ಭಲೇ ಭಲೇ ಮಜವಾದಿ ಸರ್ಕಾರ: ಬರಗಾಲದಲ್ಲಿ ಜಾಹೀರಾತಿಗೆ ₹18 ಕೋಟಿ ಖರ್ಚು: ಬಿಜೆಪಿ ಕಿಡಿ

ಬೆಂಗಳೂರು, ಡಿಸೆಂಬರ್ 24: ಕರ್ನಾಟಕದಲ್ಲಿ ಬರಗಾಲ ತಾಂಡವವಾಡುತ್ತಿದೆ. ರೈತರಿಗೆ ಪರಿಹಾರ ನೀಡಲು, ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ ಎನ್ನುತ್ತಿದ್ದಾರೆ. ಆದರೆ ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆಯಲು ಮಾತ್ರ ಸ್ವಯಂಘೋಷಿತ ಆರ್ಥಿಕ ತಜ್ಞ ಅಲಿಯಾಸ್ ಮಜವಾದಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಕೋಟಿ ಕೋಟಿ ಹಣವಿದೆ. ಭಲೇ ಭಲೇ ಮಜವಾದಿ ಸರ್ಕಾರ ಎಂದು ಕರ್ನಾಟಕ ಬಿಜೆಪಿಯು ಕೆಂಡಾಮಂಡಲವಾಗಿದೆ.

ಈ ಕುರಿತು ಭಾನುವಾರ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿಯು ಬರದಿಂದ ಬಸವಳಿದ ರೈತರ ಪರಿಹಾರಕ್ಕೆ ಹಣವಿಲ್ಲ. ಅಭಿವೃದ್ಧಿ ಮಾಡಲು ಸರ್ಕಾರದ ಬಳಿ ಹಣವಿಲ್ಲ. ತಾವೇ ಘೋಷಿಸಿದ ಗ್ಯಾರಂಟಿಗಳನ್ನು ನೀಡುವುದಕ್ಕೂ ಹಣವಿಲ್ಲ. ಶಾಸಕರಿಗೆ ಅನುದಾನ ಕೊಡುವುದಕ್ಕೂ ಹಣವಿಲ್ಲ.

Amid drought, Congress Govt Spent Rs 18 Crore on Advertisements in 6 Months: BJP slams

ಆದರೆ, ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆಯಲು ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಕೋಟಿ ಕೋಟಿ ಹಣ ಇದೆ. ಸರ್ಕಾರ ಬಂದು ಕೇವಲ ಆರೇ ತಿಂಗಳಾಗಿದೆ. ಈ ಆರು ತಿಂಗಳಲ್ಲಿ ಸರ್ಕಾರದ ಸಾಧನೆ ಏನೇನೂ ಇಲ್ಲದೆ ಇದ್ದರೂ ಕೂಡ ಜಾಹೀರಾತಿಗಾಗಿ ಬರೊಬ್ಬರಿ ₹18.50 ಕೋಟಿ‌ ವ್ಯಯ ಮಾಡಲಾಗಿದೆ ಎಂದು ಬಿಜೆಪಿ ಹೇಳಿದೆ.

ಧರ್ಮ, ಜಾತಿಗಳ ಮಧ್ಯೆ ಬೆಂಕಿ ಚಳಿ ಕಾಯಿಸುತ್ತಿದೆ?

ಶೋಕಿ‌ ಮೋಜು ಮಸ್ತಿ ಮಾಡುತ್ತಾ ಇಲ್ಲದ ವಿವಾದಗಳನ್ನು ಮುನ್ನಲೆಗೆ ತಂದು ಧರ್ಮ-ಧರ್ಮಗಳ ನಡುವೆ ಜಾತಿ-ಜಾತಿಗಳ ನಡುವೆ ಬೆಂಕಿ ಹಚ್ಚಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಚಳಿ ಕಾಯಿಸುತ್ತಿದೆ ಎಂದು ಬಿಜೆಪಿ ಕಾಂಗ್ರೆಸ್ ಮೇಲೆ ಆರೋಪ ಮಾಡಿದೆ.

Amid drought, Congress Govt Spent Rs 18 Crore on Advertisements in 6 Months: BJP slams

ಈ ಕುರಿತು ಇತ್ತೀಚೆಗೆ ಬಿಜೆಪಿ ಶಾಸಕ ಬಸಗನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಸಿದ್ದರಾಮಯ್ಯ ಅವರು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ. ಸರ್ಕಾರ ಬಂದು ಕೇಲವೇ ತಿಂಗಳಲ್ಲಿ ಸುಮಾರು ₹18 ಕೋಟಿ ರೂ. ಹಣ ಜಾಹೀರಾತಿಗೆ ಬಿಡುಗಡೆ ಆಗಿದೆ ಎಂದು ಅವರ ವಾಗ್ದಾಳಿ ನಡೆಸಿದ್ದರು.

ಸರ್ಕಾರದ ನಡೆಗೆ ಆಕ್ರೊಶ ವ್ಯಕ್ತ

ಬರಗಾಲದ ಹೊತ್ತಿನಲ್ಲಿ ಪರಿಹಾರ ಯೋಜನೆಗಳಿಗೆ, ಅಭಿವೃದ್ಧಿಗೆ ಕಾರ್ಯಗಳಿಗೆ ಹಣಕಾಸು ಬಿಡುಗಡೆ ಮಾಡದ ಸರ್ಕಾರದ ಈ ಜಾಹೀರಾತಿನ ಖರ್ಚು ಮಾಡಿದ್ದು ಬಹಿರಂಗವಾಗುತ್ತಿದ್ದಂತೆ, ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ಆಕ್ರೊಶ ವ್ಯಕ್ರವಾಗುತ್ತಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಸಕ್ತ ಸಾಲಿನ 2023-24 ಸಾಲಿನಲ್ಲಿ ಬಜೆಟ್‌ನಲ್ಲಿ ಒದಗಿಸಿದ್ದ 37 ಕೋಟಿ ರೂಪಾಯಿಗು ಅಧಿಕ ಹಣದಲ್ಲಿ ಅರ್ಧದಷ್ಟು ಹಣ (₹18) ಈಗಾಗಲೇ ಬಳಕೆ ಆಗಿದ್ದರ ಬಗ್ಗೆ ಇಲಾಖೆ ಉಲ್ಲೇಖಿಸಿತ್ತು. ಅಲ್ಲದೇ ಲೆಕ್ಕ ಶಿರ್ಷಿಕೆಯಲ್ಲಿ ಬಾಕಿ ಸುಮಾರು ₹19 ಕೋಟಿ ರೂ. ಹಣ ಇದರುವ ಬಗ್ಗೆ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+