• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಕ್ಷಿಣಕನ್ನಡ, ಬೆಳ್ತಂಗಡಿ ಕ್ಷೇತ್ರದ ಯುವ ಬಿಜೆಪಿ ಶಾಸಕ ಹರೀಶ್ ಪೂಂಜಾ ಸಂದರ್ಶನ

By ಬಾಲರಾಜ್ ತಂತ್ರಿ
|
   ದಕ್ಷಿಣಕನ್ನಡ, ಬೆಳ್ತಂಗಡಿ ಕ್ಷೇತ್ರದ ಯುವ ಬಿಜೆಪಿ ಶಾಸಕ ಹರೀಶ್ ಪೂಂಜಾ ಸಂದರ್ಶನ

   2013ರ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರವೊಂದನ್ನು ಬಿಟ್ಟು, ಮಿಕ್ಕೆಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಟಿಟ್ ಫಾರ್ ಟ್ಯಾಟ್ ಎನ್ನುವಂತೆ 2018ರ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ, ಮಂಗಳೂರು ಒಂದನ್ನು ಹೊರತು ಪಡಿಸಿ, ಮಿಕ್ಕೆಲ್ಲಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು.

   2018ರ ಅಸೆಂಬ್ಲಿ ಚುನಾವಣೆಯಲ್ಲಿ ಗಮನಿಸಬೇಕಾದ ಫಲಿತಾಂಶಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರ ಕೂಡಾ ಒಂದು. ಸತತವಾಗಿ ಗೆಲುವು ಸಾಧಿಸುತ್ತಿದ್ದ ಕಾಂಗ್ರೆಸ್ಸಿನ ವಸಂತ ಬಂಗೇರ ಅವರನ್ನು ಬಿಜೆಪಿಯ ಯುವ ಮುಖಂಡ ಹರೀಶ್ ಪೂಂಜಾ ಸೋಲಿಸಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು.

   ಉಡುಪಿ ಬಿಜೆಪಿ ಶಾಸಕ ಕೆ ರಘುಪತಿ ಭಟ್ ಸಂದರ್ಶನ

   ಹಿಂದೂ ಸಂಘಟನೆಗಳ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಹರೀಶ್ ಪೂಂಜಾ, ಚುನಾವಣೆಗೆ ಮುನ್ನವೇ ಜನರ ಸಂಪರ್ಕದಲ್ಲಿದ್ದವರು. ಜನರ ನಾಡಿಮಿಡಿತವನ್ನು ಅರಿಯುವಲ್ಲಿ ಹರೀಶ್ ಪೂಂಜಾ ಮತ್ತು ಅವರ ಯುವ ತಂಡ ಯಶಸ್ವಿಯಾಗಿ, ವ್ಯವಸ್ಥಿತವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿತ್ತು.

   ಪ್ರಸಕ್ತ ಬಜೆಟ್ ಅಧಿವೇಶನದ ವೇಳೆ, ವಿಧಾನಸೌಧದ ಮೊಗಶಾಲೆಯಲ್ಲಿ ಹರೀಶ್ ಪೂಂಜಾ ಅವರ ಜೊತೆ 'ಒನ್ ಇಂಡಿಯಾ' ನಡೆಸಿದ ಸಂದರ್ಶನದ ಆಯ್ದಭಾಗ ಇಂತಿದೆ. ಅತಿವೃಷ್ಠಿ, ಸಮ್ಮಿಶ್ರ ಸರಕಾರ, ಕ್ಷೇತ್ರದ ಅಭಿವೃದ್ದಿಯ ಬಗ್ಗೆ ತಾನು ಕಟ್ಟಿಕೊಂಡಿರುವ ಕನಸಿನ ಬಗ್ಗೆ ಹರೀಶ್ ಮಾತನಾಡಿದ್ದಾರೆ.

   ಪ್ರ: ಕರಾವಳಿ ಭಾಗವನ್ನು ಬಜೆಟ್ ನಲ್ಲಿ ಕಡೆಗಣಿಸಲಾಗಿದೆಯಾ?

   ಹರೀಶ್: ಸಿದ್ದರಾಮಯ್ಯನವರು ಮಂಡಿಸಿದ್ದ ಬಜೆಟ್ ನಲ್ಲಿ ಏನೇನು ಇತ್ತೋ, ಅದನ್ನು ಮುಂದುವರಿಸಿಕೊಂಡು ಹೋಗಿರುವುದಾಗಿ ಸಿಎಂ ಹೇಳುತ್ತಾರೆ. ಕುಮಾರಸ್ವಾಮಿಯವರು ಸಿದ್ದರಾಮಯ್ಯನವರ ಬಜೆಟ್ ಅನ್ನು ಒಮ್ಮೆ ಬಿಡಿಸಿ ನೋಡಲಿ.

   ಮೀನುಗಾರರಿಗೆ ಸಂಬಂಧ ಪಟ್ಟಂತೆ ಎರಡು ಅಂಶಗಳನ್ನು ಬಿಟ್ಟರೆ, ಹಿಂದಿನ ಬಜೆಟ್ ನಲ್ಲಿ ಯಾವುದೇ ಉಲ್ಲೇಖವಿಲ್ಲ. ಈ ಬಾರಿಯ ಬಜೆಟ್ ನಲ್ಲಿ ಸಿಎಂ, ಕರಾವಳಿ ಎನ್ನುವ ಪದವನ್ನೇ ಬಳಸಲಿಲ್ಲ. ಹೀಗಾಗಿ, ಕರಾವಳಿಯ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ.

    ತುರ್ತು ಸಹಾಯ ಸರಕಾರದಿಂದ ಬಂದಿದೆಯಾ?

   ತುರ್ತು ಸಹಾಯ ಸರಕಾರದಿಂದ ಬಂದಿದೆಯಾ?

   ಪ್ರ: ಅತಿವೃಷ್ಟಿ ಸಂದರ್ಭದಲ್ಲಿ PWD ಸಚಿವರನ್ನು ಭೇಟಿಯಾಗಿದ್ರಿ, ತುರ್ತು ಸಹಾಯ ಸರಕಾರದಿಂದ ಬಂದಿದೆಯಾ?

   ಹರೀಶ್: ನನ್ನ ಕ್ಷೇತ್ರದಲ್ಲಿ ಅವ್ಯಾಹುತವಾಗಿ ಮಳೆ ಸುರಿಯುತ್ತಿದೆ. ನಾಲ್ಕು ಸಾವಿರ ಮಿ.ಮೀ ಮಳೆ ಬೀಳುತ್ತಿದ್ದಂತಹ ಈ ಭಾಗದಲ್ಲಿ ಒಂದೇ ತಿಂಗಳಲ್ಲಿ ಊಹಿಸಲೂ ಅಸಾಧ್ಯವಾದ ಮಳೆ ಸುರಿಯುತ್ತಿದೆ. ಸಾಕಷ್ಟು ಕಷ್ಟನಷ್ಟಗಳನ್ನು ಜನರು ಅನುಭವಿಸುತ್ತಿದ್ದಾರೆ.

   ರಸ್ತೆಗಳು ಹದೆಗೆಟ್ಟಿವೆ, ಜನಜೀವನ ಅಸ್ತವ್ಯಸ್ತವಾಗಿದೆ. ಶಾಲಾ ಮಕ್ಕಳಿಗೆ ತೊಂದರೆಯಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಡಿಕೆ ಬೆಳೆದಾರರಿಗೆ ನಷ್ಟವಾಗಿದೆ. ಡೆಂಗ್ಯೂ ಪ್ರಕರಣ ಬೆಳಕಿಗೆ ಬರುತ್ತಿದೆ. ಹೀಗಾಗಿ ವಿಶೇಷ ಪ್ಯಾಕೇಜ್ ಅನ್ನು ಬೆಳ್ತಂಗಡಿ ಕ್ಷೇತ್ರಕ್ಕೆ ನೀಡಬೇಕೆಂದು ನಾವು ಆಗ್ರಹಿಸಿದ್ದೆವು. ಪ್ರಕೃತಿ ವಿಕೋಪ ಎದುರಿಸಲು, ಸರಕಾರದಿಂದ ಬಿಡಿಗಾಸು ಇದುವರೆಗೂ ಬಂದಿಲ್ಲ.

    ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತವಾಗದೇ ಇರಲು ಕಾರಣವೇನು?

   ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತವಾಗದೇ ಇರಲು ಕಾರಣವೇನು?

   ಪ್ರ: ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ, ಆದರೂ, ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತವಾಗದೇ ಇರಲು ಕಾರಣವೇನು?

   ಹರೀಶ್: ಖಂಡಿತವಾಗಿಯೂ ಶಿರಾಡಿ ಘಾಟಿನ ಕಾಮಗಾರಿ ಕೆಲಸ ಬಹುತೇಕ ಸಂಪೂರ್ಣವಾಗಿದೆ. ಪ್ರಾಯಶಃ ಇದೇ ಬರುವ ಹದಿನಾರರಂದು ಇದು ಸಂಚಾರಕ್ಕೆ ಮುಕ್ತವಾಗಲಿದೆ. ಕಾಮಗಾರಿ ಕೆಲಸ ಚೆನ್ನಾಗಿರಲಿ, ಮುಂದೆ ತೊಂದರೆ ಬರದಿರಲಿ ಎನ್ನುವ ಕಾರಣಕ್ಕಾಗಿ, ವಿಳಂಬವಾಗಿರುವುದು ಹೌದು.

    ರಾಜಕೀಯದಲ್ಲಿ ಜಿಗುಪ್ಸೆ ಬಂದಿತ್ತೋ?

   ರಾಜಕೀಯದಲ್ಲಿ ಜಿಗುಪ್ಸೆ ಬಂದಿತ್ತೋ?

   ಪ್ರ: ಬಿಎಸ್ವೈ ವಿಶ್ವಾಸಮತದ ವೇಳೆ, ನಡೆದ ರಾಜಕೀಯ ಮೇಲಾಟ ನೋಡಿ ರಾಜಕೀಯದಲ್ಲಿ ಜಿಗುಪ್ಸೆ ಬಂದಿತ್ತೋ?

   ಹರೀಶ್: ಬಿಜೆಪಿ ಅಧಿಕಾರಕ್ಕೆ ಬರಬೇಕು, ಬಿಎಸ್ವೈ ಮುಖ್ಯಮಂತ್ರಿಯಾಗಬೇಕೆಂದು ಜನ ಬಯಸಿದ್ದರು, ಹಾಗಾಗಿ ನಾವು 104 ಜನ ಶಾಸಕರು ಆಯ್ಕೆಯಾಗಿದ್ದೆವು. ಜನರ ನಿರೀಕ್ಷೆ ಹುಸಿಯಾಗಿದೆ. ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಹುಟ್ಟುಹಾಕಿದ್ದ ಸಿದ್ದರಾಮಯ್ಯನವರ ಸರಕಾರವಾಗಿತ್ತು.

   ಈ ರೀತಿಯ ಸಮಸ್ಯೆ ಮತ್ತೆ ಬರಬಾರದು, ಹಿಂದೂ ಕಾರ್ಯಕರ್ತರ ಹತ್ಯೆಯಾಗಬಾರದೆಂದು, ಸಿದ್ದರಾಮಯ್ಯನವರ ಸರಕಾರದ ವಿರುದ್ದ ಜನಾದೇಶ ವ್ಯಕ್ತವಾಗಿತ್ತು. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬಿಎಸ್ವೈ ಎನ್ನುವುದು ಜನರ ನಿರೀಕ್ಷೆಯಾಗಿತ್ತು. ಯಡಿಯೂರಪ್ಪನವರು ಅಸೆಂಬ್ಲಿಯಲ್ಲಿ ಮಾತನಾಡುವ ಮೂಲಕ, ಜನರ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ರಾಜಕೀಯವಾಗಿ ತೆಗೆದುಕೊಂಡರೆ, ಬಿಜೆಪಿಯೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಿತ್ತು.

    ಯಾವ ರೀತಿ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಸಹಕಾರಿಯಾಗುತ್ತದೆ?

   ಯಾವ ರೀತಿ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಸಹಕಾರಿಯಾಗುತ್ತದೆ?

   ಪ್ರ: ಅವಳಿ ಜಿಲ್ಲೆಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿರುವುದು, ಯಾವ ರೀತಿ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಸಹಕಾರಿಯಾಗುತ್ತದೆ?

   ಹರೀಶ್: ಮೋದಿಯವರ ಅಲೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ನಾವು ಗೆದ್ದಿದ್ದೆವು. ಈ ಬಾರಿಯೂ, ಅಭೂತಪೂರ್ವದಂತಹ ಗೆಲುವನ್ನು ನಾವು ಸಾಧಿಸುತ್ತೇವೆ. ಇದಕ್ಕೆ ಈಗಾಗಲೇ ಬೇಕಾದಷ್ಟು ಸಾಕ್ಷಿಗಳಿವೆ.

   ಏಳು ಜನ ಶಾಸಕರನ್ನು ಗೆಲ್ಲಿಸಿಕೊಡುವ ಮೂಲಕ ಮತದಾರ ಈಗಾಗಲೇ ನಮಗೆ ಆಶೀರ್ವಾದ ಮಾಡಿದ್ದಾನೆ. ಮೋದಿಯವರಿಗೆ ಒಂದು ಕ್ಷೇತ್ರವನ್ನು ಖಂಡಿತವಾಗಿಯೂ ಗೆದ್ದುಕೊಡುತ್ತೇವೆ.

    ಹಿಂದೂ ಎನ್ನುವುದು ಈ ದೇಶದ ಜೀವನ ಪದ್ದತಿ

   ಹಿಂದೂ ಎನ್ನುವುದು ಈ ದೇಶದ ಜೀವನ ಪದ್ದತಿ

   ಪ್ರ: ನಿಮ್ಮ ಪ್ರಕಾರ ಹಿಂದೂ ಅಂದರೇನು?

   ಹರೀಶ್: ಈ ದೇಶದ ಸರ್ವೋಚ್ಚ ನ್ಯಾಯಾಲಯ ಹೇಳಿದೆ, "ಹಿಂದೂ ಎನ್ನುವುದು ಈ ದೇಶದ ಜೀವನ ಪದ್ದತಿ". ಈ ದೇಶ, ದೇಶದ ಸಂಸ್ಕೃತಿ, ಆಚಾರ ವಿಚಾರಗಳಲ್ಲಿ ಬದುಕಿರುವಂತಹ ಎಲ್ಲರೂ ಹಿಂದೂಗಳೇ.. ಈ ದೇಶದ ಸಂಸ್ಕಾರವನ್ನು ಒಪ್ಪಿಕೊಂಡು, ಜೀವನ ನಡೆಸಿದರೆ ಎಲ್ಲಾ ವ್ಯಕ್ತಿಗಳೂ ಹಿಂದೂಗಳೇ.. ಆ ರೀತಿ ಇರುವ ಎಲ್ಲರನ್ನೂ ನಾವು ಹಿಂದೂಗಳೆಂದು ಸ್ವೀಕಾರ ಮಾಡುತ್ತೇವೆ.

    ನನ್ನ ಕ್ಷೇತ್ರ ಹಲವು ವಿಚಾರದಲ್ಲಿ ಹಿಂದುಳಿದ ಕ್ಷೇತ್ರ

   ನನ್ನ ಕ್ಷೇತ್ರ ಹಲವು ವಿಚಾರದಲ್ಲಿ ಹಿಂದುಳಿದ ಕ್ಷೇತ್ರ

   ಪ್ರ: ಕ್ಷೇತ್ರದ ಅಭಿವೃದ್ದಿಗೆ ಏನು ಕನಸು ಕಟ್ಟಿಕೊಂಡಿದ್ದೀರಾ?

   ಹರೀಶ್: ನನ್ನ ಕ್ಷೇತ್ರ ಹಲವು ವಿಚಾರದಲ್ಲಿ ಹಿಂದುಳಿದ ಕ್ಷೇತ್ರ ಎನ್ನುವುದರಲ್ಲಿ ಅನುಮಾನವಿಲ್ಲ. ಅತಿಹೆಚ್ಚು ಗ್ರಾಮೀಣ ಪ್ರದೇಶವನ್ನು ಹೊಂದಿರುವ ಕ್ಷೇತ್ರ ಬೆಳ್ತಂಗಡಿ. ಇಲ್ಲಿನ ಜನರ ಭಾವನೆ, ಆಗಬೇಕಾಗಿರುವಂತಹ ಅಭಿವೃದ್ದಿ ಕೆಲಸಗಳ ಬಗ್ಗೆ ಗಮನಹರಿಸಬೇಕಾಗಿದೆ.

   81ಗ್ರಾಮದಲ್ಲಿ ಆಗಬೇಕಾಗಿರುವಂತಹ ಮೂಲಭೂತ ಕೆಲಸಗಳ ಕಡೆ ಗಮನಹರಿಸಬೇಕಾಗಿದೆ. ಪ್ರಾಮಾಣಿಕವಾಗಿ, ರಸ್ತೆ, ನೀರಾವರಿ, ಚೆಕ್ ಡ್ಯಾಂ ನಿರ್ಮಾಣ, ಯುವಕರಿಗೆ ಉದ್ಯೋಗ, ಸರಕಾರೀ ವ್ಯವಸ್ಥೆ ಮುಂತಾದ ಕೆಲಸಗಳನ್ನು 24X7 ಪ್ರಾಮುಖ್ಯತೆಯಲ್ಲಿ ಮಾಡುತ್ತೇನೆಂದು ಮತ್ತೊಮ್ಮೆ ನನ್ನ ಕ್ಷೇತ್ರದ ಜನತೆಗೆ ಭರವಸೆ ನೀಡುತ್ತೇನೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   An exclusive interview with young Belthangady (Dakshina Kannada district) BJP MLA Harish Poonja. During his interview Harish Poonja said, Supreme Court very clearly said Hindu means it is a living system. Harish is confident that BJP will do better performance in the upcoming general election.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more