ಗೆಳೆಯನ ನೆನಪಲ್ಲಿ ಯಡಿಯೂರಪ್ಪ ಭಾವುಕ ಟ್ವೀಟ್
Recommended Video
ಬೆಂಗಳೂರು, ನವೆಂಬರ್ 12 : ಕೇಂದ್ರ ಸಚಿವ, ಬಿಜೆಪಿಯ ನಾಯಕ ಅನಂತ್ ಕುಮಾರ್ ವಿಧಿವಶರಾಗಿ ಒಂದು ವರ್ಷ ಕಳೆದಿದೆ. ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತನ ನೆನಪಿನಲ್ಲಿ ಭಾವುಕ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ಬೆಳಗ್ಗೆ ಯಡಿಯೂರಪ್ಪ, "ನನ್ನ ಪರಮಾಪ್ತ ಶ್ರೀ ಅನಂತ್ ಕುಮಾರ್ ಅವರು ನಮ್ಮನ್ನಗಲಿದ ದಿನ ನೆನೆದರೆ ಮನಸ್ಸು ಭಾರವಾಗುವುದು" ಎಂದು ಟ್ವೀಟ್ ಮಾಡಿದ್ದಾರೆ. ಆ ಮೂಲಕ ಆತ್ಮೀಯ ಗೆಳೆಯನ ನೆನಪು ಮಾಡಿಕೊಂಡಿದ್ದಾರೆ.
ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೇಂದ್ರ ಸಚಿವ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ 2019ರ ನವೆಂಬರ್ 12ರ ಮುಂಜಾನೆ 3ಗಂಟೆ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು.

ಇಂದು ಅನಂತ್ ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷ. ಆದ್ದರಿಂದ, ಯಡಿಯೂರಪ್ಪ ಬೆಳಗ್ಗೆಯೇ ಆತ್ಮೀಯ ಗೆಳೆಯನನ್ನು ನೆನಪು ಮಾಡಿಕೊಂಡು ಟ್ವೀಟ್ ಮಾಡಿದ್ದಾರೆ.
ಅನಂತ್ ಕುಮಾರ್ ಸಾವು ಕರ್ನಾಟಕ ಬಿಜೆಪಿಗೆ ಬಹುದೊಡ್ಡ ನಷ್ಟ ಉಂಟು ಮಾಡಿದೆ.ಬಿಜೆಪಿಯ ಹೈಕಮಾಂಡ್ ಮಟ್ಟದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದ ಅನಂತ್ ಕುಮಾರ್ ಕರ್ನಾಟಕ ಮತ್ತು ದೆಹಲಿ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು.
ಯಡಿಯೂರಪ್ಪ ಟ್ವೀಟ್
ಸರಳ ಸಜ್ಜನಿಕೆಯ ವ್ಯಕ್ತಿ, ಸಂಘಟನಾ ಚತುರ, ರಾಜ್ಯ ಮತ್ತು ಕೇಂದ್ರಕ್ಕು ಕೊಂಡಿಯಂತಿದ್ದ, ಅದ್ವಿತೀಯ ನಾಯಕ, ನನ್ನ ಪರಮಾಪ್ತ ಶ್ರೀ #ಅನಂತ್ ಕುಮಾರ್ ಅವರು, ನಮ್ಮನ್ನಗಲಿದ ದಿನ ನೆನೆದರೆ ಮನಸ್ಸು ಭಾರವಾಗುವುದು.ದೇಶಕ್ಕಾಗಿ ನೀಡಿದ ಸೇವೆಯಿಂದ ಅವರು ಸದಾ ಜೀವಂತ. ಅದಮ್ಯ ಚೇತನ ಅನಂತ್ ಕುಮಾರ್ ಅವರ ಪುಣ್ಯತಿಥಿಯಂದು ನನ್ನ ಭಾವಪೂರ್ಣ ಶ್ರದ್ಧಾಂಜಲಿ. pic.twitter.com/g8PJYNetz4
— B.S. Yediyurappa (@BSYBJP) November 11, 2019












Click it and Unblock the Notifications