Congress Government: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಮಳೆ ಮಾಯ: ಎಂ. ಚಂದ್ರಪ್ಪ ಲೇವಡಿ

ಚಿತ್ರದುರ್ಗ, ಜೂನ್‌ 23: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮಳೆ ಮಾಯವಾಗುತ್ತದೆ ಎಂದು ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ ಲೇವಡಿ ಮಾಡಿದ್ದಾರೆ.

ಚಿತ್ರದುರ್ಗ ನಗರದ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯೂರಪ್ಪನವರ ಸರ್ಕಾರ ಇದ್ದಾಗ ರಾಜ್ಯದಲ್ಲಿ ಯಥೇಚ್ಚವಾಗಿ ಮಳೆಯಾಗಿ, ರಾಜ್ಯ ಸುಭಿಕ್ಷವಾಗಿತ್ತು ಆದರೆ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ರಾಜ್ಯದಲ್ಲಿ‌ ಮಳೆ ಬರ್ತಿಲ್ಲ ಎಂದರು.

As The Congress Government Came To The State, The rain disappeared says MLA M Chandrappa

ಬಿಜೆಪಿ ಸರ್ಕಾರದಲ್ಲಿ ಹೆಚ್ಚು ಮಳೆಯಾದ್ರೂ ಯಡಯೂರಪ್ಪ ಯಶಸ್ವಿಯಾಗಿ ನೆರೆ ಹಾವಳಿಯನ್ನ ನಿರ್ವಹಣೆ ಮಾಡಿದ್ದರು. ಆದರೆ ಕಾಂಗ್ರೆಸ್ ತಾನು‌ ನೀಡಿದ ಭರವಸೆಗಳನ್ನೇ ಈಡೇರಿಸುತ್ತಿಲ್ಲ‌‌. ಕಾಂಗ್ರೆಸ್ ಗ್ಯಾರಂಟಿ ಈಡೇರಿಸಲೇಬೇಕೆಂದು ನಾವೆಲ್ಲ ಹೋರಾಟ ಮಾಡುತ್ತೇವೆ ಎಂದು ಶಾಸಕ ಎಂ ಚಂದ್ರಪ್ಪ ತಿಳಿಸಿದರು.

ಇನ್ನು ಮಾಜಿ ಶಾಸಕ ಜಿಹೆಚ್ ತಿಪ್ಪಾರೆಡ್ಡಿ ಮಾತನಾಡಿ, ಕೆಲ ಕಾರ್ಯಕರ್ತರು ಹಾಗೂ ನಾಯಕರು ಒಳಗೊಳಗೆ ಕಾಂಗ್ರೆಸ್ ಜೊತೆ ಸೇರಿದ್ದರು. ಚುನಾವಣೆ ಘೋಷಣೆ ಬಳಿಕ ಒಂದು ತಿಂಗಳು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಮೇ 10ರ ಸಂಜೆ ಮತ್ತೆ ಮರಳಿ ಬಿಜೆಪಿಗೆ ಬಂದಿದ್ದಾರೆ. ನನ್ನ ಮತ ಕ್ಷೇತ್ರದಲ್ಲಿ ಕೆಲ ನಾಯಕರು, ಕಾರ್ಯಕರ್ತರು ಹಾಗೆ ಮಾಡಿದ್ದರು, ಮತ್ತೆ ಪಕ್ಷಕ್ಕೆ ಮರಳಿ ಬಂದಿದ್ದು ಸಂತೋಷ ಎಂದರು. ಇನ್ನು ಯಜಮಾನರು( ಬಿಎಸ್ವೈ) ಬಂದಿದ್ದಾರೆ ಹೆಚ್ಚು ಮಾತನಾಡಲ್ಲ ಎಂದು ಮಾಜಿ ಶಾಸಕ ಜಿಹೆಚ್ ತಿಪ್ಪಾರೆಡ್ಡಿ ನಗೆ ಚಟಾಕಿ ಹಾರಿಸಿದರು.

As The Congress Government Came To The State, The rain disappeared says MLA M Chandrappa

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಟೀಲ್ ವಾಗ್ದಾಳಿ.

ರಾಜ್ಯದಲ್ಲಿ ದ್ವೇಷದ ರಾಜಕಾರಣ ಪ್ರಾರಂಭ ಮಾಡಿದ್ದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಅಕ್ಕಿ ವಿಚಾರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಆರೋಪಕ್ಕೆ ನಳಿನ್‌ ಕುಮಾರ್‌ ಕಟೀಲ್‌ ತಿರುಗೇಟು ನೀಡಿದರು.

ಗೋಹತ್ಯೆ ಕಾಯ್ದೆ ವಾಪಸ್ ತೆಗೆದುಕೊಳ್ಳುತ್ತಿದ್ದಾರೆ.ಪಠ್ಯ ಪುಸ್ತಕ ಬದಲಾವಣೆ ತಂದರು. ಹಿಂದೂ ಸಂಘಟನೆಯ ಕಾರ್ಯಕರ್ತರನ್ನ ಬಂಧಿಸಲು ಸೂಚಿಸಿದ್ದಾರೆ. ಇದು ದ್ವೇಷದ ರಾಜಕಾರಣ ಅಲ್ಲದೆ, ಬೇರೆನೂ ಎಂದು ಪ್ರಶ್ನಿಸಿದ್ದಾರೆ. ಇನ್ನೂ ವಿರೋಧ ಪಕ್ಷದ ನಾಯಕನ ಅವಶ್ಯಕತೆ ಇರುವುದು ಅಧಿವೇಶನದ ಸಮಯದಲ್ಲಿ. ಹೀಗಾಗಿ ವಿರೋಧ ಪಕ್ಷದ ನಾಯಕನ ಆಯ್ಕೆ ಅಧಿವೇಶನ ಒಳಗೆ ಮಾಡುತ್ತೇವೆ ಎಂದರು.

ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ನೀಡುತ್ತಿದೆ. ಕೇಂದ್ರ ಸಕಾ೯ರದ ಬಿಟ್ಟು ಇವರು ಮೊದಲು ಹೇಳಿದಂತೆ ಹತ್ತು ಕೆಜಿ ಅಕ್ಕಿ ನೀಡಲಿ ಎಂದ ಅವರು, ಮೊದಲು ಹೇಳಿದಂತೆ ಅಕ್ಕಿ ಕೊಡಲಿ. ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಮುಂದಿನ ತಿಂಗಳಿನಿಂದ ವೇತನ ಕೊಡಲಿ ಹಾಗೂ ಹೆಚ್ಚಳ ಮಾಡಿರುವ ವಿದ್ಯುತ್ ದರ ಕಡಿಮೆ ಮಾಡಲಿ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+