E Khata: ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಇ- ಖಾತಾ!
ಬೆಂಗಳೂರು, ಫೆಬ್ರವರಿ 17: ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ನಿಮಗೆ ಇನ್ನು ಇ ಖಾತಾ ಸಿಗುತ್ತಿಲ್ಲವೆಂದು ಬೇಸರ ಮಾಡಿಕೊಳ್ಳಬೇಡಿ ನಿಮ್ಮ ಮನೆ ಬಾಗಿಲಿದೆ ಬಂದು ಖಾತಾ ವಿತರಿಸುವ ವಿನೂತನ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ.ಆನ್‌ಲೈನ್‌ನಲ್ಲಿ ಇ ಖಾತ ಗೆ ಅಪ್ಪೆ ಮಾಡಿರುವ ಅಸ್ತಿ ಮಾಲೀಕರ ಮನೆ ಬಾಗಿಲಿಗೆ ಖಾತಾ ವಿತರಣೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಆರು ತಿಂಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಇ ಖಾತೆಗೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೆಲವರಿಗೆ ಮಾತ್ರ ಇ ಖಾತಾ ಸಿಕ್ಕಿದೆ. ಉಳಿದವರು ಖಾತಾಗೆ ಪರದಾಡುತ್ತಿದ್ದಾರೆ. ಇದುವರೆಗೂ ಸುಮಾರು 11 ಲಕ್ಷ ಕಟ್ಟಡ ಮಾಲೀಕರು ಇ ಖಾತಾಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೇವಲ ಒಂದೂವರೆ ಲಕ್ಷ ಮಂದಿಗೆ ಮಾತ್ರ ಇ ಖಾತಾ ಸಿಕ್ಕಿದೆ.

ಖಾತಾಗೆ ಅರ್ಜಿ ಸಲ್ಲಿಸಿರುವವರು ಮೂಲ ಮಾಲೀಕರೇ ಅಥವಾ ಅವರ ಹೆಸರಿನಲ್ಲಿ ಬೇರೆ ಯಾರಾದರೂ ಅರ್ಜಿ ಹಾಕಿರುವವರೇ ಎಂಬ ಅನುಮಾನ ಬಿಬಿಎಂಪಿ ಅಧಿಕಾರಿಗಳಿಗೆ ಕಾಡತೊಡಗಿದೆ. ಹೀಗಾಗಿ ಪ್ರತಿನಿತ್ಯ ಸಾವಿರಾರು ಮಂದಿ ನಮಗೆ ಇನ್ನು ಖಾತಾ ಸಿಕ್ಕಿಲ್ಲ ಎಂದು ದೂರು ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಆಯುಕ್ತ ತುಷಾರ್‌ಗಿರಿನಾಥ್ ಅವರು ಖಾತಾಗೆ ಅರ್ಜಿ ಸಲ್ಲಿಸಿರುವವರ ಮನೆ ಬಾಗಿಲಿಗೆ ಖಾತಾ ವಿತರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ ಕೆಲವೇ ದಿನಗಳಲ್ಲಿ ಕಂದಾಯ ವಿಭಾಗದ ಅಧಿಕಾರಿಗಳಿಗೆ ನಿಮ್ಮ ಬಾಗಿಲಿಗೆ ಬಂದು ಇ ಖಾತಾ ವಿತರಿಸಲಿದ್ದಾರೆ.
ಈ ಬಗ್ಗೆ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ಹಂಚಿಕೊಂಡಿದ್ದು, ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಬಿಬಿಎಂಪಿಯಿಂದ ಇನ್ಮುಂದೆ ಮನೆ ಬಾಗಿಲಿಗೆ ಇ-ಖಾತಾ ತಲುಪಿಸುವಂತ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಇ- ಖಾತಾ ತಲುಪಿಸುವ ಅಭಿಯಾನವನ್ನು ಮುಂದಿನ ವಾರದಿಂದ ಆರಂಭಿಸಲಾಗುವುದು ಎಂದಿದ್ದಾರೆ. ನಮ್ಮ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಕರಡು ಇ-ಖಾತಾದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲದಿದ್ದರೆ, ನಮ್ಮ ಸಿಬ್ಬಂದಿ ಅವರ ಮನೆಗೆ ಹೋಗಿ ಅಗತ್ಯ ದಾಖಲೆಗಳನ್ನು ಪಡೆದು ಅಪ್‌ಲೋಡ್ ಮಾಡಿ ಅಂತಿಮ ಇ-ಖಾತಾ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ, ಇ-ಖಾತಾ, ರಸ್ತೆ ಗುಂಡಿಗಳು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಕಾವೇರಿ ಸ್ಟೇಚ್ 5 ಚಾಲನೆಗೆ ಬಂದಿರುವುದರಿಂದ ಈ ಬಾರಿ ಬೇಸಿಗೆಯಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಏಪ್ರಿಲ್ ಒಂದರಿಂದ ಬೆಂಗಳೂರಿನ ಸಂಪೂರ್ಣ ನೀರಿನ ಜವಬ್ದಾರಿ ಬಿಬಿಎಂಪಿದಾಗಿರುತ್ತದೆ. ಬಿಬಿಎಂಪಿ ಬಾಂಡರ್ ನಲ್ಲಿರುವ ಎಲ್ಲ ಬೋರ್ ವೆಲ್ ಗಳನ್ನು ನಾವು ಬಿಡಬ್ಲೂಯುಎಸ್ ಎಸ್ ಬಿಗೆ ವರ್ಗಾಯಿಸುತ್ತೇವೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ಕೀಮ್ ಗಳಲ್ಲಿ ಬರುವ ಅನುದಾನವನ್ನು ಸಹ BWSSB ಗೆ ನೀಡುತ್ತೆವೆ. ಆರ್ ಓಪ್ಲಾಟ್ ಗಳು ಬಹಳಷ್ಟು ಕಡೆ ಸರಿಯಾಗಿ ನಡೆಯುತ್ತಿಲ್ಲ. ಇದು ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.












Click it and Unblock the Notifications