ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

150 ಸ್ಥಾನ ಗೆಲ್ಲಲು ಅಮಿತ್ ಶಾ ಕರೆ ನೀಡಿದ್ದಾರೆ: ಆನಂದ್ ಸಿಂಗ್

|
Google Oneindia Kannada News

ಕೊಪ್ಪಳ,ಜನವರಿ 2: 150 ಸ್ಥಾನ ಗೆಲ್ಲಲು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಕರೆ ನೀಡಿದ್ದಾರೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಸೋಮವಾರ ಕೊಪ್ಪಳದಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗ ಚುನಾವಣೆ ಯಾವ ರೀತಿ ನಡೆಯುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರನ್ನು ಗುರುತಿಸಬೇಕು. ಮತದಾರರನ್ನು ಗುರುತಿಸಬೇಕು. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಂದ ನಂತರ ಬಿಜೆಪಿ ಸಂಘಟನೆ ಬಲವಾಗಿದೆ. ಕಟ್ಟ ಕಡೆಯ ಕಾರ್ಯಕರ್ತನ ಧ್ವನಿಯೂ ಗೆದ್ದು ಬರುವ ವ್ಯಕ್ತಿಗೆ ಗೊತ್ತಾಗಬೇಕು. ಬೂತ್ ವಿಜಯ ಅಭಿಯಾನ ದೇಶದ ಹಾಗೂ ರಾಜ್ಯದಲ್ಲಿ ನಡೆದಿದೆ.

ಕಾರ್ಯಕರ್ತನ ಬೆವರಿನಿಂದ ನಾಯಕ ಉದಯಿಸುತ್ತಾನೆ. ಕಾರ್ಯಕರ್ತನ ಕೂಗು ಮೇಲ್ಮಟ್ಟದಲ್ಲಿ ಮುಟ್ಟುವಂತ ಗಟ್ಟಿತನದಲ್ಲಿ ಪಕ್ಷ ಮಾಡಿದೆ. ಬೇರೆ ಪಕ್ಷದಲ್ಲಿ ಈ ರೀತಿಯ ಬೂತ್ ವಿಜಯ ಎನ್ನುವ ಮಾತಿಲ್ಲ. ರಾಜ್ಯದಲ್ಲಿ ಮತ್ತೆ ನಮ್ಮ ಸರಕಾರ ಅಧಿಕಾರಕ್ಕೆ ಬಂದೇ ಬರಲಿದೆ. ಫೆಬ್ರವರಿ ಕೊನೆ ವಾರ ಇಲ್ಲವೇ ಮಾರ್ಚ್ ಮೊದಲ ವಾರ ಚುನಾವಣೆ ಎದುರಾಗುವ ಸಾಧ್ಯತೆ ಇದೆ ಎಂದರು.

Amit Shah Has Called To Win 150 Seats Anand Singh Said

ಈ ವೇಳೆ ಸಂಸದ ಸಂಗಣ್ಣ ಕರಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವು ನಾಯಕರ ಸಂಕಲ್ಪದಂತೆ ಬೂತ್ ವಿಜಯ ಅಭಿಯಾನ ಹಮ್ಮಿಕೊಂಡಿದೆ. ಬೂತ್ ಸಶಕ್ತ ಆದಾಗ ನಮ್ಮ ಗೆಲುವಿಗೆ ಸಹಕಾರಿ ಆಗಲಿದೆ. ಪೇಜ್ ಪ್ರಮುಖರು ಮತದಾರರನ್ನ ಗುರುತಿಸಿ ಸರ್ಕಾರದ ಸೌಲಭ್ಯ ದೊರಕಿಸಬೇಕಿದೆ.

ಸೌಲಭ್ಯ ಸಿಗದವರ ಪಟ್ಟಿಯನ್ನು ಮಾಡಬೇಕಿದೆ. ಮನೆಯ ಕುಟುಂಬದ ಯಜಮಾನನ್ನ ನಾವು ಸಂಪರ್ಕ ಮಾಡುವ ಬೇಕಿದೆ. ಈ ಮೂಲಕ ಆ ಕುಟುಂಬದ ಸಮಾಜವನ್ನು ನಾವು ವಿಶ್ವಾಸ ಗಳಿಸುವ ಕೆಲಸ ಮಾಡಬೇಕಿದೆ. ನಾವು ಮತದಾರರಿಗೆ ಪಕ್ಷದ ತತ್ವ ಸಿದ್ದಾಂತ ಹೇಳಬೇಕಿದೆ. ಸಚಿವ ಆನಂದ್ ಸಿಂಗ್ ಹಾಗೂ ಹಾಲಪ್ಪ ಆಚಾರ್ ಪ್ರಯತ್ನದಿಂದ ಅಂಜಿನಾದ್ರಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಇಲ್ಲಿ ಪ್ರವಾಸೋದ್ಯಮ ಬೆಳಸಬೇಕಿದೆ. ಹಲವು ದೇಶಗಳು ಪ್ರವಾಸೋದ್ಯಮದ ಮೇಲೆಯೇ ನಡೆದಿವೆ. ಪ್ರವಾಸೋದ್ಯಮ ಬೆಳೆದರೆ ನಮಗೆ ಆದಾಯ ಬರುತ್ತದೆ. ಸಚಿವ ಆನಂದ್ ಸಿಂಗ್ ಅವರು ಮಾಡುತ್ತಿದ್ದಾರೆ. ಅಂಜಿನಾದ್ರಿ ಯಲ್ಲಿ ಕೇಬಲ್ ಕಾರ್ ಮಾಡಬೇಕಾಗಿದೆ. ೧೨ ಕಿಮೀ ಮಾಡಿದರೆ ಅಂಜಿನಾದ್ರಿ ಸುತ್ತಲಿನ ಪ್ರದೇಶವನ್ನ ವೀಕ್ಷಿಸಲು ಸಾಧ್ಯವಾಗಲಿದೆ. ಅಲ್ಲಿ ಅದ್ಭುತ ನಿಸರ್ಗ ಇದೆ. ಆ ಮೂಲಕ ಪ್ರವಾಸೋದ್ಯಮ ಬೆಳಗಬೇಕಿದೆ.

Amit Shah Has Called To Win 150 Seats Anand Singh Said

ಭಾರತ ವಿಶ್ವದಲ್ಲಿ ಆರ್ಥಿಕತೆಯಲ್ಲಿ ಭಾರತ ಐದನೇ ಸ್ಥಾನದಲ್ಲಿ ಇದೆ. ಜಿ೨೦ ಮೂಲಕ ಜಗತ್ತಿನ ಸಮಸ್ಯೆಗಳನ್ನು ಭಾರತ ಬಗೆಹರಿಸಲು ಸಾಧ್ಯವಿದೆ. ಮತ್ತೆ ಜಿ೭ ಗೆ ಹೋಗುವ ಉತ್ಸಾಹ ನಮ್ಮಲ್ಲಿದೆ. ಪಾಕಿಸ್ತಾನ ಆರ್ಥಿಕತೆಯಲ್ಲಿ ಸಂಪೂರ್ಣ ಹಾಳಾಗಿದೆ. ಜಗತ್ತಿನಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿದೆ. ನಮ್ಮ ಯುವಕರಿಗೆ ಬಲಿಷ್ಠ ರಾಷ್ಟ್ರದ ಕುರಿತು ತಿಳಿಸೋಣ. ನಾವು ಚುನಾವಣೆಯಲ್ಲಿ ಬೂತ್ ನಲ್ಲಿ ಗೆದ್ದಾಗ ನಾವು ಚುನಾವಣೆಯಲ್ಲಿ ಗೆದ್ದಂತೆ.

ವಿಮಾನ ನಿಲ್ದಾಣ, ಸಿಂಗಟಾಲೂರು ಸೇರಿ ಎಲ್ಲ ಯೋಜನೆಯ ಗಳಿಗೂ ನಾವು ಚಾಲನೆ ಕೊಡಬೇಕಿದೆ. ಡಬಲ್ ಇಂಜಿನ್ ಸರ್ಕಾರ ನಾವು ಚಾಲನೆ ಕೊಡಬೇಕಿದೆ. ಸಿಎಂ ಒಬ್ಬ ಇಂಜಿನಿಯರ್ ಅವರಿಗೆ ನೀರಾವರಿ ಬಗ್ಗೆ ಸಂಪೂರ್ಣ ಗೊತ್ತಿದೆ ಎಂದರು. ನವಲಿ ಜಲಾಶಯ ಅಂತರರಾಜ್ಯ ಸಮಸ್ಯೆಯಿದೆ. ಎಲ್ಲರೂ ಇದರಲ್ಲಿ ಭಾಗಿಯಾಗಬೇಕಿದೆ. ನಮಗೆ ಲ್ಯಾಂಡ್ ಬ್ಯಾಂಕ್ ಅವಶ್ಯವಾಗಿದೆ. ಬಂದ ಯೋಜನೆಗಳು ಜಾರಿಗೆ ಬೇಕಾಗುತ್ತದೆ. ಕೈಗಾರಿಕೆಗಳು ಬಳಕೆ ಮಾಡದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಬೇಕಿದೆ. ಸಂಗಣ್ಣ ಕರಡಿ ದುಡ್ಡು ಮಾಡಿರಬಹುದು. ಆದರ ಅದಕ್ಕೆ ಬೆಲೆ ಬರಲ್ಲ ಸಮಾಜಿಕ ಪರ ಕೆಲಸ ಮಾಡಬೇಕು ಎಂದರು.

English summary
Minister Anand Singh said that home minister Amit Shah has called to win 150 seats,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X