ಸಿಎಂ ಅನಿಲ ಭಾಗ್ಯ ಯೋಜನೆ: ಡಿ.15 ರೊಳಗೆ ಜಾರಿ
ಬೆಂಗಳೂರು, ನವೆಂಬರ್ 29: ಸಿಎಂ ಅನಿಲ ಭಾಗ್ಯ ಯೋಜನೆಗಿದ್ದ ತೊಡಕುಗಳು ನಿವಾರಣೆಯಾಗಿದ್ದು ಡಿಸೆಂಬರ್ 15ರೊಳಗೆ ಈ ಯೋಜನೆ ಜಾರಿಯಾಗಲಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಪರ್ಯಾಯವಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿ ಮಾಡಲು ಹೊರಟಿದ್ದ ಸಿಎಂ ಅನಿಲ ಭಾಗ್ಯ ಯೋಜನೆಗೆ ಸಾಕಷ್ಟು ತೊಡಕುಗಳು ಎದುರಾಗಿತ್ತು. ಈ ಯೋಜನೆಯಲ್ಲಿ ಎರಡು ಗ್ಯಾಸ್‌ಸ್ಟವ್, ಅಡುಗೆ ಅನಿಲ ಸಹಿತ 4,450 ರೂಪಾಯಿ ಮೊತ್ತದ ಅನಿಲ ಭಾಗ್ಯದ ಕಿಟ್ ಒಂದು ಲಕ್ಷ ಫಲಾನುಭವಿಗಳ ಕೈ ಸೇರಲಿದೆ.
ಯೋಜನೆಯಡಿ 30 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಹಂತ ಹಂತವಾಗಿ ಯೋಜನೆಯ ಸೌಲಭ್ಯವನ್ನು ತಲುಪಿಸಲಾಗುವುದು, ಮೊದಲ ಹಂತದಲ್ಲಿ ಡಿಸೆಂಬರ್ 15ರೊಳಗೆ ಒಂದು ಲಕ್ಷ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ದೊರೆಯಲಿದೆ ಎಂದು ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.

ಉರುವಲು ಬಳಕೆ ತಪ್ಪಿಸಲು ಈ ಯೋಜನೆ
ಬಡ ಕುಟುಂಬಗಳು ಉರುವಲು ಬಳಕೆ ಮಾಡುವುದನ್ನು ತಪಪ್ಇಸಿಸ ಅಡುಗೆ ಅನಿಲ ಬಳಸುವಂತೆ ಮಾಡಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿಗಳ ಉಜ್ವಲ ಯೋಜನೆ ರೂಪಿಸಿತ್ತು. ಈ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಸಿಲಿಂಡರ್‌ಗೆ ಗ್ಯಾಸ್ ಸ್ಟವ್ ಉಚಿತವಾಗಿ ವಿತರಿಸಲಾಗುತ್ತಿದೆ.

ಸ್ಟವ್ ಮೇಲೆ ಅನಿಲ ಭಾಗ್ಯ ಯೋಜನೆ ಎಂದು ಮುದ್ರಣ
ಸ್ಟವ್ ಮೇಲೆ ಸಿಎಂ ಅನಿಲ ಭಾಗ್ಯ ಯೋಜನೆ ಎಂದು ಮುದ್ರಿಸಲು ಅವಕಾಶ ಕೇಳಳಾಗಿತ್ತು, ಈ ಪ್ರಸ್ಥಾವನೆ ನಿರಾಕರಿಸಿದ ಕೇಂದ್ರಕ್ಕೆ ಸೆಡ್ಡುಹೊಡೆದು ಹಿಂದಿನ ಸರ್ಕಾರ ಪರ್ಯಾಯವಾಗಿ ಸಿಎಂ ಅನಿಲಭಾಗ್ಯ ಯೋಜನೆ ಜಾರಿಗೆ ಮುಂದಾಗಿತ್ತು.

ಒಂದು ಲಕ್ಷ ಫಲಾನುಭವಿಗಳು
ಮೊದಲ ಹಂತದಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಅನಿಲ ಭಾಗ್ಯ ಯೋಜನೆ ತಲುಪಿಸುವಂತೆ ನಿರ್ದೇಶನ ನೀಡಿದರು. ಈ ಮೊದಲು ಗುರುತಿಸಲಾಗಿದ್ದ ಒಂದು ಲಕ್ಷ ಫಲಾನುಭವಿಗಳ ಪೈಕಿ 31 ಸಾವಿರ ಮಂದಿ ಉಜ್ವಲ ಯೋಜನೆ ಫಲಾನುಭವಿಗಳಾಗಿರುವ ಹಿನ್ನೆಲೆಯಲ್ಲಿ ಹೊಸ ಫಲಾನುಭವಿಗಳನ್ನು ಗುರುತಿಸಲು ನಿರ್ದೇಶನ ನೀಡಲಾಗಿದೆ.

580 ಕೋಟಿ ಉಳಿತಾಯ
ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಅಳವಡಿಕೆ ಬಳಿಕ ನಕಲಿ ಮತ್ತು ಬೋಗಸ್ ಕಾರ್ಡ್ ಗಳಿಗೆ ಕಡಿವಾಣ ಬಿದ್ದಿದ್ದು, ರಾಜ್ಯದ ಬೊಕ್ಕಸಕ್ಕೆ 580 ಕೋಟಿ ರೂ ಉಳಿತಾಯವಾಗಿದೆ ಎಂದು ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.
-
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ












Click it and Unblock the Notifications