ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಸಂದರ್ಶನ

Recommended Video

      ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಸಂದರ್ಶನ | Onendia Kannada

      ಮಂಗಳೂರು ವ್ಯಾಪ್ತಿಗೆ ಬರುವ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮಂಗಳೂರು (ಉಳ್ಳಾಲ) ಕ್ಷೇತ್ರವೊಂದನ್ನು ಬಿಟ್ಟು, ಮಂಗಳೂರು ನಗರ - ಉತ್ತರ ಮತ್ತು ದಕ್ಷಿಣ ಕ್ಷೇತ್ರವನ್ನು ಈ ಬಾರಿ ಬಿಜೆಪಿ ಗೆದ್ದಿದೆ. ಗಮನಿಸಬೇಕಾದ ಅಂಶವೇನಂದರೆ, ಗೆದ್ದ ಇಬ್ಬರೂ ಹೊಸಮುಖಗಳು.

      ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆಯ ನಂತರ ಬಂಟ್ಸ್ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಯಿತು, ಬಿಲ್ಲವರನ್ನು ಕಡೆಗಣಿಸಲಾಯಿತು ಎನ್ನುವ ಅಸಮಾಧಾನ ಹೆಚ್ಚಿತ್ತು. ಇದು, ಕಾಂಗ್ರೆಸ್ಸಿಗೆ ಅನುಕೂಲವಾಗಬಹುದು ಎನ್ನುವ ಮಾತು ಕೇಳಿ ಬರುತ್ತಿತ್ತು.

      ಆದರೆ, ಇದನ್ನೆಲ್ಲಾ ಮೀರಿ, ಬಿಜೆಪಿ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿತ್ತು. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಡಾ. ಭರತ್ ಶೆಟ್ಟಿ ವೈ, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಮೊಯಿನುದ್ದೀನ್ ಬಾವಾ ಅವರನ್ನು 26,648 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು.

      ವೃತ್ತಿಯಲ್ಲಿ ಮಂಗಳೂರು ನಗರದ ಎಜೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ನಲ್ಲಿ ಪ್ರಿನ್ಸಿಪಲ್ ಆಗಿರುವ ಭರತ್ ಶೆಟ್ಟಿ, 'ಒನ್ ಇಂಡಿಯಾ' ಗೆ ಸಂದರ್ಶನ ನೀಡಿದ್ದಾರೆ. ಅವರ ಸಂದರ್ಶನದ ಪ್ರಮುಖಾಂಶ,

      ಪ್ರ: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಪ್ರಭಾವ ಯಾವರೀತಿಯಿದೆ?
      ಭರತ್ ಶೆಟ್ಟಿ: ಅವರು ಆರ್ ಎಸ್ ಎಸ್ ಪ್ರಮುಖರು ಮತ್ತು ಹಿರಿಯರು. ಅವರಿಗೆ ಅವರದ್ದೇ ಆದ ಪ್ರಭಾವ ಇರುತ್ತದೆ, ಸಂಘದ ಚೌಕಟ್ಟಿನಲ್ಲಿ ಯಾವರೀತಿ ಕೆಲಸ ಮಾಡಬೇಕೋ, ಅದನ್ನು ಮಾಡಿಕೊಂಡು ಬಂದಿದ್ದಾರೆ, ರಾಜಕೀಯ ಬೇರೆ.

       ಅತಿವೃಷ್ಟಿಯಿಂದ ಜನರು ತುಂಬಾ ತೊಂದರೆ ಅನುಭವಿಸಿದ್ದಾರೆ

      ಅತಿವೃಷ್ಟಿಯಿಂದ ಜನರು ತುಂಬಾ ತೊಂದರೆ ಅನುಭವಿಸಿದ್ದಾರೆ

      ಪ್ರ: ಕರಾವಳಿಯ ಶಾಸಕರಲ್ಲಿ ಈ ಪ್ರಶ್ನೆಯನ್ನು ಕೇಳುತ್ತಿದ್ದೇವೆ, ಬಜೆಟಿನಲ್ಲಿ ಸರಕಾರ ನಿಮ್ಮ ಭಾಗವನ್ನು ಕಡೆಗಣಿಸಿದೆಯಾ?

      ಭರತ್ ಶೆಟ್ಟಿ: ನೂರಕ್ಕೆ ನೂರು ಪರ್ಸೆಂಟ್ ನಮ್ಮ ಭಾಗವನ್ನು ಸರಕಾರ ನೆಗ್ಲೆಕ್ಟ್ ಮಾಡಿದೆ. ಇದು ಮತದಾರರ ಮೇಲೆ ಸೇಡು ತೀರಿಸಿಕೊಳ್ಳುವ ನಿರ್ಧಾರ, ಜೆಡಿಎಸ್ ಮತ್ತು ಕಾಂಗ್ರೆಸ್ ಇಬ್ಬರೂ ಸೇರಿ ಬಜೆಟ್ ನಲ್ಲಿ ನಮ್ಮನ್ನು ಕಡೆಗಣಿಸಿದ್ದಾರೆ. ಸಂಪೂರ್ಣವಾಗಿ ರಾಜಕೀಯ ಮಾಡಿದ್ದಾರೆ. ಮೊದಲೇ ಅತಿವೃಷ್ಟಿಯಿಂದ ಜನರು ತುಂಬಾ ತೊಂದರೆ ಅನುಭವಿಸಿದ್ದಾರೆ. ಮಳೆನೀರು ಮನೆಯೊಳಗೆ ನುಗ್ಗಿ ತುಂಬಾ ತೊಂದರೆಯಾಗಿದೆ.

      ಇದರಲ್ಲಿ ರಾಜಕೀಯ ಮಾಡದೇ ಒಂದೊಳ್ಳೆ ಪ್ಯಾಕೇಜ್ ಸರಕಾರದಿಂದ ಬರುತ್ತೆ ಎಂದು ಆಶಾಭಾವನೆ ಇಟ್ಟುಕೊಂಡಿದ್ದೆವು. ಆದರೆ, ಕರಾವಳಿ ಎನ್ನುವ ಪದವನ್ನೇ ಮುಖ್ಯಮಂತ್ರಿಗಳು ಉಪಯೋಗಿಸಲಿಲ್ಲ. ನಮ್ಮ ಭಾಗದಲ್ಲಿ ರೈತರ ಸಾಲ ಅಷ್ಟು ಉಪಯೋಗವಾಗುವುದಿಲ್ಲ, ಮೀನುಗಾರರ ಸಾಲಮನ್ನಾ ನಮಗೆ ಮುಖ್ಯ. ಪ್ರವಾಸೋದ್ಯಮದಲ್ಲಿ ನಮ್ಮ ಕರಾವಳಿಯ ಮೂರು ಜಿಲ್ಲೆಗಳು ಪ್ರಮುಖ ಸ್ಥಾನ ಪಡೆದಿವೆ. ಎಲ್ಲವನ್ನೂ ಸರಕಾರ ಕಡೆಗಣಿಸಿದೆ.

       ನಡೆಯುತ್ತಿರುವ ಬೆಳವಣಿಗೆಯಿಂದ ರಾಜಕೀಯ ನಿಮಗೆ ಬೇಸರ ತಂದಿದೆಯಾ?

      ನಡೆಯುತ್ತಿರುವ ಬೆಳವಣಿಗೆಯಿಂದ ರಾಜಕೀಯ ನಿಮಗೆ ಬೇಸರ ತಂದಿದೆಯಾ?

      ಪ್ರ: ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದೀರಾ, ನಡೆಯುತ್ತಿರುವ ಬೆಳವಣಿಗೆಯಿಂದ ರಾಜಕೀಯ ನಿಮಗೆ ಬೇಸರ ತಂದಿದೆಯಾ?

      ಭರತ್ ಶೆಟ್ಟಿ: ರಾಜಕೀಯಕ್ಕೆ ಬರಬೇಕೆಂದು ನಾನು ನಿರ್ಧರಿಸಿದ್ದಾಗ, ರಾಜಕೀಯದಲ್ಲಿ ಇದೆಲ್ಲಾ ಇರುತ್ತೆ ಎನ್ನುವ ಮಾಹಿತಿ ನನಗಿತ್ತು. ನಡೆದ ಬೆಳವಣಿಗೆಗಳು ನನಗೆ ಬೇಸರ ತಂದಿಲ್ಲ, ಆದರೆ ಎಲ್ಲಾ ಪಕ್ಷಗಳಲ್ಲಿ ಯುವಕರು, ವಿದ್ಯಾವಂತರಿದ್ದಾರೆ. ಇದು ಇನ್ನೂ ಹೆಚ್ಚಾದರೆ, ಅಸೆಂಬ್ಲಿಯ ಘನತೆ ಹೆಚ್ಚಾಗುತ್ತದೆ.

       ಬಿಜೆಪಿಯ ಅಭೂತಪೂರ್ವ ಜಯಕ್ಕೆ ಕಾರಣವೇನು?

      ಬಿಜೆಪಿಯ ಅಭೂತಪೂರ್ವ ಜಯಕ್ಕೆ ಕಾರಣವೇನು?

      ಪ್ರ: ಅವಳಿ ಜಿಲ್ಲೆಗಳಲ್ಲಿ ಬಿಜೆಪಿಯ ಅಭೂತಪೂರ್ವ ಜಯಕ್ಕೆ ಕಾರಣವೇನು?

      ಭರತ್ ಶೆಟ್ಟಿ: ಇದಕ್ಕೆ ಎರಡು ಕಾರಣ, ದಕ್ಷಿಣಕನ್ನಡ ಮತ್ತು ಉಡುಪಿ ವಿದ್ಯಾವಂತರು ಇರುವ ಜಿಲ್ಲೆ. ಸುಲಭವಾಗಿ ನಮ್ಮ ಮತದಾರರನ್ನು ಮೋಸಮಾಡಲು ಆಗುವುದಿಲ್ಲ. ಹಿಂದಿನ ಸರಕಾರದ ಭ್ರಷ್ಟಾಚಾರ ಅತಿರೇಕಕ್ಕೆ ಹೋಗಿತ್ತು. ಹಿಂದೂ ವಿರೋಧಿ ನೀತಿ ಕಾಂಗ್ರೆಸ್ಸಿಗೆ ಮುಳುವಾಯಿತು. ಈ ಎರಡು ಕಾರಣಗಳು ಬಿಜೆಪಿ ಗೆಲುವಿಗೆ ಸಹಾಯವಾಯಿತು.

       ಫಲಿತಾಂಶ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಪೂರಕವಾಗಲಿದೆ?

      ಫಲಿತಾಂಶ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಪೂರಕವಾಗಲಿದೆ?

      ಪ್ರ: ಎರಡು ಜಿಲ್ಲೆಯ ಫಲಿತಾಂಶ ಪಕ್ಷಕ್ಕೆ ಯಾವ ರೀತಿ ಸಾರ್ವತ್ರಿಕ ಚುನಾವಣೆಯಲ್ಲಿ ಪೂರಕವಾಗಲಿದೆ?

      ಭರತ್ ಶೆಟ್ಟಿ: ಅಸೆಂಬ್ಲಿ ಚುನಾವಣೆ ಇರಲಿ, ಬಿಡಲಿ, ಮೋದಿಯವರೇ ಪ್ರಧಾನಿಯಾಗಿ ಮುಂದುವರಿಯಬೇಕು ಎನ್ನುವ ಮನಸ್ಥಿತಿ ಜನರಲ್ಲಿದೆ, ಕಾಂಗ್ರೆಸ್ ವೋಟರಿಗೂ ಇದೇ ಭಾವನೆಯಿದೆ. ಇನ್ನೊಂದು, ಪ್ರಧಾನಿ ಹುದ್ದೆಗೆ ಇನ್ನೊಬ್ಬ ಸ್ಪರ್ಧಿಯೇ ವಿರೋಧ ಪಕ್ಷದಲ್ಲಿಲ್ಲ. ಹಾಗಾಗಿ, ಸುಲಭವಾಗಿ ನಾವು ಲೋಕಸಭಾ ಚುನಾವಣೆಯನ್ನು ಗೆಲ್ಲುತ್ತೇವೆ.

       ಸಾಮಾಜಿಕ ಜಾಲತಾಣದ ರೀಚ್ ಊಹಿಸಲೂ ಅಸಾಧ್ಯ

      ಸಾಮಾಜಿಕ ಜಾಲತಾಣದ ರೀಚ್ ಊಹಿಸಲೂ ಅಸಾಧ್ಯ

      ಪ್ರ: ಸಾಮಾಜಿಕ ಜಾಲತಾಣ ಬಳಕೆಯ ಬಗ್ಗೆ ಯುವ ಸಮುದಾಯಕ್ಕೆ ನಿಮ್ಮ ಸಂದೇಶ?

      ಭರತ್ ಶೆಟ್ಟಿ: ಸಾಮಾಜಿಕ ಜಾಲತಾಣದ ರೀಚ್ ಊಹಿಸಲೂ ಅಸಾಧ್ಯವಾದಂತದ್ದು. ಆದರೆ, ಅದನ್ನು ಸರಿಯಾಗಿ ಬಳಸಿಕೊಳ್ಲದೇ ಇದ್ದಲ್ಲಿ ಅದರಿಂದ ತೊಂದರೆಯೂ ಆಗುತ್ತದೆ. ಸುಳ್ಳುಸುದ್ದಿಗಳನ್ನು ಹಬ್ಬಿಸುವ ಕೆಲಸ ಇಲ್ಲಿ ನಡೆಯುತ್ತಲೇ ಇರುತ್ತದೆ. ಯುವಕರು ಇದನ್ನು ಬೇಕಾಬಿಟ್ಟಿ ಬಳಸಿಕೊಳ್ಳಬಾರದು.

       ಎಲ್ಲಾ ಕೆಲಸಗಳು ಭ್ರಷ್ಟಾಚಾರ ಮುಕ್ತವಾಗಿರಬೇಕು

      ಎಲ್ಲಾ ಕೆಲಸಗಳು ಭ್ರಷ್ಟಾಚಾರ ಮುಕ್ತವಾಗಿರಬೇಕು

      ಪ್ರ: ನಿಮ್ಮ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಏನೇನು ಕನಸು ಕಟ್ಟಿಕೊಂಡಿದ್ದೀರಾ?

      ಭರತ್ ಶೆಟ್ಟಿ: ಎಲ್ಲಾ ಕೆಲಸಗಳು ಭ್ರಷ್ಟಾಚಾರ ಮುಕ್ತವಾಗಿರಬೇಕು, ಶಾಸಕನಾದ ಕೂಡಲೇ ಒಮ್ಮೆಲೇ ನಿಲ್ಲಿಸಲೂ ಅದನ್ನು ಸಾಧ್ಯವಾಗುವಿದಿಲ್ಲ, ಹಂತಹಂತವಾಗಿ ಈ ಬಗ್ಗೆ ಕೆಲಸ ಮಾಡಬೇಕು. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ನಾವು ಅಪ್ ಗ್ರೇಡ್ ಆಗಬೇಕು. ನಮ್ಮ ಜಿಲ್ಲೆಗಳಲ್ಲಿ ಸಾರ್ವಜನಿಕರು ಪ್ರತಿಭಟನೆ ಮಾಡುವುದು ಕಮ್ಮಿ.

      ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ. ಹದಿಮೂರು ಸಾವಿರ ಜನರಿಗೆ ಒಬ್ಬರು ವೈದ್ಯರಿದ್ದಾರೆ. WHO ಪ್ರಕಾರ ಒಂದು ಸಾವಿರ ಜನರಿಗೆ ಒಬ್ಬರು ವೈದ್ಯರು ಇರಬೇಕು. ಡಾಕ್ಟರುಗಳನ್ನು ಒಪ್ಪಂದದ ಮೂಲಕ ಸೇವೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಸರಕಾರ ಗಮನಕೊಡಬೇಕು. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶೇ. 70ರಷ್ಟು ಶಾಲೆಗಳಿಗೆ ಭೇಟಿ ಕೊಟ್ಟಿದ್ದೇನೆ. ಯುವಕರಿಗೆ ಉದ್ಯೋಗಾವಕಾಶ ಸಿಗಬೇಕು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+