ಅಂಕೋಲಾ : ಬಾವಿಗೆ ಬಿದ್ದು 6 ವರ್ಷದ ಚಿರತೆ ಸಾವು
ಕಾರವಾರ, ಜೂನ್ 13 : ಬಾವಿಗೆ ಬಿದ್ದು ಆರು ವರ್ಷದ ಗಂಡು ಚಿರತೆ ಮೃತಪಟ್ಟ ಘಟನೆ ಅಂಕೋಲಾ ತಾಲೂಕಿನಲ್ಲಿ ನಡೆದಿದೆ. ಎರಡು ದಿನದ ಹಿಂದೆ ಕಾಡಿನಿಂದ ಚಿರತೆ ನಾಡಿಗೆ ಬಂದಿತ್ತು.
ಅಂಕೋಲಾ ತಾಲೂಕಿನ ಅಂದ್ಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎರಡು ದಿನದ ಹಿಂದೆ ಕಾಡಿನಿಂದ ನಾಡಿಗೆ ಚಿರತೆ ನೀರು ಅರಸಿಕೊಂಡು ಬಂದಿತ್ತು. ಅರುಣ್ ಗುನಗಾ ಎನ್ನುವವರ ತೋಟದ ಬಾವಿಯ ಬಳಿಗೆ ಬಂದಿದ್ದ ಚಿರತೆ ಬಾವಿಗೆ ಬಿದ್ದು ಸಾವನ್ನಪ್ಪಿದೆ.

ಸ್ಥಳೀಯರು ಯಾರೂ ಬಾವಿಗೆ ಚಿರತೆ ಬಿದ್ದಿದ್ದನ್ನು ಗಮನಿಸಿರಲಿಲ್ಲ. ಬುಧವಾರ ಬಾವಿಯ ನೀರಿನಲ್ಲಿ ಚಿರತೆಯ ಶವ ತೇಲುತ್ತಿತ್ತು. ಬಾವಿಗೆ ಬಿದ್ದ ಚಿರತೆ ಮೇಲೆ ಏಳಲು ಸಾಧ್ಯವಾಗದೇ ಮೃತಪಟ್ಟಿದೆ.

ಇಂದು ಚಿರತೆಯ ಶವ ಕಂಡ ಸ್ಥಳಿಯರು ಅರಣ್ಯ ಇಲಾಖೆಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಹಿರೇಗುತ್ತಿ ಅರಣ್ಯ ವಲಯದ ಆರ್‌ಎಫ್‌ಒ ಮೋಹನ್ ಬಿದರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ.











Click it and Unblock the Notifications