ಜಿಲ್ಲೆಗೆ ಮೋದಿ ಬಂದರೂ ಕಾರ್ಯಕ್ರಮಕ್ಕೆ ಗೈರಾದ ಅನಂತ್‌ ಕುಮಾರ್‌ ಹೆಗಡೆ: ಯಾಕೆ?

ಉತ್ತರ ಕನ್ನಡ,ಮೇ4: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿದೆ. ಆಡಳಿತರೂಢ ಬಿಜೆಪಿ ಮತ್ತೆ ಮರಳಿ ಅಧಿಕಾರವನ್ನ ಪಡೆಯಲು ಸಜ್ಜಾಗಿದ್ದು, ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಜೋರಾಗಿದೆ.

ಚುನಾವಣೆ ಘೋಷಣೆ ಬಳಿಕ ರಾಜ್ಯಕ್ಕೆ ಹಲವು ಬಾರೀ ರಾಜ್ಯದಲ್ಲಿ ಅಬ್ಬರದ ಪ್ರಚಾರವನ್ನ ನಡೆಸಿರವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ಭೇಟಿ ನೀಡಿದ್ದು, ಜಿಲ್ಲೆಯ ಸಂಸದರು ಹಾಗೂ ಮಾಜಿ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದರೂ ಸಮಾವೇಶಕ್ಕೆ ಆಗಮಿಸದೇ ಇರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Ananth Kumar Hegde Opts Out of attending PM Modi Election rally in Uttara Kannada, Know Why

ಅಂಕೋಲಾದಲ್ಲಿ ಬುಧವಾರ ಪ್ರಚಾರ ಸಭೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸದರಾದ ಅನಂತ್‌ ಕುಮಾರ್‌ ಹೆಗಡೆಯವರು ಸಹ ಪ್ರಚಾರ ಸಭೆ ಆಗಮಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಮೋದಿ ಸಮಾವೇಶಕ್ಕೆ ಆಗಮಿಸಿದರು ಅನಂತ್‌ ಕುಮಾರ್‌ ಹೆಗಡೆ ಪ್ರಚಾರ ಕಾರ್ಯದಿಂದ ಸಾಕಷ್ಟು ಅಂತರವನ್ನ ಕಾಯ್ದುಕೊಂಡಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಈವರೆಗೆ ತಮ್ಮ ಪಕ್ಷದ ಅಭ್ಯರ್ಥಿ ಪರ ಅನಂತ್‌ಕುಮಾರ್ ಪ್ರಚಾರಕ್ಕೆ ಆಗಮಿಸಿರಲಿಲ್ಲ. ಪಕ್ಷದ ನಾಯಕರ ಮೇಲೆ ಅನಂತ್ ಮುನಿಸಿಕೊಂಡಿದ್ದಾರೆ ಎನ್ನುವ ಚರ್ಚೆ ಸಹ ನಡೆದಿತ್ತು.

ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಸಂಸದ ಆನಂತ್‌ ಕುಮಾರ್‌ ಹೆಗಡೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಈ ಎಲ್ಲಾ ಗೊಂದಲ ಸರಿ ಹೋಗಲಿದ್ದು ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರವನ್ನ ನಡೆಸುತ್ತಾರೆ, ಪರಿಣಾಮಕಾರಿಯಾಗಿ ಬಾಷಣ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಮೋದಿ ಮೊದಲದ ಬಾರಿಗೆ ಬಂದರು ಪ್ರಚಾರ ಸಭೆಗೆ ಆಗಮಿಸದೇ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎನ್ನಲಾಗಿದೆ.

ಹಲವು ತಿಂಗಳುಗಳಿಂದ ಸಕ್ರಿಯ ರಾಜಕಾರಣದಿಂದ ದೂರ ಇರುವ ಅನಂತ್‌ಕುಮಾರ್ ಹೆಗಡೆ ಅವರ ಅನಾರೋಗ್ಯ ಹಿನ್ನಲೆಯಲ್ಲಿ ಆಗಮಿಸಿಲ್ಲ ಎಂದರೆ, ಇನ್ನು ಕೆಲವರು ಅವರ ವಿದೇಶಕ್ಕೆ ತೆರಳಿದ ಹಿನ್ನಲೆಯಲ್ಲಿ ಆಗಮಿಸಿಲ್ಲ ಎಂದಿದ್ದರು. ಬಿಜೆಪಿ ಹೈಕಮಾಂಡ್‌ ನಾಯಕರ ಮೇಲೆ ಹಾಗೂ ಪಕ್ಷದ ಮೇಲೆ ಮುನಿಸಿಕೊಂಡೇ ಅನಂತ್‌ಕುಮಾರ್ ಆಗಮಿಸದೇ ಸುಮ್ಮನಾಗಿದ್ದಾರೆ ಎನ್ನುವ ಚರ್ಚೆ ಸಹ ನಡೆದಿದೆ ಎನ್ನಲಾಗಿದೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಓಡಾಟ ನಡೆಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಅನಂತ್‌ಕುಮಾರ್ ಹೆಗಡೆ ಸಹಕಾರಿಯಾಗಿದ್ದರು. ಆದದೆ, ಈ ಬಾರಿ ಯಾರೊಬ್ಬರ ಪರವೂ ಅನಂತ್‌ಕುಮಾರ್ ಪ್ರಚಾರ ನಡೆಸಿಲ್ಲ. ಪಕ್ಷದ ನಾಯಕರು ಅನಂತ್‌ಕುಮಾರ್ ಹೆಗಡೆ ಅವರ ನಡೆಗೆ ಸಿಟ್ಟಾಗಿದ್ದಾರೆ ಎನ್ನಲಾಗಿದೆ.

ಇನ್ನೂ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರದಿಂದ ದೂರ ಉಳಿದಿರುವ ಅನಂತ್‌ಕುಮಾರ್ ಹೆಗಡೆ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+