ಅನಂತಕುಮಾರ್ ಹೆಗಡೆ ಮೆಂಟಲ್ ಗಿರಾಕಿ, ನಾಲ್ಕೂವರೇ ವರ್ಷ ಕೋಮಾದಲ್ಲಿ ಮಲಗಿದ್ರು: ಕಾಂಗ್ರೆಸ್ ಶಾಸಕ ಕಿಡಿ
ಮಂಡ್ಯ, ಜನವರಿ 18: ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ, ಮೆಂಟಲ್ ಗಿರಾಕಿ. ನಾಲ್ಕೂವರೇ ವರ್ಷ ಅವರಿಗೆ ವೋಟ್ ಕೊಟ್ಟ ಮತದಾರರನ್ನು ಮರೆತು ಕೋಮಾದಲ್ಲಿ ಮಲಗಿದ್ರು ಎಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ ಕಿಡಿಕಾರಿದ್ದಾರೆ.
ಈ ಕುರಿತು ಗುರುವಾರ ಮಾಧ್ಯಮಗಳ ಜೊತೆಗೆ ಶಾಸಕ ರವಿ ಕುಮಾರ್ ಮಾತನಾಡಿ, ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ರೆ ಜನ ಹಿಡಿದುಕೊಂಡು ಹೊಡೆಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದ ಅನಂತ ಕುಮಾರ್ ಹೆಗಡೆ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ. ನೀವು ಮಾತನಾಡಿದರೆ ಜನರೇ ನಿಮ್ಮನ್ನು ಹೊಡೆಯುತ್ತಾರೆ. ಅವನೊಬ್ಬ ಮೆಂಟಲ್ ಗಿರಾಕಿ ಎಂದು ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಾಲ್ಕೂವರೇ ವರ್ಷ ಅವರಿಗೆ ವೋಟ್ ಕೊಟ್ಟ ಮತದಾರರನ್ನು ಮರೆತು ಕೋಮಾದಲ್ಲಿ ಮಲಗಿದ್ರು. ಕುಂಭಕರ್ಣ ರೀತಿ ಮಲಗಿದ್ದರು. ಇವಾಗ ಎಲೆಕ್ಷನ್ ಅನ್ನೋ ಊಟ ಬಂದಿದೆ ಟಿಕೆಟ್‌ಗಾಗಿ ಹುಚ್ಚನ ರೀತಿ ಮಾತನಾಡ್ತಿದ್ದಾರೆ. ಜನ ಅವರನ್ನು ಹಿಡಿಕೊಂಡು ಹೊಡೆಯುತ್ತಾರೆ. ಸಿದ್ದರಾಮಯ್ಯ ಅವರು ಜನ ಮೆಚ್ಚಿದ ಮುಖ್ಯಮಂತ್ರಿ, ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ನಾಲಿಗೆ ಇದೆ ಅಂತ ಮಾತನಾಡಿದ್ರೆ ಜನ ಸಹಿಸಲ್ಲ ಎಂದು ಹೇಳಿದರು.
ಅನಂತಕುಮಾರ್ ಹೆಗಡೆ ಮೊದಲು ಮೆಂಟಲ್ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಲಿ, ಅಮೇಲೆ ಸಿದ್ದರಾಮಯ್ಯ ಬಗ್ಗೆ ಮಾತನಾಡಲಿ. ನಾಲ್ಕೂವರೇ ವರ್ಷ ಉತ್ತರ ಕರ್ನಾಟಕಕ್ಕೆ ಕಡೆದು ಕಟ್ಟೆ ಹಾಕಿಲ್ಲ. ಹುಚ್ಚು ಹಿಡಿದಿದೆ ಅಂತ ಸಿದ್ದರಾಮಯ್ಯ ಬಗ್ಗೆ ಮಾತನಾಡುವುದಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಸದ ಅನಂತಕುಮಾರ ಹೆಗಡೆ ವಿಚಾರವಾಗಿ ಬೆಳಗಾವಿಯಲ್ಲಿ ಎಂಎಲ್ ಸಿ ನಾಗರಾಜ್ ಯಾದವ ಮಾತನಾಡಿ, ನಮ್ಮ ರಾಜ್ಯ ಸರಕಾರವು ಅವರ ಮೇಲೆ ಕ್ರಿಮಿನಲ್ ಪ್ರೊಸಿಜರ್ ಪ್ರಕಾರ 153 ಎ ಹಾಕಿರುವುದು ಸಾಲದು. ದೇಶದಲ್ಲಿ ಅಶಾಂತಿ ಮೂಡಿಸುವ ವಿಚಾರಗಳಲ್ಲಿ ಮತ್ತು ಮಸೀದಿಗಳನ್ನ ಒಡಿತೇನಿ ಅನ್ನುವಂತದ್ದು ಸರಿಯಲ್ಲ.ಆದರೆ, ಅನಂತಕುಮಾರ ಹೆಗಡೆ ಅವರ ಆರೋಗ್ಯ ಸರಿ ಇದೆಯೋ ಇಲ್ವೋ ಗೊತ್ತಿಲ್ಲ. ಲೋಕಸಭಾ ಸದಸ್ಯನಾಗಿ ಆರು ಬಾರಿ ಆಯ್ಕೆ ಆಗಿರುವ ವ್ಯಕ್ತಿ ಹೆಗಡೆ. ಫೆ 20, 2020 ರಲ್ಲಿ ಮಹಾತ್ಮ ಗಾಂಧೀಜಿ ಬಗ್ಗೆ ಪ್ರಶ್ನೆ ಮಾಡಿದ ವ್ಯಕ್ತಿ ಸ್ವಾತಂತ್ರ್ಯ ಹೋರಾಟವನ್ನ ಡ್ರಾಮಾ ಅಂತಾ ಕರೆದ ವ್ಯಕ್ತಿ ಇವರು ಎಂದರು.

ಮಹಾತ್ಮಾ ಗಾಂಧೀಜಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ವ್ಯಕ್ತಿ ಆಗ ಬಿಜೆಪಿ ಸರಕಾರ ಇತ್ತು ಅವರ ಮೇಲೆ ದೇಶದ್ರೋಹ ಕೇಸ ಹಾಕಬೇಕಿತ್ತು. ಅಂದು ದೇಶದ್ರೋಹ ಕೇಸ್ ಹಾಕದೆ ಇದ್ದಿದ್ದಕ್ಕೆ ಇಂದು ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಏಕವಚನದಲ್ಲೆ ಮಾತನಾಡುತ್ತಿದ್ದಾರೆ. ರಾಜ್ಯದ ಏಳು ಕೋಟಿ ಜನರನ್ನ ಪ್ರತಿನಿಧಿಸುವ ಮುಖ್ಯಮಂತ್ರಿಗಳಿಗೆ ಮಾತನಾಡಿದ್ದು ಈ ರಾಜ್ಯಕ್ಕೆ ಮಾಡಿರತಕ್ಕಂತ ನಾಡದ್ರೋಹ ಕೆಲಸ. ಅನಂತಕುಮಾರ ಹೆಗಡೆ ಅವರು ನಾಗರಿಕರಾಗಿರಲು ನಾಲಾಯಕರು ಎಂದು ಕಿಡಿಕಾರಿದ್ದಾರೆ.
ಹಿಂದೂಗಳ, ಮುಸ್ಲಿಂರ ಬಗ್ಗೆ ಮಾತನಾಡತೇರಿ ನಾನು ಒಬ್ಬ ಯಧು ವಂಶದಿಂದ ಬಂದವನು ನಿಮ್ಮಕ್ಕಿಂತ ಹೆಮ್ಮೆಯಿಂದ ಮಾತನಾಡುತ್ತೇನೆ. ಹಿಂದೂತ್ವದಲ್ಲಿ ನಂಬಿಕೆ ಇಲ್ಲದೆ ಇರಬಹುದು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟದ್ದೇನೆ. ವಾಜಪೇಯಿ ಅವರು ಹೇಳಿದ ಹಾಗೇ ಹಿಂದೂ ಧರ್ಮ ಸರ್ವೋಜನ ಸುಖಿನೋ ಭವ ಎಂದ ಹಾಗೆ. ಚುನಾವಣೆ ಬಂದಾಗ ಯುದ್ದ ಭೂಮಿ ಎಂದು ಸಮಾಜವನ್ನ ಒಡೆಯತಕ್ಕಂತದ್ದು. ಈಸ್ಟ್ ಇಂಡಿಯಾ ಕಂಪನಿಯವರು ಮಾಡತಾ ಇದ್ದರಲ್ಲಾ ಹಾಗೇ ಡಿವೈಡ್ ಹಾಗೇ ನೀವು ಮಾಡತ್ತಾ ಇದ್ದೀರಾ.ಮುಖ್ಯಮಂತ್ರಿಗಳಿಗೆ ಸವಾಲ ಹಾಕ್ತೀರಾ ನೀವು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿಕೆ ಅವಿವೇಕಿಗಳು, ನಿಮ್ಮಂತಹ ನಾಲಾಯಕಗಳ ಜೊತೆ ಚರ್ಚೆ ಮುಖ್ಯಮಂತ್ರಿಗಳು ಮಾಡುವ ಅವಶ್ಯಕತೆ ಇಲ್ಲ. ನನ್ನಂತಹ ಕಾರ್ಯಕರ್ತರು ಮಾತನಾಡಲಿಕೆ ತಯಾರಿದ್ದೇವೆ ಎಂದು ಕುಟುಕಿದರು.
ಹಿಂದೂತ್ವದಲ್ಲಿ ತಾಯಿ ಎದೆ ಹಾಲು ಕುಡದಿದ್ದೇವೆ ಎನ್ನುವ ಅನಂತಕುಮಾರ ಹೆಗಡೆ ಹೇಳಿಕೆ ವಿಚಾರವಾಗಿ ಮಾತನಾಡಿ, ನಾವೆಲ್ಲಾ ತಾಯಿ ಭುವನೇಶ್ವರಿ ಹೊಟ್ಟೆಯಲ್ಲಿ ಹುಟ್ಟಿರುವ ಭಾರತಾಂಬೆಯ ಮಕ್ಕಳು. ರಾಮಜನ್ಮ ವಿಚಾರದಲ್ಲಿ 140 ಕೋಟಿ ಜನರು ತಾಯಿ ಭಾರತಾಂಬೆಯ ಮಕ್ಕಳಾಗಿ ಕೆಲಸ ಮಾಡತ್ತಕ್ಕಂತವರು ನಾವೆಲ್ಲಾ. ಎಲ್ಲರೂ ಕೂಡಾ ತಾಯಿ ಎದೆ ಹಾಲು ಕುಡದು ಬೆಳೆದಂತವರು ಅನಂತಕುಮಾರ ಹೆಗಡೆ ನೀನ ಒಬ್ಬನೆ ಅಲ್ಲ.ನನ್ನ ಪಕ್ಷ ಒಳ್ಳೆಯ ಸಂಸ್ಕೃತಿ ಹೇಳಿಕೊಟ್ಟಿದೆ ನಿನ್ನ ಹಾಗೇ ಮಾತಾಡಲ್ಲ. ಹಿಂದೂ ಧರ್ಮಕ್ಕೆ ಅಪಮಾನ ಅಂತಾ ಇದ್ದರೆ ಈ ಅನಂತಕುಮಾರ ಹೆಗಡೆಯಿಂದ ಎಂದು ಹೇಳಿದರು.












Click it and Unblock the Notifications