ ಮೂಲಕ‌ ಸ್ವಲ್ಪಮಟ್ಟಿಗೆ ಬಲವನ್ನು ಹೆಚ್ಚಿಸಿಕೊಂಡರೂ ಗೆಲುವಿನ‌ ದಡ‌ದ ಸಮೀಪಕ್ಕೆ ಬರಲಾಗದೆ ಮುಖಭಂಗ ಅನುಭವಿಸಿದೆ'' ಎಂದಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಹಟದಿಂದ‌ ಬಿಜೆಪಿ ಕೊರೊನಾ‌ ಸೋಂಕಿನ‌ ಅಪಾಯವನ್ನೂ ಧಿಕ್ಕರಿಸಿ, ಚುನಾವಣಾ ಆಯೋಗದ ಮೇಲೆ‌ ಒತ್ತಡ ಹೇರಿ ಅಲ್ಲಿ ಚುನಾವಣೆಯನ್ನು ಘೋಷಿಸಿತ್ತು. ಸೋಲಿನ‌ ಹೊಣೆಯ ಜೊತೆ ಕೊರೊನಾದಿಂದ ಪ್ರಾಣ ಕಳೆದುಕೊಂಡ ಅಮಾಯಕ‌ ಜನರ ಸಾವಿನ ಹೊಣೆಯನ್ನೂ ಪ್ರಧಾನಿ ನರೇಂದ್ರ ಮೋದಿ‌ ಮತ್ತು ಗೃಹ ಸಚಿವ ಅಮಿತ್ ಶಾ ಹೊರಬೇಕಾಗುತ್ತದೆ ಎಂದು ಹೇಳಿದರು.

ಮಮತಾ ಬ್ಯಾನರ್ಜಿ‌ ಏಕಾಂಗಿ ಹೋರಾಟ

ಮಮತಾ ಬ್ಯಾನರ್ಜಿ‌ ಏಕಾಂಗಿ ಹೋರಾಟ

""ತಾನು ದೇಶದ ಪ್ರಧಾನಿ ಎನ್ನುವುದನ್ನೇ ಮರೆತು, ಪೂರ್ಣಾವಧಿ ಬಿಜೆಪಿಯ ನಾಯಕನ ರೀತಿ, ಅಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ನರೇಂದ್ರ ಮೋದಿಯವರಿಗೆ ಏಕಾಂಗಿಯಾಗಿ ಹೋರಾಟ ನಡೆಸಿದ್ದ ಮಮತಾ ಬ್ಯಾನರ್ಜಿ‌ ಮರ್ಮಾಘಾತ ನೀಡಿದ್ದಾರೆ. ಇದೇ ವೇಳೆ ಪಶ್ಚಿಮ ಬಂಗಾಳದ ಗೆಲುವಿನ ರೂವಾರಿ‌ ಮಮತಾ ಬ್ಯಾನರ್ಜಿ ಅವರಿಗೆ ನನ್ನ ಅಭಿನಂದನೆಗಳು.''

""ತಮಿಳುನಾಡು ಮತ್ತು ಕೇರಳ ರಾಜ್ಯಗಳ ಮತದಾರರು ಬಿಜೆಪಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ ಮತ್ತು ಕೇರಳದಲ್ಲಿ ಎಲ್‌ಡಿಎಫ್ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಅಲ್ಲಿನ‌ ಗೆಲುವಿನ ರೂವಾರಿಗಳಾದ ಎಂ.ಕೆ‌ ಸ್ಟಾಲಿನ್ ಮತ್ತು ಪಿಣರಾಯಿ ವಿಜಯನ್ ಅವರಿಗೂ ನನ್ನ ಅಭಿನಂದನೆಗಳು. ನಿರೀಕ್ಷೆಯಂತೆ ಅಸ್ಸಾಂ‌ ಮತ್ತು ಪುದುಚೇರಿ ರಾಜ್ಯಗಳ ಗೆಲುವಷ್ಟೇ ಸೋತು ಹೋದ ಬಿಜೆಪಿಗೆ ಸಿಕ್ಕಿರುವ ಸಮಾಧಾನಕರ ಬಹುಮಾನ.''

ಜಾತ್ಯತೀತ ಮತಗಳ ವಿಂಗಡಣೆ

ಜಾತ್ಯತೀತ ಮತಗಳ ವಿಂಗಡಣೆ

ಪಶ್ಚಿಮ ಬಂಗಾಳದಲ್ಲಿ‌ ಕಾಂಗ್ರೆಸ್ ಮತ್ತು ಎಡಪಕ್ಷಗಳ ಜೊತೆಗಿನ ಮೈತ್ರಿಕೂಟಕ್ಕೆ ಹಿನ್ನಡೆಯಾಗಿರುವುದು ನಿಜ. ಆ ರಾಜ್ಯದ ಜಾಗೃತ ಮತದಾರರು ಜಾತ್ಯತೀತ ಮತಗಳ ವಿಂಗಡಣೆಯಾಗಿ ಬಿಜೆಪಿಗೆ ಲಾಭವಾಗಬಾರದು ಮತ್ತು ದೇಶ ಕಂಟಕ ಬಿಜೆಪಿಯನ್ನು ಸೋಲಿಸಲೇಬೇಕೆಂದು ಟಿಎಂಸಿಗೆ ಸಾರಾಸಗಟಾಗಿ ಮತ ಹಾಕಿದಂತಿದೆ.‌

ದುಡ್ಡು ಮತ್ತು ಅಧಿಕಾರದ ಬಲದಿಂದ ಚುನಾವಣೆಯನ್ನು ಗೆಲ್ಲಬಹುದೆಂಬ ಅವರ ಕುತಂತ್ರದ ರಾಜಕಾರಣಕ್ಕೆ ಈ ಚುನಾವಣೆಗಳು ದೊಡ್ಡ ಹೊಡೆತ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಿಂದಿನ ಚುನಾವಣೆಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಿರುವುದು ನಿಜವಾದರೂ, ಆ ಎಲ್ಲ ಸ್ಥಾನಗಳು "ಆಪರೇಷನ್ ಕಮಲ'ದ ಫಲವಾಗಿದೆ.

ಬಿಜೆಪಿಗೆ ಯಾವ ಐಡಿಯಾಲಜಿಯೂ ಇಲ್ಲ

ಬಿಜೆಪಿಗೆ ಯಾವ ಐಡಿಯಾಲಜಿಯೂ ಇಲ್ಲ

ತಮ್ಮ ನಿಯಂತ್ರಣದಲ್ಲಿರುವ ಸಿಬಿಐ,‌ ಐಟಿ ಮತ್ತು‌ ಇಡಿ ಮೂಲಕ ಟಿಎಂಸಿ ನಾಯಕರನ್ನು ಹೆದರಿಸಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡ ಮೋದಿ-ಶಾ ಜೋಡಿ ಅವರನ್ನೇ ಬಳಸಿಕೊಂಡು ಚುನಾವಣೆಯನ್ನು ಎದುರಿಸಿದೆ. ಟಿಎಂಸಿ ಸರ್ಕಾರದಲ್ಲಿದ್ದ ಭ್ರಷ್ಟ ಮುಕುಲ್ ರಾಯ್, ಸುವೇಂದು ಅಧಿಕಾರಿಯಂತಹವರು ಈಗ ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು.

ಬಿಜೆಪಿ ಬಾಯಿಬಿಟ್ಟರೆ ಐಡಿಯಾಲಜಿ ಬಗ್ಗೆ ಮಾತನಾಡುತ್ತದೆ. ಪಕ್ಷಾಂತರ ಮಾಡಿಕೊಳ್ಳುವಾಗ ಇವರಿಗೆ ಯಾವ ಐಡಿಯಾಲಜಿಯೂ ಇಲ್ಲ. ಪಶ್ಚಿಮ‌ ಬಂಗಾಳದಲ್ಲಿ ಬಿಜೆಪಿ ಹಣದ ಹೊಳೆಯನ್ನೇ ಹರಿಸಿದೆ. ಹೀಗಿದ್ದರೂ ಪಶ್ಚಿಮ ಬಂಗಾಳದ ಮತದಾರರು ಹಣದ ಆಮಿಷಕ್ಕೆ ಒಳಗಾಗದೇ, ಬಿಜೆಪಿಯ ಹಿಂಸಾತ್ಮಕ ಒತ್ತಡಕ್ಕೆ‌ ಪೂರ್ಣವಾಗಿ ಮಣಿದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಕೋಮುವಾದಿ ರಾಜಕಾರಣವನ್ನು ಪುರಸ್ಕರಿಸಿಲ್ಲ

ಕೋಮುವಾದಿ ರಾಜಕಾರಣವನ್ನು ಪುರಸ್ಕರಿಸಿಲ್ಲ

ದಕ್ಷಿಣದ ರಾಜ್ಯಗಳು ಎಂದೂ ಕೂಡಾ ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ಪುರಸ್ಕರಿಸಿಲ್ಲ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬಿಜೆಪಿಗೆ ಇಲ್ಲಿಯವರೆಗೆ ಸ್ವಂತ ಬಲದಿಂದ ಅಧಿಕಾರ ಹಿಡಿಯಲಾಗಿಲ್ಲ. ಕರ್ನಾಟಕದಲ್ಲಿಯೂ ಬಿಜೆಪಿ ಅಧಿಕಾರ ಗಳಿಸಿದ್ದು ಪಾಪದ ಹಣದಿಂದ ನಡೆಸಿದ "ಆಪರೇಷನ್ ಕಮಲ' ಎಂಬ ಅಡ್ಡಮಾರ್ಗದ ಮೂಲಕ.

ಕೇರಳದಲ್ಲಿ ಈ ಬಾರಿ‌ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರುವ ಎಲ್ಲ ಸೂಚನೆಗಳಿತ್ತು. ಬಹುಶಃ ಕೊರೊನಾ ಕಾಲದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಸಾಧನೆಯ ಪರವಾಗಿ ಅಲ್ಲಿನ‌ ಜನತೆ ಮತ ಹಾಕಿದಂತಿದೆ.

ವಿಜಯೇಂದ್ರಗೆ ಮುಖಭಂಗ

ವಿಜಯೇಂದ್ರಗೆ ಮುಖಭಂಗ

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಿಂದ ಹಿಡಿದು ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯವರೆಗೆ ಎಲ್ಲ‌ ಕಡೆ ಜನ ಬಿಜೆಪಿಯನ್ನು ತಿರಸ್ಕರಿಸುತ್ತಿರುವುದು ಮುಂದಿನ ರಾಜಕೀಯ ಬೆಳವಣಿಗೆಯ ದಿಕ್ಸೂಚಿಯಾಗಿದೆ.

ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಆಪರೇಷನ್ ಕಮಲಕ್ಕೆ ಈ ಮೂಲಕ ಅಲ್ಲಿಯ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಜೊತೆಗೆ ಚುನಾವಣಾ ಚಾಣಕ್ಯ ಎಂದು ಮಾಧ್ಯಮಮಗಳ ಮೂಲಕ ಹೊಗಳಿಸಿಕೊಂಡಿದ್ದ ವಿಜಯೇಂದ್ರ ಮತ್ತವರ ಹಣದ ಥೈಲಿಗೆ ಮತದಾರರು ಮಣೆ ಹಾಕಿಲ್ಲ ಎಂಬುದು ಸಾಬೀತಾಗಿದೆ. ಮಸ್ಕಿ ಕ್ಷೇತ್ರದ ಮತದಾರರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

ಸತೀಶ್ ಜಾರಕಿಹೊಳಿ ಅವರು ಗೆಲ್ಲುವ ವಿಶ್ವಾಸವಿತ್ತು

ಸತೀಶ್ ಜಾರಕಿಹೊಳಿ ಅವರು ಗೆಲ್ಲುವ ವಿಶ್ವಾಸವಿತ್ತು

"ಬಸವಕಲ್ಯಾಣ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿ ಕಣಕ್ಕಿಳಿಸಿದ್ದರಿಂದ, ಈಶ್ವರ ಖಂಡ್ರೆ ಅವರು ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿದ್ದರಿಂದ ಹಾಗೂ ಹಲವು ಕಾರಣಗಳಿಂದ ಸೋಲಾಯಿತು. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 4 ಲಕ್ಷ ಮತಗಳಿಂದ ಸೋತಿತ್ತು. ಈ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಗೆಲ್ಲುವ ವಿಶ್ವಾಸ ಇತ್ತು. ಆದರೂ ಅವರು ಭಾರಿ ಹೋರಾಟ ನೀಡಿದ್ದಾರೆ.

Recommended Video

    ಮಸ್ಕಿ ಗೆಲುವಿನ ನಂತರ ಮಾತಾಡಿದ ಕೆಪಿಸಿಸಿ ಅಧ್ಯಕ್ಷ !!
    ಇದು ಸಂಭ್ರಮಿಸುವ ಕಾಲವಲ್ಲ

    ಇದು ಸಂಭ್ರಮಿಸುವ ಕಾಲವಲ್ಲ

    ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿರುವ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಸ್ಕಿ ಅಭ್ಯರ್ಥಿ ಬಸನಗೌಡ ತುರುವಿಹಾಳ ಅವರಿಗೆ ನನ್ನ ಅಭಿನಂದನೆಗಳು. ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಶ್ರಮಿಸಿದ ಶಾಸಕರು, ಸಂಸದರು, ಮುಖಂಡರು ಹಾಗೂ ಎಲ್ಲ ಕಾರ್ಯಕರ್ತರಿಗೂ ನನ್ನ ಕೃತಜ್ಞತೆಗಳು. ರಾಜ್ಯ ಹಾಗೂ ದೇಶ ಸೂತಕದ ಮನೆಯಾಗಿರುವುದರಿಂದ, ಇದು ಸಂಭ್ರಮಿಸುವ ಕಾಲವಲ್ಲ. ಹೀಗಾಗಿ ವಿಜಯತೋತ್ಸವದಂಥ ಆಚರಣೆಗಳು ಬೇಡ, ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡುತ್ತೇನೆ'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+