Get Updates
Get notified of breaking news, exclusive insights, and must-see stories!

ರಾಜ್ಯವು 2018 ರಿಂದ 4,257 ರೈತರ ಸಾವಿಗೆ ಸಾಕ್ಷಿಯಾಗಿದೆ: ಸರ್ಕಾರಿ ಅಂಕಿಅಂಶ

ವರದಿಯಾದ 4,257 ರೈತರ ಆತ್ಮಹತ್ಯೆಗಳ ಪೈಕಿ 3,442 ಪ್ರಕರಣಗಳಲ್ಲಿ ಪರಿಹಾರ ನೀಡಲು ಸರ್ಕಾರ ಅನುಮೋದನೆ ನೀಡಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಬೆಂಗಳೂರು, ಫೆಬ್ರವರಿ. 27: ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ 4,257 ರೈತರು ತಮ್ಮ ಜೀವವನ್ನು ಕೊನೆಗೊಳಿಸಿದ್ದಾರೆ. ಆದರೆ ಕೋವಿಡ್ ನಂತರದ ಅವಧಿಯಲ್ಲಿ ಆತ್ಮಹತ್ಯೆಗಳ ಸಂಖ್ಯೆ ಶೇಕಡಾ 71 ರಷ್ಟು ಕಡಿಮೆಯಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

2018 ರಲ್ಲಿ, 1,084 ರೈತರು ಆತ್ಮಹತ್ಯೆ ಮಾಡಿಕೊಂಡ ವರದಿಗಳಿವೆ. ಆದರೆ 2022 ರಲ್ಲಿ ಆತ್ಮಹತ್ಯೆಗಳ ಸಂಖ್ಯೆ 310 ಕ್ಕೆ ಇಳಿದಿದ್ದು, ಜನಸಂಖ್ಯೆಯ 60 ಪ್ರತಿಶತದಷ್ಟು ಜನರು ಕೃಷಿಯನ್ನು ಅವಲಂಬಿಸಿರುವ ಬರಪೀಡಿತ ರಾಜ್ಯದಲ್ಲಿ ಈ ವಿಷಯ ಕೊಂಚ ನೆಮ್ಮದಿ ನೀಡುವಂತಿದೆ. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ 5 ಲಕ್ಷ ರೂಪಾಯಿ ಪರಿಹಾರ ಹಾಗೂ ಮೃತರ ಕುಟುಂಬಕ್ಕೆ ಮಾಸಿಕ 2000 ರೂಪಾಯಿ ಪಿಂಚಣಿ ನೀಡಲಾಗುತ್ತದೆ.

As many as 4,257 farmers ended their lives since 2018: Govt data

ವರದಿಯಾದ 4,257 ರೈತರ ಆತ್ಮಹತ್ಯೆಗಳ ಪೈಕಿ 3,442 ಪ್ರಕರಣಗಳಲ್ಲಿ ಪರಿಹಾರ ನೀಡಲು ಸರ್ಕಾರ ಅನುಮೋದನೆ ನೀಡಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತು ಕಂದಾಯ ಸಚಿವ ಆರ್.ಅಶೋಕ ಅವರು ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ತಿಳಿಸಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿರುವುದು ಅತ್ಯಂತ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಬಿಜೆಪಿ ರೈತ ಮೋರ್ಚಾ (ರೈತ ಘಟಕ) ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.

"ನಮ್ಮ ಸರ್ಕಾರದಂತೆ ಯಾವುದೇ ಸರ್ಕಾರ ರೈತರ ಬಗ್ಗೆ ಗಮನಹರಿಸಿಲ್ಲ. ಬಿಜೆಪಿಯವರು ಮಾತ್ರ ರೈತರ ಆದಾಯದ ಬಗ್ಗೆ ಮಾತನಾಡುತ್ತಾರೆ. ಹೂಡಿಕೆ ವೆಚ್ಚವನ್ನು ಕಡಿಮೆ ಮಾಡುವತ್ತ ಗಮನ ಹರಿಸಲಾಗಿದೆ. ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ಬಿಜೆಪಿ ರೈತ ಮೋರ್ಚಾ (ರೈತ ಘಟಕ) ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದ್ದಾರೆ.

ಆದರೆ, ಕರ್ನಾಟಕ ರಾಜ್ಯ ರೈತ ಸಂಘದ ನಾಯಕಿ ನಂದಿನಿ ಜಯರಾಂ ಅವರು ಸರ್ಕಾರದ ಅಂಕಿ ಅಂಶಗಳ ಬಗ್ಗೆ ತಕರಾರು ತೆಗೆದಿದ್ದು, ಸರ್ಕಾರವು ರೈತರ ಸಾವಿಗಳ ಸಂಖ್ಯೆಯನ್ನು ಕಡಿಮೆ ವರದಿ ಮಾಡಿದೆ. ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗಿದ್ದರೆ, ಅದು ಸರ್ಕಾರಕ್ಕೆ ಮುಜುಗರ ಉಂಟುಮಾಡುತ್ತದೆ ಮತ್ತು ಪರಿಹಾರ ನೀಡಬೇಕಾಗುತ್ತದೆ ಎಂದು ಕಡಿಮೆ ಸಂಖ್ಯೆ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

As many as 4,257 farmers ended their lives since 2018: Govt data

ರಾಜ್ಯ ರೈತ ಸಂಘದ ಆರೋಪವನ್ನು ಈರಣ್ಣ ಕಡಾಡಿ ನಿರಾಕರಿಸಿದ್ದಾರೆ. "ರೈತರು ಈಗ ಹೆಚ್ಚು ಜಾಗೃತರಾಗಿದ್ದಾರೆ. ಸರ್ಕಾರವು 5 ಲಕ್ಷ ರೂಪಾಯಿ ಪರಿಹಾರವನ್ನು ನೀಡುತ್ತದೆ. ಆದ್ದರಿಂದ, ಆತ್ಮಹತ್ಯೆಯಾದಾಗ, ಮೃತರ ಕುಟುಂಬಕ್ಕೆ ಸಹಾಯವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ರೈತ ಗುಂಪುಗಳು ಎಲ್ಲಾ ಪ್ರಯತ್ನಗಳನ್ನು ಮಾಡುತ್ತವೆ. ಎಲ್ಲಾ ಸಮಸ್ಯೆಗಳು ಪರಿಹಾರವಾಗಿವೆ ಎಂದು ನಾನು ಹೇಳುವುದಿಲ್ಲ. ಆದರೆ ಪರಿಹಾರವಾಗಲು ಆರಂಭವಾಗಿವೆ" ಎಂದಿದ್ದಾರೆ.

ಇನ್ನು ರೈತರ ಸಾವುಗಳನ್ನು ಕಡಿಮೆ ವರದಿ ಮಾಡಿರುವ ಸಾಧ್ಯತೆಯನ್ನು ತಳ್ಳಿಹಾಕದ ಕರ್ನಾಟಕ ರಾಜ್ಯ ಕಬ್ಬು ರೈತರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ರೈತರ ಆತ್ಮಹತ್ಯೆ ಕಡಿಮೆಯಾಗಿರುವುದನ್ನು ಸ್ವಾಗತಿಸಿದ್ದಾರೆ. "ಸರ್ಕಾರ ದೊಡ್ಡ ಕೆಲಸ ಮಾಡಿದೆ ಎಂದಲ್ಲ, ನಮ್ಮಂತಹ ಗುಂಪುಗಳು ರೈತರಿಗೆ ಸಾವಿಗೀಡಾಗುವು ದು ಪರಿಹಾರವಲ್ಲ ಎಂದು ತಿಳಿಹೇಳಿ ಜಾಗೃತಿ ಮೂಡಿಸುತ್ತಿರುವುದರಿಂದ ಆತ್ಮಹತ್ಯೆಗಳು ಕಡಿಮೆಯಾಗುತ್ತಿವೆ" ಎಂದಿದ್ದಾರೆ.

ಇತ್ತ, ಬಜೆಟ್ ಮೇಲಿನ ಚರ್ಚೆಯ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಿಜೆಪಿ ಸರ್ಕಾರದಲ್ಲಿ 1,125 ರೈತರ ಆತ್ಮಹತ್ಯೆಗಳು ವರದಿಯಾಗಿವೆ. ಆದರೆ, ಕಾಂಗ್ರೆಸ್ ಆಡಳಿತದಲ್ಲಿ 3,800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದರು. ಆದರೆ, ಬಿಜೆಪಿ ಆಡಳಿತದ 2019 ಮತ್ತು 2022 ರ ನಡುವೆ 3,173 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಬಸವರಾಜ ಬೊಮ್ಮಾಯಿ ಅವರ ಸಂಪುಟ ಸಹೋದ್ಯೋಗಿಗಳೇ ತಿಳಿಸಿದ್ದಾರೆ.

ಮಾಹಿತಿ ಕೃಪೆ: ಡೆಕ್ಕನ್ ಹೆರಾಲ್ಡ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+