• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಚ್ಚರ! ಮತ್ತೆ ಅಪ್ಪಳಿಸಬಹುದು ಎಲ್‌ ನಿನೊ ಎಂಬ ಮಹಾಮಾರಿ

|

ಬೆಂಗಳೂರು, ಜೂನ್ 18: ಮುಂಗಾರು ಮಳೆ ಮತ್ತು ಹವಾಮಾನ ಪರಿಸ್ಥಿತಿಯ ಚಿತ್ರಣವನ್ನೇ ಬದಲಿಸುವ ಶಕ್ತಿಯುಳ್ಳ ಎಲ್‌ ನಿನೊ ಮತ್ತೆ ಭಾರತದ ಮೇಲೆ ಮುನಿಸಿಕೊಂಡು ಎರಗುವ ಅಪಾಯವಿದೆ.

ಮುಂದಿನ ಆರು ತಿಂಗಳಲ್ಲಿ ಎಲ್‌ ನಿನೊ ಬೆಳವಣಿಗೆ ಹೊಂದಲು ಪೂರಕವಾದ ಸನ್ನಿವೇಶವಿದೆ ಎಂದು ಅಮೆರಿಕದ ರಾಷ್ಟ್ರೀಯ ಸಾಗರ ವಾತಾವರಣ ನಿಯಂತ್ರಣ ಸಂಸ್ಥೆ (ಎನ್‌ಒಎಎ) ಕಳೆದ ವಾರ ಎಚ್ಚರಿಕೆ ನೀಡಿದೆ.

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ

ಪೆಸಿಫಿಕ್ ಸಮುದ್ರದ ಪೂರ್ವ ಹಾಗೂ ಕೆಂದ್ರ ಭಾಗದಲ್ಲಿ ಬಿಸಿ ವಾತಾವರಣ ಹೆಚ್ಚುವ ಮತ್ತು ಪಶ್ಚಿಮ ಭಾಗದಲ್ಲಿ ಉಂಟಾಗುವ ತಂಪು ಹವೆಯ ಪರಿಣಾಮವೇ ಎಲ್ ನಿನೊ. ಇದು ಇಡೀ ಹವಾಮಾನ ಸನ್ನಿವೇಶವನ್ನೇ ಬದಲಿಸುವ ಮೂಲಕ ಬಿಸಿಗಾಳಿ, ಪ್ರವಾಹ, ಬರ, ಚಂಡಮಾರುತ ಮುಂತಾದವುಗಳನ್ನು ಉಂಟುಮಾಡುವ ಅಪಾಯ ತರುತ್ತದೆ.

ಇದು ನೈಸರ್ಗಿಕವಾಗಿ ಸಂಭವಿಸುವ ಪ್ರಕ್ರಿಯೆಯಾದರೂ, ಜಾಗತಿಕ ತಾಪಮಾನವನ್ನು ಹೆಚ್ಚಿಸುತ್ತದೆ. ಅದರ ಅವಧಿ ತಾತ್ಕಾಲಿಕವಾದರೂ, ಜಾಗತಿಕ ತಾಪಮಾನದಲ್ಲಿ ತೀವ್ರ ಸ್ವರೂಪದ ಪರಿಣಾಮ ಬೀರುತ್ತದೆ.

ಭಾರತದಲ್ಲಿ ಎಲ್‌ ನಿನೊದ ಪರಿಣಾಮ ಆತಂಕಕಾರಿಯಾಗಿದೆ. ಅದು ಮುಂಗಾರು ಕಾಲಾವಧಿಯ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ವ್ಯಾಪಕ ಬರಗಾಲಕ್ಕೆ ಕಾರಣವಾಗುತ್ತದೆ. ಎಲ್‌ ನಿನೊದ ಪರಿಣಾಮಕ್ಕೆ ಭಾರತ ತೀವ್ರ ಪ್ರಮಾಣಕ್ಕೆ ತುತ್ತಾದ ನಿದರ್ಶನಗಳು ಸಾಕಷ್ಟಿವೆ. ಈ ಬಾರಿಯ ಎಲ್ ನಿನೊದ ಪರಿಣಾಮ ಯಾವ ರೀತಿ ಇರಲಿದೆ ಎಂಬುದನ್ನು ಊಹಿಸಲು ಸಾಧ್ಯವಾಗುವುದಿಲ್ಲ.

ಕೆಲವೇ ದಿನಗಳಲ್ಲಿ ಬರಲಿದೆ ಪ್ರವಾಹ ಮುನ್ಸೂಚನೆ ನೀಡುವ app!

ಭಾರತದಲ್ಲಿ ಬೇಸಿಗೆಯಲ್ಲಿ ಬಿಸಿ ಗಾಳಿ ಹೆಚ್ಚಿದಂತೆ ಸಮುದ್ರದಿಂದ ಏಳುವ ತಂಪಾದ ಹವೆ ಅದನ್ನು ತಗ್ಗಿಸಿ ಮುಂಗಾರು ಮಾರುತಗಳ ಸೃಷ್ಟಿಗೆ ಕಾರಣವಾಗುತ್ತದೆ. ಆದರೆ, ಎಲ್‌ ನಿನೊ ಪರಿಸ್ಥಿತಿಯಲ್ಲಿ ಶಾಂತ ಸಾಗರದೆಡೆಗೆ ಬೀಸುವ ಗಾಳಿಯು ಭಾರತ ಉಪಖಂಡ ಮೇಲಿನ ಎಲ್ಲ ತಂಪು ಗಾಳಿಯನ್ನು ಹೊರದಬ್ಬುತ್ತದೆ. ಜತೆಗೆ ದೇಶದ ಮೇಲೆ ಶುಷ್ಕ, ಬಿಸಿ ಗಾಳಿ ಉಳಿಸಿ ಮುಂಗಾರಿನ ಮಾರುತಗಳನ್ನು ಚೆಲ್ಲಾಪಿಲ್ಲಿಯಾಗಿಸುತ್ತದೆ.

1997, 2002, 2004, 2009 ಮತ್ತು 2014ರಲ್ಲಿ ಶಾಂತಸಾಗರದಲ್ಲಿ ಪ್ರಬಲವಾಗಿದ್ದ ಎಲ್ ನಿನೊ ಭಾರತದಾದ್ಯಂತ ಬರಗಾಲ ಮತ್ತು ನೀರಿನ ಕೊರತೆಗೆ ಕಾರಣವಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India may face the effect of El Nino during this seasonal monsoon as the conditions are right to develop of El Nino in Pacific ocean, american weather agency said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more