ಬಂಧಿತ ಶಂಕಿತರು ಅಮಾಯಕರು ಅಂತಾರೆ ಸುಲ್ತಾನ್ ಬೇರಿ
ಬೆಂಗಳೂರು, ಜ. 17: ಪೊಲೀಸರು ನಾಲ್ವರನ್ನು ಶಂಕಿತ ಇಂಡಿಯನ್ ಮುಜಾಹಿದೀನ್ ಕಾರ್ಯಕರ್ತರು ಎಂಬ ಆರೋಪದ ಮೇಲೆ ಬಂಧಿಸಿದ್ದಾರೆ. ಆದರೆ, ಅವರು ನಿರಪರಾಧಿಗಳು ಎಂದು ವಕೀಲ ಮೊಹಮ್ಮದ್ ಸುಲ್ತಾನ್ ಬೇರಿ ಹೇಳಿದ್ದಾರೆ.
ಬಂಧಿತ ಸೈಯದ್ ಇಸ್ಮಾಯಿಲ್ ಅಫಕ್ ಪರ ವಾದಿಸುತ್ತಿರುವ ಸುಲ್ತಾನ್ ಬೇರಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಪೊಲೀಸರು ಬಂಧಿಸಿರುವ ಭಟ್ಕಳ ಮೂಲದ ನಾಲ್ವರು ಯಾವುದೇ ಉಗ್ರಗಾಮಿ ಸಂಘಟನೆ ಜೊತೆ ಸಂಪರ್ಕ ಹೊಂದಿಲ್ಲ ಎಂದು ಸಮರ್ಥಿಸಿಕೊಂಡರು.

ಅಫಕ್ ಅವರು ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ಬಂಧಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ ಬಂಧಿಸಿದ್ದೇವೆ ಎಂದು ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ಸೈಯದ್ ಅಫಕ್ ಪಾಕಿಸ್ತಾನದ ಮಹಿಳೆಯನ್ನು ವಿವಾಹವಾಗಿದ್ದಾನೆ ಎಂಬ ಕಾರಣಕ್ಕಾಗಿ ಅವರನ್ನು ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಮಾಯಕರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಪೊಲೀಸರಿಗೆ ಸೂಚಿಸಬೇಕೆಂದು ಮೊಹಮ್ಮದ್ ಸುಲ್ತಾನ ಬೇರಿ ಒತ್ತಾಯಿಸಿದ್ದಾರೆ.












Click it and Unblock the Notifications