'ಸಿದ್ದರಾಮಯ್ಯ ಕುಂಭಕರ್ಣ, ರಾಜ್ಯದ್ದು ಕುಂಭಕರ್ಣ ಸರ್ಕಾರ'

Posted By: Gururaj
Subscribe to Oneindia Kannada

ಬೆಂಗಳೂರು, ಜನವರಿ 18 : 'ಸಿದ್ದರಾಮಯ್ಯ ಕುಂಭಕರ್ಣ. ರಾಜ್ಯದ ಸರ್ಕಾರ ಕುಂಭಕರ್ಣನ ಸರ್ಕಾರ' ಎಂದು ಕೇಂದ್ರ ಸಚಿವ ಅನಂತ ಕುಮಾರ್ ಲೇವಡಿ ಮಾಡಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅನಂತ ಕುಮಾರ್, 'ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಂಭಕರ್ಣನ ವಂಶದವರು' ಎಂದು ವ್ಯಂಗ್ಯವಾಡಿದರು.

ಫೆ. 16ರಂದು ಸಿದ್ದರಾಮಯ್ಯ ಅವರಿಂದ ಕೊನೆಯ ಬಜೆಟ್ ಮಂಡನೆ

'ಕರ್ನಾಟಕದಲ್ಲಿ ಆಡಳಿತದ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕುಂಭಕರ್ಣನ ಸರ್ಕಾರ. ಸರ್ಕಾರ ಮುಂದಿನ ತಿಂಗಳು ಬಜೆಟ್ ಮಂಡನೆ ಮಾಡಲು ಹೊರಟಿದೆ. ಅದಕ್ಕೂ ಮುನ್ನ ಹಿಂದಿನ ಬಜೆಟ್‌ ಬಗ್ಗೆ ಸಿದ್ದರಾಮಯ್ಯ ಒಮ್ಮೆ ನೋಡಲಿ' ಎಂದರು.

 Ananth Kumar criticizes Karnataka Congress government

'ಈ ಸರ್ಕಾರದ ಆರ್ಥಿಕ ವಿಶ್ಲೇಷಣೆ ಬಂದಿದೆ. ಹಿಂದಿನ ಬಜೆಟ್‌ನಲ್ಲಿ ಮೀಸಲಾಗಿಟ್ಟಿದ್ದ ಅನುದಾನದಲ್ಲಿ ಶೇ 50ರಷ್ಟನ್ನು ಸಿದ್ದರಾಮಯ್ಯ ಅವರು ಖರ್ಚು ಮಾಡಿಲ್ಲ. ಜನರ ಹಣದಲ್ಲಿ ಸಾಧನಾ ಸಮಾವೇಶ ನಡೆಸಿದ್ದಾರೆ' ಎಂದು ಅನಂತ ಕುಮಾರ್ ರೋಪಿಸಿದರು.

ಕರ್ನಾಟಕದಲ್ಲಿ ಈ ವರ್ಷ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸರ್ಕಾರದ ಕೊನೆಯ ಬಜೆಟ್‌ ಅನ್ನು ಫೆ.16ರಂದು ಮಂಡನೆ ಮಾಡಲಿದ್ದಾರೆ. ಫೆ.16 ರಿಂದ 28ರ ತನಕ ಈ ಬಾರಿಯ ಬಜೆಟ್ ಅಧಿವೇಶ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union Minister of Chemicals and Fertilizers Ananth Kumar criticized Chief Minister Siddaramaiah lead Congress government. He alleged that Siddaramaiah not utilized fund allotted in his previous budget.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ