ಅರ್ಕಾವತಿ ಕಡತಗಳನ್ನು ಮುಟ್ಟಿಯೇ ಇಲ್ಲ ಎಂದ ಗೌಡರು
ತುಮಕೂರು ಫೆ. 1: ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಅರ್ಕಾವತಿ ಡಿನೋಟಿಫಿಕೇಷನ್ ಕಡತಗಳನ್ನು ಮುಟ್ಟಿಯೇ ಇಲ್ಲ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಧಿಕಾರದಲ್ಲಿದ್ದಾಗ ಯಾವ ಡಿನೋಟಿಫಿಕೇಷನ್ ಗೆ ಅವಕಾಶ ನೀಡಲಿಲ್ಲ. ಕೇವಲ 22 ಗುಂಟೆ ಜಮೀನನ್ನು ಸಚಿವ ಸಂಪುಟದ ಅನುಮತಿ ಪಡೆದೇ ಡಿನೋಟಿಫಿಕೇಷನ್ ಮಾಡಲಾಗಿತ್ತು ಎಂದು ತಿಳಿಸಿದರು.[ಅರ್ಕಾವತಿ ಹಗರಣದಲ್ಲಿ ಸಿಂಗ್ ಪಾಲಿದೆ : ಜೆಡಿಎಸ್ ಬಾಂಬ್]

ಕಾಂಗ್ರೆಸ್ ಸರ್ಕಾರದ ಡಿನೋಟಿಫಿಕೇಷನ್, ಆಡಳಿತ ವೈಫಲ್ಯ ವನ್ನು ವಿರೊಧಿಸಿ ಬಿಜೆಪಿ ನಿರಂತರ ಹೋರಾಟ ನಡೆಸುತ್ತಿದೆ. ರಾಜ್ಯಪಾಲರಿಗೂ ಈ ಕಾರಣಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಡಿನೋಟಿಫಿಕೇಷನ್ ವಿರುದ್ಧದ ಹೋರಾಟದಿಂದ ಬಿಜೆಪಿ ಯಾವ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಕಾನೂನಿಗೆ ವಿರುದ್ಧವಾಗಿ ತಯಾರಾಗಿರುವ ದಾಖಲೆಗಳನ್ನು ಹೊರತೆಯಗೆಯುವವರೆಗೂ ಬಿಡಲಾಗುವುದಿಲ್ಲ ಎಂದು ಹೇಳಿದ್ದಾರೆ.











Click it and Unblock the Notifications