ಟಿಕೆಟ್‌ ಕೈ ತಪ್ಪಿದಕ್ಕೆ ಬಿಜೆಪಿಯಲ್ಲಿ ಬಂಡಾಯ; ನಾನು ಮತ್ತೆ ಬಿಜೆಪಿ ಪಕ್ಷದ ಕಡೆ ಮುಖ ಮಾಡಲ್ಲ: ಎನ್‌ ಆರ್‌ ಸಂತೋಷ್‌ ಕಿಡಿ

ಹಾಸನ, ಏಪ್ರಿಲ್14:‌ ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ದತೆ ನಡೆಸುತ್ತಿದ್ದ ಬಿಜೆಪಿಯಲ್ಲಿ ಟಿಕೆಟ್‌ ಘೋಷಣೆಯ ಬಳಿಕ ಬಂಡಾಯದ ಕಾವು ಹೆಚ್ಚಾಗಿದೆ. ಈಗಾಗಲೇ 212 ಕ್ಷೇತ್ರಗಳ ಅಭ್ಯರ್ಥಿಗಳನ್ನ ಬಿಡುಗಡೆ ಮಾಡಿರುವ ಬಿಜೆಪಿ ಹೈಕಮಾಂಡ್‌ ಗೆ ಬಂಡಾಯ ಶಮನಗೊಳಿಸುವುದೇ ದೊಡ್ಡ ತಲೆನೋವಾಗಿದೆ.

ಹಾಸನ ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎನ್‌ ಆರ್‌ ಸಂತೋಷ್‌ ಗೆ ಟಿಕೆಟ್‌ ಕೈ ಕೈತಪ್ಪಿದ ಹಿನ್ನೆಲೆಯಲ್ಲಿ ಹೆಂಡತಿ ಮತ್ತು ಹೊಸಗೂಸು ಮುಂದಿಟ್ಟುಕೊಂಡು ಕಾರ್ಯಕರ್ತರ ಮುಂದೆ ಸ್ವಾಭಿಮಾನದ ಮತ ಭಿಕ್ಷೆ ಕೇಳಿ ಕಣ್ಣೀರಿಟ್ಟಿದ್ದಾರೆ.

Arsikere BJP Ticket Aspirants Santosh Fierce Attack Against BJP

ಇನ್ನೂ ಈ ವೇಳೆ ಅರಸೀಕೆರೆಯಲ್ಲಿ ಮಾತನಾಡಿದ ಸಂತೋಷ್, ಅರಸೀಕೆರೆಯಲ್ಲಿ ಬಿಜೆಪಿ ಪಕ್ಷವನ್ನ ಹುಡುಕಿ ನೋಡ್ಬೇಕಿತ್ತು. ಅಂತಹ ಪರಿಸ್ಥಿತಿಯಲ್ಲಿದ್ದ ಕ್ಷೇತ್ರವನ್ನು ಇವತ್ತು ಬಿಜೆಪಿ ಎಂದರೇನು ಅಂತ ತೋರಿಸ್ಕೊಟ್ಟಿದ್ದೇನೆ. ಹಳ್ಳಿ ಹಳ್ಳಿಗೂ ಸುತ್ತಿ ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ಅಂತಹ ಕೆಲಸ ಮಾಡಿದ ನನಗೆ ಟಿಕೆಟ್ ನಿರಾಕರಣೆ ಮಾಡಿರೋದು ಮನಸ್ಸಿಗೆ ನೋವಾಗಿದೆ. ಪಕ್ಷವನ್ನು ತಳಮಟ್ಟಕ್ಕೆ ಇಟ್ಟಿದ್ರಲ್ಲ ಇವತ್ತು ಅಂತಹ ವ್ಯಕ್ತಿಗಳಿಗೆ ಟಿಕೆಟ್ ನೀಡಲಾಗಿದೆ. ಇದು ನನ್ನಂತಹ ಪ್ರಾಮಾಣಿಕ ವ್ಯಕ್ತಿಗೆ ಮಾಡಿದ ಅಪಮಾನ ಮತ್ತು ದ್ರೋಹ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ನಾನು ಮತ್ತೆ ಬಿಜೆಪಿ ಪಕ್ಷದ ಕಡೆ ಮುಖ ಮಾಡುವ ವ್ಯಕ್ತಿಯ ನಾನಲ್ಲ. ನನಗೆ ನನ್ನ ಕೈ ಹಿಡಿದ ಮತದಾರರೇ ಮುಖ್ಯ ಹಾಗಾಗಿ ನಿಮ್ಮ ಬಳಿ ಬಂದಿದ್ದೇನೆ ನೀವು ಯಾವ ತೀರ್ಮಾನ ಹೇಳುತ್ತೀರೋ ಆ ತೀರ್ಮಾನಕ್ಕೆ ನಾನು ಬದ್ಧವಾಗಿರುತ್ತೇನೆ. ಇವತ್ತು ನಾನು ಮತ್ತು ನನ್ನ ಕುಟುಂಬ ನಿಮ್ಮೆದುರಿಗೆ ಬಂದಿದ್ದೇವೆ. ದಯಮಾಡಿ ನನ್ನನ್ನ ಕೈ ಬಿಡಬೇಡಿ ಅಂತ ವೇದಿಕೆ ಮೇಲೆ ಕಣ್ಣೀರಿಡುತ್ತಾ ಮತಯಾಚನೆ ನಡೆಸಿದರು.

ಇನ್ನು ನಾನು ಬಿಜೆಪಿ ಪಕ್ಷವನ್ನ ಕಟ್ಟಿ ಬೆಳೆಸಿರಬಹುದು ಅದಕ್ಕೆ ಕಾರಣ ನಮಗೆಲ್ಲಾ ಆದರ್ಶರಾದ ನರೇಂದ್ರ ಮೋದಿ. ಅವರ ಮಾರ್ಗದರ್ಶನದಲ್ಲಿ ನಾನು ಪಕ್ಷವನ್ನ ಕಟ್ಟಿದೆ ಆದರೆ ನನ್ನ ಎದುರಾಳಿಗಳು ಕೆಲವರ ಕಿವಿ ಚುಚ್ಚಿ ನನಗೆ ಟಿಕೆಟ್ ಕೈತಪ್ಪುವಂತೆ ಮಾಡಿದ್ದಾರೆ. ಎದುರಾಳಿಗಳ ಎದೆಯನ್ನ ಸೀಳಬೇಕಾದರೆ ನೀವು ನನ್ನೊಂದಿಗೆ ಕೈಜೋಡಿಸಬೇಕು. ನಾನು ಏಪ್ರಿಲ್ 17ರಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ನನ್ನ ಬೆಳೆಸಿರುವ ನೀವೆಲ್ಲ ಅವತ್ತು ಭಾಗವಿಸುವ ಮೂಲಕ ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸುವಂತಹ ಕೆಲಸ ಮಾಡಬೇಕು ಎಂದು ನೇರವಾಗಿಯೇ ಶಿವಲಿಂಗೇಗೌಡರ ಹೆಸರನ್ನ ಹೇಳಿ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+