ಅಮಿತ್ ಶಾ ಜೊತೆ ಬಿಜೆಪಿ-ಜೆಡಿಎಸ್ ನಾಯಕರ ಸಮನ್ವಯ ಸಭೆ: ಯಾರಿಗೆಲ್ಲ ಆಹ್ವಾನ?
ಬೆಂಗಳೂರು, ಏಪ್ರಿಲ್ 02: ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ಪಕ್ಷಗಳು ಭರ್ಜರಿ ತಂತ್ರಗಾರಿಕೆಯನ್ನ ನಡೆಸುತ್ತಿದ್ದು, ರಾಜ್ಯದಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದೆ.
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲು ಪ್ರಚಾರ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ನಂತರ ಬಿಜೆಪಿಯ ಚಾಣಕ್ಯ ಅಮಿತ್ ಶಾ ಎಂಟ್ರಿ ಕೊಟ್ಟಿದ್ದಾರೆ. ಕಾಂಗ್ರೆಸ್ನ ಪ್ರಮುಖ ನಾಯಕರಾದ ಡಿಕೆ ಸಹೋದರರ ಕೋಟೆಯಿಂದಲೇ ರಣಕಹಳೆ ಮೊಳಗಿಸಲಿದ್ದಾರೆ.ಇಂದು ಸಂಜೆ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ನ ಮಂಜುನಾಥ್ ಪರ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಚನ್ನಪಟ್ಟಣದಿಂದಲೇ ಬೃಹತ್ ರೋಡ್ ಶೋ ನಡೆಸಲಿದ್ದಾರೆ.

ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಮನ್ವಯತೆಯ ಸಭೆಯಲ್ಲಿ ಎರಡೂ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರ ಜೊತೆಗೆ ಚರ್ಚೆ ನಡೆಯಲಿದೆ. ಈಗಾಗಲೇ ಹಲವು ಕಡೆಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮತ್ತು ನಾಯಕರ ಮಧ್ಯೆ ಭಿನ್ನಾಭಿಪ್ರಾಯವಿದ್ದು, ಇದನ್ನು ಬಗೆ ಹರಿಸಲು ಅಮಿತ್ ಶಾ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಸಲಹೆಗಳನ್ನು ನೀಡುವ ಮೂಲಕ, ಕಾಂಗ್ರೆಸ್ ವಿರುದ್ಧ ಹಲವು ತಂತ್ರಗಾರಿಕೆಯನ್ನ ನಡೆಸಲಿದ್ದಾರೆ. ಬಿಜೆಪಿ-ಜೆಡಿಎಸ್ ನಾಯಕರ ಜೊತೆ ಅಮಿತ್ ಶಾ ಸಮನ್ವಯತೆಯ ಸಭೆಯಲ್ಲಿ ಬಿಜೆಪಿಯಿಂದ 15, ಜೆಡಿಎಸ್‌ನಿಂದ 8 ಪ್ರಮುಖರಿಗೆ ಆಹ್ವಾನ ನೀಡಲಾಗಿದೆ.
ಬಿಜೆಪಿಯಿಂದ ಯಾರಿಗೆಲ್ಲಾ ಆಹ್ವಾನ
ಬಿ ಎಸ್ ಯಡಿಯೂರಪ್ಪ,
ಬಿ ವೈ ವಿಜಯೇಂದ್ರ,
ರಾಧಾ ಮೋಹನ್ ದಾಸ್ ಅಗರವಾಲಾ
ಸುಧಾಕರ್ ರೆಡ್ಡಿ
ಆರ್ ಅಶೋಕ್
ಪ್ರಹ್ಲಾದ್ ಜೋಷಿ
ಡಿವಿ ಸದಾನಂದಗೌಡ
ಬಸವರಾಜ್ ಬೊಮ್ಮಾಯಿ
ನಳೀನ್ ಕುಮಾರ್ ಕಟೀಲ್
ಗೋವಿಂದ ಕಾರಜೋಳ
ಸಿಟಿ ರವಿ
ಬಿ ಶ್ರೀರಾಮುಲು
ಸಿ ಎನ್ ಅಶ್ವಥ್ ನಾರಾಯಣ್
ನಿರ್ಮಲ್ ಕುಮಾರ್ ಸುರಾನಾ
ಜಿವಿ ರಾಜೇಶ್
ಜೆಡಿಎಸ್ ಪಕ್ಷದಿಂದ ಯಾರಿಗೆಲ್ಲಾ ಆಹ್ವಾನ
ಹೆಚ್ ಡಿ ಕುಮಾರಸ್ವಾಮಿ
ಜಿಟಿ ದೇವೇಗೌಡ
ವೆಂಕಟ ರಾವ್ ನಾಡಗೌಡ
ಸಿ ಎಸ್ ಪುಟ್ಟರಾಜು
ಸಾ ರಾ ಮಹೇಶ್
ಹೆಚ್ ಕೆ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ












Click it and Unblock the Notifications