Almatti Dam Water Level: ಆಲಮಟ್ಟಿ ಡ್ಯಾಂಗೆ 62,073 ಕ್ಯುಸೆಕ್ ನೀರು ಹರಿದು ಬರುತ್ತಿದೆ! ಹಾಗಾದ್ರೆ ಈಗ ಎಷ್ಟಿದೆ ನೀರಿನ ಮಟ್ಟ?

ತುಂಬಿ ಹರಿಯುತ್ತಿರುವ ನದಿಗಳು, ಡ್ಯಾಂಗಳಿಗೆ ಭರ್ಜರಿ ನೀರು. ಹೀಗೆ ಕರ್ನಾಟಕದಲ್ಲಿ ಈಗ ಮುಂಗಾರು ಮಳೆ ಮಂದಹಾಸ ತುಂಬಿದೆ. ಅದರಲ್ಲೂ, ಪಶ್ಚಿಮ ಘಟ್ಟಗಳಲ್ಲಿ ಮುಂಗಾರು ಅಬ್ಬರ ಬಲು ಜೋರಾಗಿದ್ದು, ಕರ್ನಾಟಕದ ನದಿಗಳು ಉಕ್ಕಿ ಹರಿಯುತ್ತಿವೆ. ಅದೇ ರೀತಿಯಾಗಿ ಉತ್ತರ ಕರ್ನಾಟಕದ ಪ್ರಮುಖ ಜಲಾಶಯಗಳ ಪೈಕಿ ಒಂದಾಗಿರುವ ಆಲಮಟ್ಟಿ ಡ್ಯಾಂ ಕೂಡ ಈಗ ಮೈತುಂಬಿಕೊಂಡು ಸೆಳೆಯುತ್ತಿದೆ. ಹಾಗಾದ್ರೆ ಸದ್ಯ ಆಲಮಟ್ಟಿ ಜಲಾಶಯದಲ್ಲಿ ಎಷ್ಟಿದೆ ನೀರಿನ ಮಟ್ಟ?

ಮುಂಗಾರು ಮಳೆ ಅಬ್ಬರಿಸುತ್ತಿದೆ, ಕರ್ನಾಟಕದ ಮೂಲೆ ಮೂಲೆಯಲ್ಲಿ ಮುಂಗಾರು ಮಳೆ ತನ್ನ ಆರ್ಭಟ ತೋರಿಸ್ತಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ನೆರೆ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ, ಅಲ್ಲದೆ ಭೀಕರ ಪ್ರವಾಹ ಎದುರಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಮಳೆ ಬೀಳ್ತಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆ ಬೀಳುತ್ತಿರುವ ಪರಿಣಾಮ ಇದೀಗ ನಮ್ಮ ರಾಜ್ಯದಲ್ಲಿ ಕೂಡ ನದಿಗಳು ಉಕ್ಕಿ ಹರಿಯುತ್ತಿವೆ. ಕೃಷ್ಣಾ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಇದೀಗ ಆಲಮಟ್ಟಿ ಜಲಾಶಯದಲ್ಲಿ ಎಷ್ಟಿದೆ ಗೊತ್ತಾ ನೀರಿನ ಪ್ರಮಾಣ? ಮುಂದೆ ಓದಿ.

Almatti Dam Water Level On 7th July 2024

ಆಲಮಟ್ಟಿ ಜಲಾಶಯದ ನೀರಿನ ಮಟ್ಟ

ಕೃಷ್ಣಾ ನದಿ ಭಾರತದ ಬೃಹತ್ ನದಿಗಳ ಪೈಕಿ ಒಂದಾಗಿದೆ. ನೂರಾರು ಟಿಎಂಸಿ ನೀರನ್ನು ಪ್ರತಿವರ್ಷ ಈ ನದಿಯಲ್ಲಿ ಪಡೆಯಬಹುದು. ಹೀಗಾಗಿ ಕೃಷ್ಣಾ ನದಿಗೆ ಕರ್ನಾಟಕದಲ್ಲಿ ಬೃಹತ್ ಡ್ಯಾಂ ಕಟ್ಟಲಾಗಿದ್ದು, ಇದೀಗ ಡ್ಯಾಂಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಅತ್ತ ಮಹಾರಾಷ್ಟ್ರ ಕೂಡ ಭಾರಿ ಪ್ರಮಾಣದ ನೀರು ಹೊರಗೆ ಬಿಡುತ್ತಿದ್ದು, ಸದ್ಯಕ್ಕೆ ಜಲಾಶಯಕ್ಕೆ 62,073 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಈ ಮೂಲಕ ಆಲಮಟ್ಟಿ ಜಲಾಶಯದಲ್ಲಿ ಈಗ 54.31 ಟಿಎಂಸಿ ನೀರು ಸಂಗ್ರಹವಾಗಿದೆ. ಒಟ್ಟು 123.08 ಟಿಎಂಸಿ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಜಲಾಶಯ ಜುಲೈ 2ನೇ ವಾರದಲ್ಲೇ ಭರ್ತಿಯಾಗುವ ನಿರೀಕ್ಷೆ ಇದೆ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?

ಹವಾಮಾನ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಈಗ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ & ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭರ್ಜರಿ ಮಳೆಯ ಆಗಮನ ಆಗಲಿದೆ. ಹಾಗೇ ಇದರ ಜೊತೆಗೆ ಮಲೆನಾಡು ಜಿಲ್ಲೆ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಕೂಡ ಮುಂಗಾರು ಮಳೆ ಅಬ್ಬರಿಸಲಿದೆ. ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮತ್ತಷ್ಟು ಬಿರುಸು ಪಡೆದಿದ್ದು, ಬಯಲು ಸೀಮೆ ಭಾಗದಲ್ಲೂ ಭರ್ಜರಿ ಮಳೆಯಾಗುವ ಮುನ್ಸೂಚನೆ ಸಿಗುತ್ತಿದೆ. ಮತ್ತೊಂದು ಕಡೆ ಕೃಷ್ಣಾ ನದಿ ಹರಿಯುವ ಭಾಗದಲ್ಲೂ ಭಾರಿ ಮಳೆ ಬೀಳುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+