DK Shivakumar: ಡಿ ಕೆ ಶಿವಕುಮಾರ್‌ಗೆ ಸಿಎಂ ಆಗುವ ಯೋಗ ಇದೆ: ಭವಿಷ್ಯ ನುಡಿದ ಅಮ್ಮ ಭೈರವಿ
ಹುಬ್ಬಳ್ಳಿ, ಫೆಬ್ರವರಿ 27: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಇದೆ ಎಂದು ದಕ್ಷಿಣ ಭಾರತದ ಏಕೈಕ ಮಹಾ ಮಂಡಳೇಶ್ವರ ಅಮ್ಮ ಭೈರವಿ ಭವಿಷ್ಯ ನುಡಿದಿದ್ದಾರೆ. ಹುಬ್ಬಳ್ಳಿಯ ನಗರದಲ್ಲಿಂದು ಶ್ರೀ ಸಿದ್ಧಾರೂಢ ಮಠದ ಗದ್ದುಗೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅಮ್ಮ ಭೈರವಿ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರಾಜಕೀಯ ಭವಿಷ್ಯ ನುಡಿದ ಅಮ್ಮ ಬೈರವಿ ನಾನು ಡಿ ಕೆ ಶಿವಕುಮಾರ್ ಸಿಎಂ ಆಗೇ ಆಗುತ್ತಾರೆ ಎಂದು ಹೇಳಿದರು.
ನಾನು ಡಿ ಕೆ ಶಿವಕುಮಾರ್ ಅವರ ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲೂ ಮುಖ್ಯಮಂತ್ರಿ ಆಗುವ ಯೋಗ ಇದೆ ಎಂದು ಅವರ ರ ಮನೆಯಲ್ಲಿ ತಿಳಿಸಿದ್ದೆ. ನಾನು ಹೇಳಿದ್ದು ಯಾವುದೂ ಸುಳ್ಳು ಆಗಲ್. ಈ ಹಿಂದೆಯೇ ಹೇಳಿದ್ದೇ ಯಾವಾಗ ಆಗುತ್ತಾರೆ ಎಂಬುದು ಹೇಳಲ್ಲ. ನಾಳೆ ಆಗಬಹುದು ಆದರೆಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಇನ್ನು ನಾನು ಶ್ರೀ ಸಿದ್ಧಾರೂಢ ಮಠದ ದರ್ಶನ ಪಡೆದೆ, ಶ್ರೀ ಸಿದ್ಧಾರೂಢ ಸ್ವಾಮಿ ಅವರ ಮೊದಲೇ ಆರ್ಶೀವಾದ ಇತ್ತು. ಶ್ರೀ ಸಿದ್ಧಾರೂಢರು ನಾಡಿಗೆ ಆಧ್ಯಾತ್ಮಿಕ ಅಮೃತ ನೀಡಿದವರು. ನಾಡಿನ ಭಾವೈಕ್ಯ ಮಠಗಳಲ್ಲಿ ಪ್ರಾಶಸ್ತ್ಯ ಸ್ಥಾನದಲ್ಲಿ ಇದೆ. ಇದೊಂದು ಹೂಬಳ್ಳಿ ಎಂಬ ಸಂದೇಶ ನೀಡಿದವರು ಶ್ರೀ ಸಿದ್ಧಾರೂಢ ಶ್ರೀಗಳು.

ಈ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕ ವಿನಯ ಕುಲಕರ್ಣಿ ಅವರ ಬಗ್ಗೆ ಅವರ ಪತ್ನಿ ಶಿವಲೀಲಾ ಸಹ ಕೇಳಿದ್ದರು. ನಾನು ಹೋಗು ಆತ ಹೊರಗಡೆ ಇದ್ದೆ ಶಾಸಕನಾಗುತ್ತಾನೆ ಎಂದು ಹೇಳಿದ್ದೆ ಎಂದರು. ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಉತ್ತಮ ಕೆಲಸ ಮಾಡಿದ್ದು, ಸಾಧು ಸಂತರಿಗೆ ಅನೇಕ ಸೌಲಭ್ಯಗಳನ್ನ ಕಲ್ಪಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಅಂತರ ಯಾವುದೇ ಸೌಕರ್ಯ ಇಲ್ಲ. ಕರ್ನಾಟಕದಲ್ಲಿ ಸಾಧು ಸಂತರು ಏನಾದರೂ ಸೌಲಭ್ಯ ಕೇಳಿದರೆ ಈತ ಭಾರತೀಯ ಜನತಾ ಪಕ್ಷದವನಾ, ಕಾಂಗ್ರೆಸ್ ನವರ ಯಾವ ಪಕ್ಷದ ಬಗ್ಗೆ ಮಾತನಾಡುತ್ತಾನೆ ಎಂದು ನೋಡುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಡಿಕೆ ಶಿವಕುಮಾರ್‌ಗೆ ಸಿಎಂ ಆಗುವ ಯೋಗ ಇದೆ ಎಂದು ಅಮ್ಮ ಭೈರವಿ ಅವರ ಹೇಳಿಕೆ ಕುರಿತು ಸಚಿವ ಸಂತೋಷ್ ಲಾಡ್ ಅವರು ಮಾತನಾಡಿ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮುಂದೆ ಸಿಎಂ ಆಗುತ್ತಾರೆ ಎಂಬ ಸಂತರ ವಿಚಾರವಾಗಿ ರಾಜಕೀಯ ಮಾತಾಡೋದಿದ್ರೆ ಒಂದು ಬಹಿರಂಗವಾಗಿ ಚರ್ಚೆ ಮಾಡಬಹುದು ಎಂದು ಆಹ್ವಾನ ನೀಡಿದರು.
ಮುಂದಿನ ಸಿಎಂ ಆಕಾಂಕ್ಷಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅವರನ್ನೆ ಕೇಳಬೇಕು, ಸದ್ಗುರು ಅವರು ರಾಜಕೀಯ ಮಾತನಾಡಿದ ವಿಚಾರ ಸರಿಯಾದ ರೀತಿಯಲ್ಲಿ ಆಗಿಲ್ಲ. ಸದ್ಗುರು ಅವರು ದೇಶದ ವಿಚಾರವಾಗಿ ಮಾತನಾಡಿದ್ದಾರೆ. ಹೌದು ನಾನು ಕೇಳಿದೆ ಶಿವರಾತ್ರಿ ಇರುವ ಸಂಧರ್ಭಬದಲ್ಲಿ ಮಾತನಾಡಿದ್ದಾರೆ. ಸದ್ಗುರು ಅವರಿಗೆ ಅಭಿಮಾನಿಗಳು ಇದಾರೆ. ನಾನು ಕೂಡಾ ಅವರ ಅಭಿಮಾನಿ ಅವರು ಮಾತನಾಡಿದ್ದು ಎಷ್ಟು ಸರಿ ಎಷ್ಟು ತಪ್ಪು ಅನ್ನೋದು ಅವರೆ ತಿಳಿದುಕ್ಕೊಳ್ಳಬೇಕು. ಅಭಿಮಾನಿಗಳು ಇದ್ದಾಗ ಅವರು ಮಾತನಾಡುತ್ತಾರೆ. ಶಿವರಾತ್ರಿ ಹಬ್ಬದಲ್ಲಿ ಆ ತರಾ ಅವರು ಮಾತನಾಡಬಾರದು
ಆತರ ಮಾತನಾಡಿದ್ದು ಸರಿಯಲ್ಲ ಎಂದರು.












Click it and Unblock the Notifications