ಅಕ್ಕಿ ಬಗ್ಗೆ ತಜ್ಞರಿಂದ ಶಾಕಿಂಗ್ ಮಾಹಿತಿ ರಿವೀಲ್, ಏನದು?
ಇತ್ತೀಚೆಗೆ ನಾವು ಆಹಾರವಾಗಿ ಸೇವಿಸುವ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ ಎಂಬ ಅಂಶಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಗೋಬಿ ಮಂಚೂರಿ ಹಾಗೂ ಕಬಾಬ್‌ಗೆ ಬಳಸುವ ಕಲರ್, ಕೇಕ್, ಪಾನಿಪುರಿ ಸೇರಿದಂತೆ ಹಲವು ಪದಾರ್ಥಗಳಲ್ಲಿ ಮಾರಕ ಕೆಮಿಕಲ್‌ಗಳು ಬಳಕೆ ಮಾಡುತ್ತಿರುವುದನ್ನು ರಾಜ್ಯ ಸರ್ಕಾರವೇ ಬಯಲಿಗೆಳೆದಿತ್ತು.
ಎಲ್ಲೆಡೆಯೂ ಕಲಬೆರಕೆ ವಸ್ತುಗಳ ಬಳಕೆಯ ಬಗ್ಗೆಯೇ ಸುದ್ದಿಗಳು ಬರುತ್ತಿದ್ದು, ಇದೀಗ ಮತ್ತೊಂದು ಆಘಾತಕಾರಿ ವಿಚಾರವೊಂದು ಬಹಿರಂಗವಾಗಿದೆ. ಸಾಮಾನ್ಯವಾಗಿ ಬಹುತೇಕರು ಮೂರು ಹೊತ್ತಿನ ಊಟಕ್ಕೂ ಅನ್ನವನ್ನೇ ಪ್ರಧಾನವಾಗಿ ಬಳಸುತ್ತಾರೆ. ಆದರೆ ನಾವು ಬಳಸುತ್ತಿರುವ ಅಕ್ಕಿ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಕೃಷಿ ತಜ್ಞರು ಶಾಕಿಂಗ್ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಹೌದು, ಭತ್ತ ಬೆಳೆಯುವ ಹಂತದಲ್ಲೇ ಹೆಚ್ಚು ರಾಸಾಯನಿಕಗಳನ್ನು ಬಳಸಲಾಗುತ್ತಿದ್ದು, ಇದು ಮುಂದೆ ಜನರ ದೇಹದ ಸೇರಿ ಕ್ಯಾನ್ಸರ್‌ಗೂ ಎಡೆ ಮಾಡಿಕೊಡಬಲ್ಲದು ಎಂದು ಹೇಳಲಾಗಿದೆ. ರೈತರು ಹೆಚ್ಚು ಇಳುವರಿಗಾಗಿ ಮಾರಕವಾದಂತಹ ಕೆಮಿಕಲ್‌ಗಳನ್ನು ಬಳಸುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ.
ಈ ಅವೈಜ್ಞಾನಿಕ ವಿಧಾನದಿಂದ ಬೆಳೆದ ಅಕ್ಕಿಯು ಮುಂದೆ ತಿನ್ನಲು ರುಚಿಯಾಗಿದ್ದರೂ ಸಹ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂದು ತಜ್ಞರು ಹೇಳಿದ್ದಾರೆ. ಕೊನೆಗೆ ಅನ್ನದ ರೂಪದಲ್ಲಿ ವಿಷವೇ ನಮ್ಮ ಹೊಟ್ಟೆ ಸೇರುತ್ತಿದೆ ಎಂದೂ ಹೇಳಲಾಗಿದೆ.

ಸದ್ಯಕ್ಕೆ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಬೆಳೆದ ಅಕ್ಕಿ ಬಗ್ಗೆ ಈ ರೀತಿ ಆರೋಪ ಬಂದಿದೆ. ಜಿಲ್ಲೆಯ ಗಂಗಾವತಿಯನ್ನು ಭತ್ತದ ಕಣಜ ಎಂದೂ ಕರೆಯಲಾಗುತ್ತದೆ. ಇಂತಹ ಪ್ರಸಿದ್ಧಿ ಪಡೆದಿರುವ ಅಕ್ಕಿಯಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿರುವುದು ನಿಜಕ್ಕೂ ಎಲ್ಲರಿಗೂ ಶಾಕ್ ನೀಡಿದೆ.
ಗಂಗಾವತಿ, ಸಿಂಧನೂರು, ಸಿರಗುಪ್ಪ ಸೇರಿದಂತೆ ಹಲವು ಭಾಗಗಳಲ್ಲಿ ಭತ್ತ ಬೆಳೆಯಲು ವಿಷಕಾರಿ ಕೆಮಿಕಲ್‌ಗಳನ್ನು ಬಳಸಲಾಗುತ್ತಿದೆ ಎಂದು ಹೇಳಲಾಗಿದ್ದು, ಇದರಿಂದಾಗಿ ಕೃಷಿ ಭೂಮಿಯ ಫಲವತ್ತತೆ ಕೂಡ ಹಾಳಾಗುತ್ತಿದೆಯಂತೆ. ಈ ವಿಧಾನದಲ್ಲಿ ಬೆಳೆದ ಅಕ್ಕಿಯನ್ನು ಅನ್ನವಾಗಿ ಸೇವಿಸುವುದರಿಂದಲೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ರೈತರು ಲಾಭದ ಆಸೆಗಾಗಿ ಭತ್ತದ ಬೆಳೆಗೆ ಯಾವುದೇ ಹಾನಿಕಾರಕ ಕೆಮಿಕಲ್‌ಗಳನ್ನು ಬಳಸದೆ, ಹಿಂದಿನ ಪದ್ಧತಿಯಲ್ಲೇ ಕೃಷಿ ಮಾಡುವುದು ಒಳ್ಳೆಯದು. ಹಣದ ವ್ಯಾವೋಹಕ್ಕೆ ವಿಷವನ್ನು ಜನರಿಗೆ ನೀಡುವ ಪಾಪದ ಕೆಲಸ ಮಾಡಬೇಡಿ ಎಂದು ಕೃಷಿ ವಿವಿಯ ತಜ್ಞರು ಕಿವಿಮಾತು ಹೇಳಿದ್ದಾರೆ ಎಂದು ವರದಿಯಾಗಿದೆ.
ಕೊಪ್ಪಳ ಜಿಲ್ಲೆಯ ಹಲವು ಗ್ರಾಮೀಣ ಭಾಗದ ಜನರಿಗೆ ಕ್ಯಾನ್ಸರ್‌ಕಾರಕ ಲಕ್ಷಣಗಳು ಪತ್ತೆಯಾಗಿವೆಯಂತೆ. ಈ ಬಗ್ಗೆ ಅಲ್ಲಿನ ಜಿಲ್ಲಾಡಳಿತ ಕೂಡ ಮಾಹಿತಿ ಸಂಗ್ರಹಿಸಿದ್ದು, ಅದನ್ನು ಬಹಿರಂಗಪಡಿಸುತ್ತಿಲ್ಲ ಎಂದು ಹೇಳಲಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಕೃಷಿ ವಿಜ್ಞಾನಿಗಳು ಹೇಳಿದ್ದಾರೆ.
ಇತ್ತೀಚೆಗೆ ಮಾರುಕಟ್ಟೆಯಲ್ಲಿ ಭತ್ತದ ಬೆಳೆಯಲ್ಲಿ ಹೆಚ್ಚು ಇಳುವರಿ ನೀಡುವ ವಿಷಕಾರಿ ರಾಸಾಯನಿಕಗಳು ಲಗ್ಗೆ ಇಟ್ಟಿವೆ. ರೈತರು ಕೂಡ ಶ್ರಮ ತಗ್ಗುವ ನಿಟ್ಟಿನಲ್ಲಿ ಇಂತಹ ಕೆಮಿಕಲ್‌ಗಳ ಮೊರೆ ಹೋಗುತ್ತಿದ್ದಾರೆ. ಇದರ ಅರಿವು ಕೂಡ ರೈತರಿಗೆ ಇಲ್ಲ. ಭತ್ತವನ್ನು ಆಧುನಿಕ ವಿಧಾನಗಳಲ್ಲಿ ಬೆಳೆದು ಮಾರಾಟ ಮಾಡಿಬಿಡುತ್ತಾರೆ. ಕೊನೆಗೆ ಅದನ್ನು ತಿನ್ನುವ ಜನರು ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರೈತರು ಕೂಡ ಕಾಳಜಿ ವಹಿಸಬೇಕು ಎಂದು ಹೇಳಿದ್ದಾರೆ.












Click it and Unblock the Notifications