Karnataka Election 2023 : ಸಾರ್ವತ್ರಿಕ ಚುನಾವಣೆ: ರಾಜ್ಯದಲ್ಲಿ ಹಣದ ಹೊಳೆ- ಲಕ್ಷ ಲಕ್ಷ ಹಣ, ಸೀರೆ ಸೀಜ್

ಸಾರ್ವತ್ರಿಕ ಚುನಾವಣೆ ಬೆನ್ನಲ್ಲೆ ರಾಜ್ಯದಲ್ಲಿ ಹಣದ ಹೊಳೆ ಹರಿಯಲು ಶುರುವಾಗಿದೆ. ಇನ್ನೂ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗಧಿಯಾಗಿಲ್ಲ ಅದಾಗಲೇ ಪ್ರಬಲ ಪಕ್ಷಗಳು ಮತಬೇಟೆಯನ್ನು ಆರಂಭಿಸಿವೆ. ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡುವ ಮೂಲಕ ಹಾಗೂ ಹಲವಾರು ಭರವಸೆಗಳನ್ನು ನೀಡುವ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಈ ನಡುವೆ ತೆರೆಮರೆಯಲ್ಲಿ ಹಣ, ಹೆಂಡ, ಸೀರೆ ಮತ್ತಿತರ ವಸ್ತುಗಳನ್ನು ಹಂಚುವ ಕಾರ್ಯವೂ ಕೂಡ ಭರ್ಜರಿಯಾಗೇ ಸಾಗಿದೆ.

ರಾಜ್ಯಕೀಯ ಪಕ್ಷಗಳು ಜನರಲ್ಲಿ ಆಮಿಷ ಒಡ್ಡುವ ಮೂಲಕ ಮುಂಬರುವ ಚುನಾವಣೆಗೆ ಮತಯಾಚನೆ ನಡೆಸಲು ಮುಂದಾಗಿದ್ದಾರೆ. ಹುಬ್ಬಳ್ಳಿ, ವಿಜಯಪುರ, ಧಾರವಾಡ, ಚಾಮರಾಜನಗರ ಹಾಗೂ ಚಿಕ್ಕಮಗಳೂರಿನಲ್ಲಿ ದಾಖಲೆ ಇಲ್ಲದ ಹಣ, ಸೀರೆ ಪತ್ತೆಯಾಗಿದೆ.

Assembly Election: Millions of money in the state, saree siege

ವಿಜಯಪುರದಲ್ಲಿ ಮತ್ತೆ ಲಕ್ಷ ಲಕ್ಷ ಹಣ ಸೀಜ್ ಆಗಿದೆ. ಚೇಕ್ ಪೋಸ್ಟ್ ಬಳಿ ತಪಾಸಣೆ ವೇಳೆ ಹಣ ಸಿಕ್ಕಿದೆ. ಧಾರವಾಡದಲ್ಲಿ ಇಪ್ಪತ್ತು ಸಾವಿರ ಮೌಲ್ಯದ ಸೀರೆ ಸೀಜ್ ಮಾಡಲಾಗಿದೆ. ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಇರುವ ಕೆಲೆಂಡರ್ ಸಿಕ್ಕಿದ್ದು, ಮದ್ಯವನ್ನೂ ಸೀಜ್ ಮಾಡಲಾಗಿದೆ.

ಕಾರವಾರ ರಸ್ತೆಯಲ್ಲಿ ದಾಖಲೆಗಳು ಇಲ್ಲದ 18 ಲಕ್ಷ ಸೀಜ್

ಇನ್ನೂ ಹುಬ್ಬಳ್ಳಿಯಲ್ಲಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣೆಯ ಕಾವು ರಂಗೇರುತ್ತಿದ್ದು ಹಣ ಮಳೆ ಸುರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಗರದ ಎಲ್ಲ ಕಡೆಗಳಲ್ಲೂ ಚೆಕ್ ಪೋಸ್ಟ್ ಹಾಕಲಾಗಿ ಅಕ್ರಮವಾಗಿ ಹಣ ಸಾಗಾಟಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಕಾರವಾರ ರಸ್ತೆಯ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಅಂಕೋಲಾ ಕಡೆಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಬ್ರೇಜಾ ಕಾರನ್ನು ಪರಿಶೀಲನೆ ಮಾಡಿದಾಗ ದಾಖಲೆಗಳು ಇಲ್ಲದೆ ಸಾಗಾಟ ಮಾಡುತ್ತಿದ್ದ ಸುಮಾರು 18 ಲಕ್ಷ ಅಕ್ರಮ ಹಣ ಪತ್ತೆಯಾಗಿದೆ.

Assembly Election: Millions of money in the state, saree siege

ಕೂಡಲೇ ಚೆಕ್ ಪೋಸ್ಟ್ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದು ಸ್ಥಳಕ್ಕೆ ಆಗಮಿಸಿದ ಎಸಿಸಿ ಆರ್ ಕೆ ಪಾಟೀಲ್ ಹಾಗೂ ಹುಬ್ಬಳ್ಳಿ ನಗರ ತಹಸೀಲ್ದಾರ್ ಅವರು ಅಕ್ರಮವಾಗಿ ಹಣ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಾರು ಸಮೇತ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಹಣದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು, ವಿಜಯನಗರ, ವಿಜಯಪುರ, ಯಾದಗಿರಿಯಲ್ಲೂ ಹಣ ಸೀಜ್

ಈ ಹಿಂದೆ (ಮಾರ್ಚ್ 24) ಚಿಕ್ಕಮಗಳೂರು, ವಿಜಯನಗರ, ವಿಜಯಪುರ ಯಾದಗಿರಿ ಜಿಲ್ಲೆಗಳಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸಾಗಾಟ ಮಾಡುತ್ತಿದ್ದ ನಗದು, ಸೀರೆ, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದರು. ಕಾಫಿನಾಡಲ್ಲಿ ಚಿಕ್ಕಮಗಳೂರಿನಲ್ಲಿ ಮಾದರಿ ನೀತಿ ಸಂಹಿತೆಯಲ್ಲೇ ಖಾಕಿಗಳ ಭರ್ಜರಿ ಬೇಟೆಯಾಡಿದ್ದು, ಬೆಳಿಗ್ಗೆ ಅಕ್ಕಿ, ಮಧ್ಯಾಹ್ನದ ವೇಳೆ ಕಂತೆ-ಕಂತೆ ಹಣ ವಶಕ್ಕೆ ಪಡೆಯಲಾಗಿದೆ.

Assembly Election: Millions of money in the state, saree siege

ಕಾರಿನಲ್ಲಿ ಶಿವಮೊಗ್ಗದಿಂದ ತರೀಕೆರೆ ಕಡೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 3.50 ಲಕ್ಷ ನಗದನ್ನು ತರೀಕೆರೆ ತಾಲೂಕಿನ ಎಂ.ಸಿ. ಕ್ಯಾಂಪ್​ನಲ್ಲಿ ವಶಕ್ಕೆ ಪಡೆಯಲಾಗಿದೆ. ತರೀಕೆರೆ ಚುನಾವಣಾ ಅಧಿಕಾರಿಗಳು ನಗದು ಜಪ್ತಿ ಮಾಡಿ ಲಕ್ಕವಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯಪುರದಲ್ಲಿ ದಾಖಲೆ ಇಲ್ಲದ ಹಣ ಪತ್ತೆ

ವಿಜಯಪುರದಲ್ಲಿ ಮೊನ್ನೆಯಷ್ಟೇ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 10.30 ಲಕ್ಷ ರೂಪಾಯಿ ನಗದು ಮತ್ತು 60 ಗ್ರಾಮ್ ಚಿನ್ನಾಭರಣ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆ ನಡೆಸಿದಾಗ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿರುವುದು ತಿಳಿದುಬಂದ ಹಿನ್ನೆಲೆ ಕಾರು ಚಾಲಕ ನರೇಂದ್ರ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ನಗದು ಆಭರಗಳನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ವಿಜಯಪುರದಲ್ಲಿ ಬೈಕ್‌ನಲ್ಲಿ ಐದು ಲಕ್ಷ ಹಣ ಸಾಗಿಸುತ್ತಿರುವುದು ಪತ್ತೆಯಾಗಿತ್ತು.

ಇನ್ನೂ ಯಾದಗಿರಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಮತ್ತು ಸೀರೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರವೀಣ್ ಎಂಬಾತ ಅಕ್ರಮವಾಗಿ 242 ಸೀರೆಗಳನ್ನು ಸಾಗಿಸುತ್ತಿದ್ದದ್ದು ಕಂಡುಬಂದಿತ್ತು. ವಿಧಾನಸಭಾ ಚುನಾವಣಾ ಬೆನ್ನಲ್ಲೆ ಈತರಹದ ಘಟನೆಗಳು ಮರುಕಳಿಸುತ್ತಿದ್ದು ಚುನಾವಣಾ ಆಯೋಗ ಎಚ್ಚರಿಕೆ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+