ಸೋಷಿಯಲ್ ಮಿಡಿಯಾಗೆ ಆಧಾರ್ ಕಡ್ಡಾಯಕ್ಕೆ ಆಗ್ರಹ: ಅಶ್ವಿನಿ ಪುನೀತ್ ರಾಜಕುಮಾರ್ ಬಗ್ಗೆ ಕೀಳು ಟ್ರೋಲ್: ದೂರು ದಾಖಲು

ಬೆಂಗಳೂರು, ಸೆಪ್ಟಂಬರ್ 05: ಸಾಮಾಜಿಕ ಜಾಲತಾಣವು ಹೆಚ್ಚಾಗಿ ಕೆಟ್ಟದ್ದಕ್ಕೆ, ಇತರರನ್ನು ಟ್ರೋಲ್ ಮಾಡಿ ನಿಂದಿಸಲು, ಬರೀ ನಕಾರಾತ್ಮಕ ವಿಚಾರಗಳಿಗೆ ಬಳಕೆ ಆಗುತ್ತಿದೆ ಎಂದನಿಸುತ್ತದೆ. ನಟ, ನಟಿಯರ ಫೋಟೋ, ವಿಡಿಯೋ ಇಟ್ಟುಕೊಂಡು ಕೆಟ್ಟ ಭಾಷೆಯಿಂದ ಟ್ರೋಲ್ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇತ್ತೀಚೆಗೆ ಸ್ಟಾರ್‌ನಟನ ಬಂಧನ ಬಳಿಕ ಇಂತಹ ಘಟನೆಗಳು ಹೆಚ್ಚಾಗಿವೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಡೀಪ್ ಫೇಕ್ ಫೋಟೋ ವೈರಲ್ ಆಗಿದ್ದು, ರಾಜವಂಶದ ಅಭಿಮಾನಿಗಳು ಇದರ ವಿರುದ್ಧ ದೂರು ನೀಡಿದ್ದಾರೆ.

ರಾಜವಂಶದ ಅಭಿಮಾನಿಗಳು ಅಶ್ವಿನಿ ಪುನೀತ್ ರಾಜಕುಮಾರ್ ಅವರ ವಿರುದ್ಧ ಟ್ರೋಲ್, ಅಸಹ್ಯ ಭಾಷೆ ಬಳಸಿ ಪೋಸ್ಟ್ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

Appu Fans Complaint Filed to KFCC against Who Bad Troll on Ashwini Puneeth Rajkumar

ಆಧಾರ್ ಲಿಂಕ್ ಕಡ್ಡಾಯಕ್ಕೆ ಒತ್ತಾಯ

ಇತ್ತೀಚೆಗೆ ಅಸಹ್ಯಕರ ಪೋಸ್ಟ್ ಹಾಕಿ ನಿಂದಿಸುವ ಕೆಲಸ ಹೆಚ್ಚಾಗುತ್ತಿದೆ. ಅದಕ್ಕಾಗಿ ನಕಲಿ ಖಾತೆ ಬಳಸುತ್ತಿದ್ದಾರೆ. ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣದೊಂದಿಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸುವಂತೆ ವಾಣಿಜ್ಯ ಮಂಡಳಿಯು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.

ತಾವಾಯಿತು, ತಮ್ಮ ಕೆಲಸವಾಯಿತು ಎಂದುಕೊಂಡಿದ್ದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಯೋಗೆಂದ್ರ ಪ್ರಸಾದ್ ಎಂಬ ಕಿಡಿಗೇಡಿ ಅತೀ ಕೆಟ್ಟ ಭಾಷೆಯಿಂದ ಲೇವಡಿ ಮಾಡಿದ್ದಾನೆ. ಜೊತೆಗೆ ತನ್ನೊಂದಿಗೆ ನಿಂತಿರುವಂತೆ ಅಶ್ವಿನಿಯವರ ಫೋಟೋ ಹಾಕಿಕೊಂಡು ಇಲ್ಲಸಲ್ಲದನ್ನು ಮಾತನಾಡಿದ್ದಾನೆ. ಇದು ಭಾರೀ ವೈರಲ್ ಆಗಿತ್ತು. ಸದ್ಯ ಅಭಿಮಾನಿಗಳು ದೂರು ನೀಡಿದ್ದಾರೆ.

Appu Fans Complaint Filed to KFCC against Who Bad Troll on Ashwini Puneeth Rajkumar

ದೂರು ಸ್ವೀಕರಿಸಿ ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌ಎಂ ಸುರೇಶ್ ಅವರು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಚಿತ್ರರಂಗ ಒಂದು ಕುಟುಂಬವಿದ್ದಂತೆ. ಇಂತಹ ಕೃತ್ಯ ಮಾಡಬಾರದು. ಇದು ಸರಿಯಲ್ಲ. ಪ್ರಕರಣ ಸಂಬಂಧ ಸೈಬರ್ ಪೊಲೀಸರಿಗೆ ದೂರು ನೀಡುವುದಾಗಿ ಅವರು ದೂರುದಾರರಿಗೆ ಭರವಸೆ ನೀಡಿದ್ದಾರೆ.

ಇಂತಹ ಕೃತ್ಯ ಎಸಗುವವರು ರಣಹೇಡಿಗಳು. ಧೈರ್ಯ ಇದ್ದರೆ ಎದುರು ನಿಂತು ಮಾತನಾಡಬೇಕು. ರಾಜಕುಮಾರ್ ಅವರ ಕುಟುಂಬಕ್ಕೆ ಒಂದು ಘನತೆ, ಮೌಲ್ಯ ಇದೆ. ಇಂಡಸ್ಟ್ರಿಯ ಗೌರವ ಹಾಳು ಮಾಡಬೇಡಿ. ಇಂತಹ ಕೃತ್ಯ ಮಾಡುವವರ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗುವುದು ಎಂದು ನಿರ್ಮಾಪಕ ಸಾ.ರಾ.ಗೋವಿಂದು ತಿಳಿಸಿದರು.

ಲೈಂಗಿಕ ಕಿರುಕುಳ: ಸಮಿತಿ ರಚನೆಗೆ ಒತ್ತಾಯ

ಸದ್ಯ ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ವಿರುದ್ಧ ಸಮಿತಿ ರಚಿಸಬೇಕು ಎಂಬ ಕೂಗು ಬಲವಾಗಿ ಕೇಳಿ ಬಂದಿದೆ. ಈ ಸಂಬಂಧ 150ಕ್ಕೂ ಹೆಚ್ಚು ಕಲಾವಿದರ ಸಹಿ ಹಾಕಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಹೆಣ್ಣು ಮಕ್ಕಳ ಪರವಾಗಿ ಫಿಲ್ಮ ಚೇಂಬರ್ ನಿಲ್ಲಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇಂದು ಪಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಈಕ್ವಾಲಿಟಿ (FIRE) ನೇತೃತ್ವದಲ್ಲಿ ನಟಿಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+