ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಪಮಾ ಶೆಣೈ ರಾಜೀನಾಮೆ ವಿವಾದ, ಉತ್ತರಗಳು ಬೇಕಾಗಿವೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಬೆಂಗಳೂರು, ಜೂನ್ 10 : ಅನುಪಮಾ ಶೆಣೈ ಅವರ ಪ್ರಕರಣ ಅವರ ರಾಜೀನಾಮೆ ಅಂಗೀಕಾರದಿಂದ ತಾರ್ಕಿ ಅಂತ್ಯ ಪಡೆದಿದೆ. ಆದರೆ, ಅನುಪಮಾ ಅವರ ಬೆಂಬಲಕ್ಕೆ ನಿಂತಿದ್ದ ನೂರಾರು ಜನರಿಗೆ ಹಲವು ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ. ರಾಜೀನಾಮೆ ಹಿಂದಿರುವ ಮರ್ಮವೇನು? ಎಂಬುದು ನಿಗೂಢ ರಹಸ್ಯವಾಗಿದೆ.

ಅನುಪಮಾ ಅವರ ಪ್ರಕಾರ ಅವರ ಯಾವುದೇ ಫೇಸ್‌ ಬುಕ್ ಖಾತೆ ಇಲ್ಲ. ಆದರೆ, ಅವರ ಹೆಸರಿನಲ್ಲಿರುವ ಖಾತೆಯಲ್ಲಿ ಇನ್ನೂ ಸ್ಟೇಟಸ್ ಅಪ್‌ಡೇಟ್ ಆಗುತ್ತಲೇ ಇದೆ. ಭಟ್ಕಳಕ್ಕೆ ಹೋಗುತ್ತೇನೆ ಎಂದು ಗುರುವಾರ ಕೂಡ್ಲಿಗಿಯಿಂದ ಹೊರಟ ಅನುಪಮಾ ಈಗ ಎಲ್ಲಿದ್ದಾರೆ? ಎಂಬುದು ಈಗ ಯಾರಿಗೂ ತಿಳಿದಿಲ್ಲ. [ಶೆಣೈ ಕೇಳಿದ ಪ್ರಶ್ನೆ ಫೇಸ್ಬುಕ್ ಎಂದ್ರೇನು?]

anupama shenoy

ಅನುಪಮಾ ಅವರ ವಿಚಾರದಲ್ಲಿ ಉತ್ತರ ಸಿಗಬೇಕಾದ ಪ್ರಶ್ನೆಗಳು ಹಲವಾರು ಇವೆ. ವಿ ಆರ್ ವಿತ್ ಯೂ ಮೇಡಮ್ ಎಂದು ನೂರಾರು ಜನರು ಹೇಳಿದ್ದರು. ಅವರ ಖಾತೆಯಲ್ಲಿನ ಸ್ಟೇಟಸ್‌ಗಳಿಗೆ ಬೆಂಬಲ ಕೊಟ್ಟಿದ್ದರು. ಆದರೆ, ಅನುಪಮಾ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡದೆ ಹೋಗಿದ್ದಾರೆ. [ಅನುಪಮಾ ಅವರೇ, ಆತ್ಮರಕ್ಷಣೆಗಾಗಿ ಪಿಸ್ತೂಲು ಇಟ್ಟುಕೊಳ್ಳಿ!]

ರಾಜಕೀಯ ಒತ್ತಡ ಬಂದಿದೆ, ಕೊಲೆ ಬೆದರಿಕೆ ಬಂದಿದೆ ಮುಂತಾದವುಗಳನ್ನು ಸುತ್ತಿ ಬಳಸಿಯೇ ಅವರು ಹೇಳಿದ್ದರು. ಪೊಲೀಸ್ ಅಧಿಕಾರಿಗಳಾದವರಿಗೆ ಕೊಲೆ ಬೆದರಿಕೆ ಬರುವುದು, ರಾಜಕೀಯ ಒತ್ತಡ ಬರುವುದು ತೀರಾ ಸಹಜ. ಖಾಕಿ ಹಾಕಿದ ಮೇಲೆ ವೃತ್ತಿಯಲ್ಲಿರುವ ಎಲ್ಲರೂ ಇದನ್ನು ಒಂದಲ್ಲ ಒಂದು ದಿನ ಎದುರಿಸಲೇ ಬೇಕಾಗುತ್ತದೆ. ['ದಯವಿಟ್ಟು ಕ್ಷಮಿಸಿ, ಕೂಡ್ಲಿಗಿಗೆ ಬರುವುದು ತಡವಾಯಿತು'!]

ಆ ಇಲಾಖೆಯ ಸ್ವರೂಪವೇ ಅಂತಹದು. ಅನೇಕ ಸಂದರ್ಭಗಳಲ್ಲಿ ಜನಪ್ರತಿನಿಧಿಗಳ ಆದೇಶಗಳಿಗೆ ತಲೆಬಾಗಬೇಕಾಗುತ್ತದೆ. ಕೆಲವೊಮ್ಮೆ ಕೆಟ್ಟ ಜನಪ್ರತಿನಿಧಿಗಳ ಕೈಕೆಳಗೂ ಕೆಲಸ ಮಾಡುವ ಸಂದರ್ಭ ಬರುತ್ತದೆ. ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿಯನ್ನು ಸಂಪೂರ್ಣ ತನ್ನ ತೋರು ಬೆರಳಲ್ಲಿ ಕುಣಿಸಲು ಸಾಧ್ಯವಿಲ್ಲ. ಹೆಚ್ಚೆಂದರೆ ವರ್ಗಾವಣೆ ಮಾಡಬಹುದು. [ಅಂದಹಾಗೆ, ಯಾರೀ ಅನುಪಮ?]

ಮೇಲ್ನೋಟಕ್ಕೆ ಅನುಪಮಾ ಅವರು ರಾಜೀನಾಮೆ ನೀಡಿದ್ದು ಏಕೆ? ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಯಾರಾದರೂ ಕೊಲೆ ಬೆದರಿಕೆಯೊಡ್ಡಿದ್ದರೆ ಏನು ಮಾಡಬೇಕು ಎನ್ನುವುದನ್ನು ಪೊಲೀಸ್ ಅಧಿಕಾರಿಗೆ ಕಲಿಸಿಕೊಡಬೇಕಾಗಿರಲಿಲ್ಲ. [ಅನುಪಮಾ ವರ್ಸಸ್ ಪರಮೇಶ್ವರ್ : ಇದುವರೆಗಿನ ಕಥೆಗಳು]

ತಮ್ಮ ಬಳಿ ಸಿಡಿ ಇದೆ, ಆಡಿಯೋ ಇದೆ ಎಂದೆಲ್ಲ ಅವರ ಫೇಸ್‌ ಬುಕ್ ಪುಟದಲ್ಲಿ ಸ್ಟೇಟಸ್ ಹಾಕಲಾಗಿದೆ. ಸಿಡಿ ಇರುವುದೇ ಆದರೆ, ಅದನ್ನು ಈವರೆಗೆ ಅನುಪಮಾ ಶೆಣೈ ತಮ್ಮ ಬಳಿ ಇಟ್ಟುಕೊಂಡಿದ್ದು ಏಕೆ? ಎನ್ನುವ ಪ್ರಶ್ನೆ ಬರುತ್ತದೆ. ಈ ಸಿಡಿ, ಆಡಿಯೋ ಇವುಗಳನ್ನು ಮುಂದಿಟ್ಟುಕೊಂಡು ಶೆಣೈ ಅವರು ಸಚಿವರನ್ನು ಬ್ಲಾಕ್‌ಮೇಲ್ ಮಾಡುವ ಉದ್ದೇಶವನ್ನು ಹೊಂದಿದ್ದರೇ? ಎಂಬ ಪ್ರಶ್ನೆಗೆ ಉತ್ತರ ಬೇಕಿದೆ.

ದೂರು ಏಕೆ ಕೊಡಲಿಲ್ಲ ? : ಗುರುವಾರ ಫೇಸ್‌ ಬುಕ್ ಖಾತೆ ನನ್ನದಲ್ಲ ಎಂದು ಅವರು ಬಾಂಬ್ ಸಿಡಿಸಿದ್ದಾರೆ. ಅನುಪಮಾ ಶೆಣೈ ಅವರ ಖಾತೆಯಲ್ಲಿ ಇಂತಹ ಸ್ಟೇಟಸ್‌ ಬಂದಿದೆ ಎಂದು ಮಾಧ್ಯಮಗಳಲ್ಲಿ ಮೂರು ದಿನಗಳಿಂದ ಸುದ್ದಿ ಬರುತ್ತಿದೆ. ನಿಜಕ್ಕೂ ಅದು ನಕಲಿ ಖಾತೆಯಾಗಿದ್ದರೆ ಶೆಣೈ ತಕ್ಷಣ ಪೊಲೀಸರಿಗೆ ಏಕೆ ದೂರು ಕೊಟಿಲ್ಲ ಎಂಬುದಕ್ಕೆ ಉತ್ತರ ಕೊಡುವವರು ಯಾರು?.

ಈ ಹಿಂದೆ ತನ್ನನ್ನು ವರ್ಗಾವಣೆ ಮಾಡಿದ್ದ ದ್ವೇಷವನ್ನು ಮುಂದಿಟ್ಟುಕೊಂಡು ಅನುಪಮಾ ಅವರು ಹತಾಶೆಯ ನಿರ್ಧಾರ ತೆಗೆದುಕೊಂಡಿದ್ದಾರೆಯೇ?. ಅಥವ ಅವರ ರಾಜೀನಾಮೆ ಪ್ರಕರಣದ ಹಿಂದೆ ಬೇರೆ-ಬೇರೆ ರಾಜಕೀಯ ಶಕ್ತಿಗಳ ಕೈವಾಡವಿದೆಯೇ?. ಅವರು ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯ ಸೇರುವ ಉದ್ದೇಶ ಹೊಂದಿದ್ದಾರೆಯೇ? ಎಂಬ ಪ್ರಶ್ನೆಗೆ ಅನುಪಮಾ ಅವರೇ ಉತ್ತರ ನೀಡಬೇಕು.

ಅನುಪಮಾ ಶೆಣೈ ಅವರ ವೃತ್ತಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ತಾಣಗಳಲ್ಲಿ ಬರುತ್ತಿರುವ ಸುದ್ದಿಗಳು ಬೇಡ ಬೇಡವೆಂದರೂ ಡಿ.ಕೆ.ರವಿಯವರನ್ನು ನೆನಪಿಸುತ್ತವೆ. ಈ ಪ್ರಕರಣದಲ್ಲಿ ಶೆಣೈ ಅವರು ಒಬ್ಬ ರಾಜಕೀಯ ವ್ಯಕ್ತಿಯಂತೆ ನಡೆದುಕೊಂಡಿದ್ದಾರೆ. ಪ್ರಕರಣದ ಕುರಿತು ಯಾವ ಸ್ಪಷ್ಟೀಕರಣವನ್ನೂ ನೀಡದೆ ಉಡಾಫೆಯ ಹೇಳಿಕೆ ನೀಡಿದ್ದಾರೆ. ಜನರ ಪ್ರಶ್ನೆಗೆ ಉತ್ತರ ಕೊಡುವವರು ಯಾರು?

English summary
Karnataka government on Thursday accepted the resignation of Anupama Shenoy, DySP Kudlgi sub-division, Ballari District. But the issue needs clarity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X