ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Army Day In Bengaluru: ಮೊದಲ ಬಾರಿಗೆ ಬೆಂಗಳೂರಲ್ಲಿ 'ಸೇನಾ ದಿನಾ'ಚರಣೆ, 'ಸೇನಾ ಮೆಡಲ್' ಪುರಸ್ಕಾರ,

|
Google Oneindia Kannada News

ಬೆಂಗಳೂರು, ಜನವರಿ 15: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 'ಸೇನಾ ದಿನಾಚರಣೆ' (Army Day) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನ ಹಲಸೂರಿನ ಎಂಇಜಿ ಸೆಂಟರ್‌ನಲ್ಲಿ ಭಾನುವಾರ 'ಸೇನಾ ದಿನಾಚರಣೆ' ನಡೆಯಿತು. 1949ರ ಜನವರಿ 15 ರಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಭಾರತೀಯ ಸೈನ್ಯದ ಪ್ರಥಮ ಪ್ರಧಾನ ದಂಡಾನಾಯಕರಾದ ಈ ದಿನವನ್ನು ಸೇನಾ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ವಿಶೇಷ ಎಂದರೆ ಈ ಸಮಾರಂಭವನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಚರಿಸಲಾಗುತ್ತಿತ್ತು. ಸ್ವಾತಂತ್ರ್ಯ ಪಡೆದು 75 ವರ್ಷ ಪೂರೈಸಿದ್ದ ಸಂಭ್ರಮದ ನಡುವೆ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಈ ಸೇನಾ ದಿನಾಚರಣೆ ನಡೆದಿರುವುದು ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಸೇನೆಯ ಆಕರ್ಷಕ ಮೆರವಣಿಗೆ, ಮಿಲಿಟರಿ ಪ್ರದರ್ಶನ, ಬಾನಂಗಳದಲ್ಲಿ ಹೆಲಿಕಾಪ್ಟರ್ ಮೂಲಕ ತಿವರ್ಣ ಧ್ವಜದ ಪ್ರದರ್ಶನ ಇಡೀ ಕಾರ್ಯಕ್ರಮಕ್ಕೆ ಮೆರಗು ನೀಡಿತ. ಪರೇಡ್ ನಲ್ಲಿ 8 ರೆಜಿಮೆಂಟ್ ಗಳ ಪಥಸಂಚಲನ ಜರುಗಿದ ಬಳಿಕ ಇತ್ತ ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರು ದೇಶಕ್ಕಾಗಿ ಹೋರಾಡಿ ಮಡಿದ ಹುತಾತ್ಮ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಿದರು.

ನಂತರ ಸೈನ್ಯದ ಪಥ ಸಂಚಲದ ಗೌರವ ರಕ್ಷೆ ಸ್ವೀಕರಣೆ ಮಾಡಲಾಯಿತು. ಪಥ ಸಂಚಲನದದಲ್ಲಿ ಭಾರತೀಯ ಸೈನ್ಯದ ಶೌರ್ಯ ಪ್ರದರ್ಶನ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮಿಲಿಟರಿ ಬ್ಯಾಂಡ್‌ಗಳು, ಯುದ್ಧ ಸನ್ನದ್ಧತೆಗಳ ಕವಾಯತ್ತು

ರುಧ್ರ ಮತ್ತು ಧ್ರುವ ಹೆಲಿಕಾಪ್ಟರ್, K9 ವಜ್ರ ಸ್ವಯಂಚಾಲಿತ ಗನ್, ಪಿನಾಕ ರಾಕೆಟ್, ತುಂಗುಸ್ಕಾ ಫೈಟರ್ ಜೆಟ್, 155mm ಹಾಗೂ 130 mm ಗನ್ ಪ್ರದರ್ಶನ ಕೂಡ ನಡೆಸಲಾಯಿತು.

ಯೋಧರ ತ್ಯಾಗ, ಬಲಿದಾನ ಪ್ರೇರಣೆ

ಯೋಧರ ತ್ಯಾಗ, ಬಲಿದಾನ ಪ್ರೇರಣೆ

ಈ ಸಂದರ್ಭದಲ್ಲಿ ವೀರ ಸೇನಾ ಪ್ರಶಸ್ತಿ ಪಡೆದವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಅವರು, 'ಸೇನಾ ದಿವಸ್' (ಸೇನಾ ದಿನ) ಆಚರಣೆಯಲ್ಲಿ ಇಂದು ವೀರ ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ವೀರ ಸೈನಿಕರ ಬಲಿದಾನ, ಶೌರ್ಯ ರಿಂದ ಮುಂದಿನ ಜನಾಂಗ ಪ್ರೇರಣೆ ಆಗಲಿದೆ ಎಂದು ಹೇಳಿದರು.

ಇದೇ ಮೊದಲ ಬಾರಿಗೆ ದೆಹಲಿ ನಗರದ ಬಿಟ್ಟಿ ಬೆಂಗಳೂರಿನಲ್ಲಿ ಸೇನಾ ದಿವಸ್ ಆಯೋಜಿಸಲಾಗಿದೆ. ದೇಶದ ಎಲ್ಲರನ್ನು ಈ ಮೂಲಕ ಒಟ್ಟುಗೂಡಿಸುವ ಪ್ರಯತ್ನ ಇದಾಗಿದೆ ಎಂದು ಅಭಿಪ್ರಾಯಪಟ್ಟರು. ಬೆಂಗಳೂರು ಫೀಲ್ಡ್ ಮಾರ್ಷಲ್ ಕರಿಯಪ್ಪ ಅವರ ತವರೂರು. ಸೈನಿಕರು ಹೆಚ್ಚಿರುವ ಮಡಿಕೇರಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ಪ್ರಸ್ತುತ ಸೈನ್ಯದಲ್ಲಿರುವ ಸೈನಿಕರಿಗೆ ಉಪಕರಣ, ಸೌಲಭ್ಯಗಳು ಹಾಗೂ ಅತ್ಯಾಧುನಿಕ ಉಪಕರಣ ಒದಗಿಸಲಾಗುತ್ತಿದೆ ಎಂದರು.j

2023 ಮಾರ್ಚ್‌ನಿಂದ 'ಅಗ್ನಿವೀರ'ರಿಗೆ ತರಬೇತಿ

2023 ಮಾರ್ಚ್‌ನಿಂದ 'ಅಗ್ನಿವೀರ'ರಿಗೆ ತರಬೇತಿ

ಜಮ್ಮು, ಪಂಜಾಬ್ ಡ್ರೋನ್ ಸಹಾಯದಿಂದ ಹದ್ದಿನ ಕಣ್ಣು ಇಡಲಾಗಿದೆ. ಹೆಚ್ಚಿನ ಭದ್ರತೆಯಿಂದಾಗಿ ಸಾವು ನೋವುಗಳ ಸಂಖ್ಯೆ ಇಳಿಕೆ ಆಗಿದೆ. ಭದ್ರತೆಯಲ್ಲಿ ಬಹುಮುಖ್ಯ ಬದಲಾವಣೆ ತರಲಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಭಾರತೀಯ ಸೇನಾ ಸದಾ ಸಿದ್ಧವಿರಲಿದೆ. ಪುರುಷ್ ಅಗ್ರಿವೀರ್ ನಲ್ಲಿ ಮೊದಲ ತರಬೇತಿ ಆರಂಭವಾಗಿದೆ. ಇನ್ನೂ ಮಹಿಳಾ 'ಅಗ್ನಿವೀರ್' ತರಬೇತಿ ಇದೇ ವರ್ಷ ಮಾರ್ಚ್ ನಿಂದ ಶುರುವಾಗಲಿದೆ. 'ನಾರಿಶಕ್ತಿ' ವಿಶೇಷ ಯೋಜನೆಯಡಿ ಮಹಿಳೆಯರನ್ನು ಶಸಕ್ತರನ್ನಾಗಿ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ. ಮಹಿಳಾ ಅಧಿಕಾರಿಗಳು, ಸೈನಿಕರು ಇಂದು ಪ್ರಮುಖ ಆಪರೇಷನ್ ಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಅವರು ಈ ವೇಳೆ ವಿವರಿಸಿದರು.

ಸೇನಾ ಮುಖ್ಯಸ್ಥರಿಂದ 'ಸೇನಾ ಮೆಡಲ್ ಪುರಸ್ಕಾರ': ವಿವಿರ

ಸೇನಾ ಮುಖ್ಯಸ್ಥರಿಂದ 'ಸೇನಾ ಮೆಡಲ್ ಪುರಸ್ಕಾರ': ವಿವಿರ

ಲೆಫ್ಟಿನೆಂಟ್ ಕರ್ನಲ್ ವಿಪಿನ್ ಕುಮಾರ್ ಕೌರ್

ಮೇಜರ್ ಪ್ರಭ್ಜೋತ್ ಸಿಂಗ್ ಸೈನಿ

ಮೇಜರ್ ಆದಿತ್ಯ ಭಿಷ್ಟ್ (ಪುಲ್ವಾಮಾ ಘಟನೆ)

ಮೇಜರ್ ನಿಖಿಲ್ ಮನ್‌ಚಂದಾ (ಪುಲ್ವಾಮಾ‌ ಘಟನೆ - 2018)

ಹವಾಲ್ದಾರ್ ದೇಶ್‌ಮುಖ್ ನಿಲೇಶ್ ಮಲ್ಹಾರ್ ರಾವ್

ನಾಯಕ್ ಸತೀಶ್ ಕುಮಾರ್

ಸವಾರ್ ಕುರ್ಲಾ ಸುರೇಂದರ್

ನಾಯಕ್ ಹರ್‌ಪ್ರೀತ್ ಸಿಂಗ್

ಸಿಪಾಯಿ ಜಗ್‌ಪ್ರೀತ್ ಸಿಂಗ್

ಮರಣೋತ್ತರ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಮರಣೋತ್ತರ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಮೇಜರ್ ಸಂಕಲ್ಪ್ ಯಾದವ್ (ಮರಣೋತ್ತರ) ಪರವಾಗಿ ತಂದೆ ಸುರೇಂದ್ರ ಕುಮಾರ್ ಯಾದವ್ ಅವರು 'ಸೇನಾ ಮೆಡಲ್ ಪುರಸ್ಕಾರಪುರಸ್ಕಾರ ಸ್ವೀಕರಿಸಿದರು.

ಸುಬೇದಾರ್ ರಾಮ್ ಸಿಂಗ್ (ಮರಣೋತ್ತರ) - ಪತ್ನಿ ಅನಿತಾ ಭಂಡಾರಿ ಸ್ವೀಕಾರ.

ಹವಾಲ್ದಾರ್ ಮೊಹಮ್ಮದ್ ಸಲೀಂ ಅಖೂನ್ (ಮರಣೋತ್ತರ) - ಪತ್ನಿ ಜುಬೇದಾ ಭಾನು ಸ್ವೀಕಾರ.

ನಾಯಕ್ ಭನ್ವಾರಿ ಲಾಲ್ ರಾಥೋಡ್ (ಮರಣೋತ್ತರ) - ಪತ್ನಿ ಸುನೀತಾ ರಾಥೋಡ್ ಸ್ವೀಕಾರ.

ಸಿಪಾಯಿ ಶಶಾಂಕ್ ಶೇಖರ್ ಸಾಮಲ್ (ಆಪರೇಶನ್ ಸ್ನೋ ಲೇಪರ್ಡ್) (ಮರಣೋತ್ತರ) -ಪತ್ನಿ ಸುಶ್ಮಿತಾ ಸಾಮಲ್ ಸ್ವೀಕರಿಸಿದರು.

English summary
Army Day In Bengaluru: First time 'Army Day' has been celebrated in Bengaluru on January 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X