ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಕೆ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನ ಬಗ್ಗೆ ಸಂಶೋಧನೆ ಮಾಡುತ್ತಿದ್ದೇವೆ: ಆರಗ ಜ್ಞಾನೇಂದ್ರ

|
Google Oneindia Kannada News

ಬೆಂಗಳೂರು, ಮಾರ್ಚ್ 21: ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕರ ಅಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಲಕ್ಷಾಂತರ ಜನ ರೈತರ ಬದುಕಿಗೆ ಬೆನ್ನೆಲುಬು ಆಗಿರುವ ಅಡಿಕೆ ಬಳಕೆಯಿಂದ ಆರೋಗ್ಯಕ್ಕೆ ಹಾನಿಕರವಿಲ್ಲ, ಬದಲಿಗೆ ಅನೇಕ ಬಗೆಯಲ್ಲಿ ಲಾಭಕರವಿದೆ ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ ಎಂದರು.

 60ಕ್ಕೂ ಹೆಚ್ಚು ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು: ಕಣ್ಣೀರಿಟ್ಟ ರೈತ ಮಹಿಳೆ 60ಕ್ಕೂ ಹೆಚ್ಚು ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು: ಕಣ್ಣೀರಿಟ್ಟ ರೈತ ಮಹಿಳೆ

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಆರಗ ಜ್ಞಾನೇಂದ್ರ, ಇತ್ತೀಚೆಗೆ ಲೋಕಸಭಾ ಸದಸ್ಯರೊಬ್ಬರು ಅಡಿಕೆ ಹಾನಿಕಾರಕ ಹಾಗೂ ಅದನ್ನ ಬ್ಯಾನ್ ಮಾಡಬೇಕು ಎಂದು ನೀಡಿದ್ದ ಹೇಳಿಕೆಯಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದರು. ಈ ಕಾರಣದಿಂದಾಗಿ, ಅಡಿಕೆ ದೇಹಕ್ಕೆ ಹಾನಿಕಾರಕ ಅಲ್ಲಾ, ಹಾಗೂ ಈ ರೀತಿ ಹೇಳಿಕೆಯಿಂದಾಗಿ ಅಡಿಕೆ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಕರ್ನಾಟಕ ರಾಜ್ಯದ ಅಡಿಕೆ ಟಾಸ್ಕ್ ಫೋರ್ಸ್ (Karnataka State Areca Task Force) ನಿಯೋಗದ ವತಿಯಿಂದ ದೆಹಲಿಗೆ ತೆರಳಿ ಸಚಿವರನ್ನು ಭೇಟಿ ಮಾಡಲಾಗಿತ್ತು ಎಂದರು.

Arecanut Is Not Injurious to Health: Araga Jnanendra

ಈ ಸಂಬಂಧ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ಥೋಮರ್ ಹಾಗೂ ರಾಜ್ಯ ಸಚಿವರನ್ನ ಭೇಟಿ ಮಾಡಲಾಗಿದ್ದು, ಅಡಿಕೆ ಬಗ್ಗೆ ನ್ಯಾಯಾಲಯದಲ್ಲಿ ತೀರ್ಮಾನ ಆಗದೆ ಯಾವುದೇ ಹೇಳಿಕೆಗಳನ್ನು ನೀಡಬಾರದು. ಅದು ಅಡಿಕೆ ಬೆಳೆಗಾರರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮನವರಿಕೆ ಮಾಡಿದ್ದೇವೆ ಎಂದರು.

ಇನ್ನು, ಅಡಿಕೆ ಮನುಷ್ಯನ ದೇಹಕ್ಕೆ ಹಾನಿಕರಕ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ ಗೆ ಒಂದು ಅಫಿಡವಿಟ್ ನೀಡಿದ್ದು, ಈ ಅಫಿಡವಿಟ್ ಅನ್ನು ತೆಗೆಯುವ ಸಲುವಾಗಿ ನಾವು ಪ್ರಯತ್ನ ಮಾಡ್ತಿದ್ದೇವೆ ಹಾಗೂ ಅಡಿಕೆ ಹಾನಿಕರಕ ಅಲ್ಲಾ ಎಂಬ ಬಗ್ಗೆ ನಮ್ಮ ರಾಜ್ಯದಲ್ಲಿ ಸಂಶೋಧನೆಯನ್ನ ಸಹ ಮಾಡಲಾಗುತ್ತಿದೆ. ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ (ramaiah institute of medical sciences) ನಮ್ಮ ಟಾಸ್ಕ್ ಫೋರ್ಸ್ ಕಡೆಯಿಂದ ಸಂಶೋಧನೆ ನಡೆಯುತ್ತಲಿದೆ, ಹಾಗೂ ಕೇಂದ್ರದಿಂದಲೂ ಸಹ ಈ ಬಗ್ಗೆ ಅಧ್ಯಯನ ನಡೆಸಲು ಒಂದು ಸಮಿತಿಯನ್ನ ರಚನೆ ಮಾಡಲಾಗುತ್ತಿದೆ.

ಅಡಿಕೆ ಸೇವನೆ, ಆರೋಗ್ಯಕ್ಕೆ ಹಾನಿಕಾರಕ ಅಲ್ಲಾ ಎಂಬುದರ ಬಗ್ಗೆ ಒಂದು ಸ್ಪಷ್ಟ ನಿರ್ಧಾರಕ್ಕೆ ಇದರಿಂದ ಬರುವ ನಿರೀಕ್ಷೆಯಿದೆ ಹಾಗೂ ರೈತ ಸಮುದಾಯಕ್ಕೆ ಇದರಿಂದ ಬಹಳ ದೊಡ್ಡ ಯಶಸ್ಸು ದೊರೆಯಲಿದೆ ಎಂದರು.

Recommended Video

ಹಿಂದೂಗಳ ಬಗ್ಗೆ ಅವಹೇಳನಕಾರಿ ಮಾತುಕತೆ ನಡೆಸಿದ ಮುಸ್ಲಿಂ ಟೀಚರ್ ಮತ್ತು ಕ್ರೈಸ್ತ ಶಿಕ್ಷಕ | Oneindia Kannada

English summary
Eating of arecanut is not injurious to health. There are ongoing research into the benefits of arecanut use, which is the backbone of the lives of millions of farmers, but in many ways beneficial: Home Minister Araga Jnanendra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X