ಪುಟ್ಟಬಸಮ್ಮನ ಜಗಳದಿಂದ ಅಂಗನವಾಡಿ ಕೂಸು ಬಡ!
ಚಾಮರಾಜನಗರ, ಮೇ 24 : ಸ್ಥಳೀಯ ಜನಪ್ರತಿನಿಧಿ ಮತ್ತು ಅಂಗನವಾಡಿ ಕಾರ್ಯಕರ್ತೆಯರ ನಡುವಿನ ವೈಮನಸ್ಸಿನಿಂದಾಗಿ ಅಂಗನವಾಡಿ ಮಕ್ಕಳು ಬೀದಿಪಾಲಾದ ಘಟನೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಧುವನಹಳ್ಳಿ ಗ್ರಾಮದ ಜಿ.ವಿ.ಗೌಡ ಬಡಾವಣೆಯ ಅಂಗನವಾಡಿ ಕೇಂದ್ರ-3ರಲ್ಲಿ ಅಂಗನವಾಡಿಯಲ್ಲಿ ಪುಟ್ಟಬಸಮ್ಮ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಕೆಲದಿನಗಳಿಂದ ಸ್ಥಳೀಯ ಜನಪ್ರತಿನಿಧಿಯೊಂದಿಗೆ ಜಗ್ಗಾಟಕ್ಕೆ ಇಳಿದಿರುವ ಈಕೆ, ಅಂಗನವಾಡಿಗೆ ಬೀಗ ಜಡಿದು ಮನೆಯಲ್ಲೇ ಕುಳಿತಿರುವುದರಿಂದ ಮಕ್ಕಳು ಅಂಗನವಾಡಿ ಮುಂದೆ ಕೂರುವಂತಾಗಿದೆ. [ಪಿರಿಯಾಪಟ್ಟಣದಲ್ಲೊಂದು ಪರಿಸರ ಸ್ನೇಹಿ ಅಂಗನವಾಡಿ!]

ಕಾರ್ಯಕರ್ತೆ ಪುಟ್ಟಬಸಮ್ಮ ಅಂಗನವಾಡಿ ಕೇಂದ್ರಕ್ಕೆ ಬಾರದೆ, ಅಡುಗೆ ಸಿಬ್ಬಂದಿ ಶೀಲಾಗೂ ಬೀಗದ ಕೀ ನೀಡದಿರುವುದರಿಂದ ಅಮಾಯಕ ಮಕ್ಕಳು ಬಿಸಿಲಲ್ಲಿ ಒಣಗುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯ ನಿವಾಸಿಗಳ ಮನವಿಯಾಗಿದೆ.
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶೇಷಾದ್ರಿ ಅವರು ಪ್ರತಿಕ್ರಿಯಿಸಿ, ಸ್ಥಳಕ್ಕೆ ಭೇಟಿ ನೀಡಿ ಅಂಗನವಾಡಿ ಕೇಂದ್ರದ ಬಾಗಿಲು ತೆರೆಯಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.












Click it and Unblock the Notifications