ದೆಹಲಿಯಲ್ಲಿರುವ 104 ಬಿಜೆಪಿ ಶಾಸಕರು ನನ್ನವರು: ಏನಿದು ಎಚ್ದಿಕೆ ಮಾತಿನ ಮರ್ಮ?

ದೆಹಲಿಯಲ್ಲಿರುವ 104 ಬಿಜೆಪಿ ಶಾಸಕರು ನನ್ನವರು: ಏನಿದು ಎಚ್ದಿಕೆ ಮಾತಿನ ಮರ್ಮ?

Recommended Video

      ದೆಹಲಿಯಲ್ಲಿರುವ 104 ಬಿಜೆಪಿ ಶಾಸಕರು ನನ್ನವರು ಎಂದ HDK..! | Oneindia Kannada

      ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಬಿಜೆಪಿಯ ಮುಖಂಡರು ದೆಹಲಿಗೆ ಹೋಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಅವರೆಲ್ಲಾ ಸೇರಿದ್ದಾರೆ. ಎಲ್ಲದಕ್ಕೂ, ಆಪರೇಷನ್ ಕಮಲ ಎಂದು ಹೇಳುವುದು ತಪ್ಪು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

      ರಾಜ್ಯದ ಜನತೆಗೆ ಒಂದಂತೂ ಹೇಳುತ್ತೇನೆ, ಬಿಜೆಪಿಯವರು ಈ ಸರಕಾರವನ್ನು ಕೆಡವಲು ಎಲ್ಲಾ ರೀತಿಯ ತಂತ್ರವನ್ನು ರೂಪಿಸುತ್ತಲೇ ಇದ್ದಾರೆ. ಆದರೆ ಅದ್ಯಾವುದೂ ಸಕ್ಸಸ್ ಆಗುವುದಿಲ್ಲ. ಮಾಧ್ಯಮಗಳು ಕೆಲವೊಂದು ಊಹಾಪೋಹದ ಸುದ್ದಿಗಳನ್ನು ಬಿತ್ತರಿಸುತ್ತಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

      ಮೈಸೂರಿನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ, ದೆಹಲಿಯಲ್ಲಿರುವ ಎಲ್ಲಾ 104 ಬಿಜೆಪಿ ಶಾಸಕರು ನನ್ನವರು ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆ, ರಾಜಕೀಯ ವಲಯದಲ್ಲಿ ಹಲವು ಚರ್ಚೆಗೆ ನಾಂದಿ ಹಾಡಿದೆ.

      ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಮುಖ್ಯಮಂತ್ರಿ, ಬಿಜೆಪಿಯವರು ಯಾವ ಯಾವ ಶಾಸಕರನ್ನು ಓಲೈಸುತ್ತಿದ್ದಾರೆ. ಏನೇನು ಆಫರ್ ಮಾಡುತ್ತಿದ್ದಾರೆ ಎನ್ನುವುದು ಮುಖ್ಯಮಂತ್ರಿಯಾಗಿ ನನಗೆ ಗೊತ್ತಿಲ್ಲವೇ ಎಂದು ಮರುಪ್ರಶ್ನೆ ಹಾಕಿದ್ದಾರೆ. ರಾಷ್ಟಪತಿ ಆಡಳಿತ ಹೇರಿಕೆ ಬಗ್ಗೆ, ಸಿಎಂ ಹೇಳಿದ್ದೇನು? ಮುಂದಿದೆ..

      ಎಲ್ಲವನ್ನೂ ಆಪರೇಷನ್ ಕಮಲದ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ

      ಎಲ್ಲವನ್ನೂ ಆಪರೇಷನ್ ಕಮಲದ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ

      ಮುಂಬೈಗೆ ಹೋಗಿರುವ ಮೂವರು ಕಾಂಗ್ರೆಸ್ ಶಾಸಕರು ನನ್ನ ಬಳಿ ಹೇಳಿಯೇ ಹೋಗಿರುವುದು. ಎಲ್ಲವನ್ನೂ ಆಪರೇಷನ್ ಕಮಲದ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ. ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕೆಂದು ಕಸರತ್ತು ನಡೆಸಲು ಬಿಜೆಪಿ ಶಾಸಕರು ದೆಹಲಿಗೆ ಹೋಗಿದ್ದಾರೆ. ದೆಹಲಿಯಲ್ಲಿರುವ ಎಲ್ಲಾ ಬಿಜೆಪಿ ಶಾಸಕರು ನನ್ನವರು - ಸಿಎಂ ಕುಮಾರಸ್ವಾಮಿ.

      ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ

      ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ

      ಮುಂದಿನ ಹದಿನೇಳನೇ ತಾರೀಕಿಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರುತ್ತದೆ ಎಂದು ಕೆಲವೊಂದು ಮಾಧ್ಯಮಗಳು ವರದಿ ಮಾಡಿವೆ. ಇಂತಹ ವರದಿಗಳನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಈ ರೀತಿಯ ತಪ್ಪು ವರದಿಗಳಿಂದ ರಾಜ್ಯದ ಜನತೆಗೆ ನಷ್ಟವಾಗುತ್ತದೆ ಎನ್ನುವುದನ್ನು ಎಲ್ಲರೂ ಅರಿತರೆ ಒಳ್ಲೆಯದು.

      104 ಬಿಜೆಪಿ ಶಾಸಕರು ಎಲ್ಲರೂ ನನ್ನವರೇ

      104 ಬಿಜೆಪಿ ಶಾಸಕರು ಎಲ್ಲರೂ ನನ್ನವರೇ

      ಮುಂಬೈನಲ್ಲಿರುವ ಶಾಸಕರು, ದೆಹಲಿಯಲ್ಲಿರುವ 104 ಬಿಜೆಪಿ ಶಾಸಕರು ಎಲ್ಲರೂ ನನ್ನವರೇ. ಹಾಗಾಗಿ, ಸರಕಾರಕ್ಕೆ ಅಭದ್ರತೆ ಕಾಡುತ್ತಿದೆ ಎನ್ನುವುದು ಸುಳ್ಳು. ಮುಂಬೈನಲ್ಲಿರುವ ಶಾಸಕರ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಮುಂಬೈಗೆ ವೈಯಕ್ತಿಕ ಕಾರಣಕ್ಕಾಗಿ ಶಾಸಕರು ಹೋಗಿದ್ದಾರೆ. ಅದಕ್ಕೆ ರಾಜಕೀಯ ಬೆರೆಸುವ ಕೆಲಸವನ್ನು ಯಾರೂ ಮಾಡಬಾರದು.

      ಪ್ರಧಾನಿಯವರಿಗೆ ಕೆಲವೊಂದು ತಪ್ಪು ಮಾಹಿತಿ ಹೋಗಿದೆ

      ಪ್ರಧಾನಿಯವರಿಗೆ ಕೆಲವೊಂದು ತಪ್ಪು ಮಾಹಿತಿ ಹೋಗಿದೆ

      ಸಾಲಮನ್ನಾದ ವಿಚಾರದಲ್ಲಿ ಮೋದಿಯವರ ಹೇಳಿಕೆಯನ್ನು ಗಮನಿಸುತ್ತಿದ್ದೇನೆ, ಈ ತಿಂಗಳಾಂತ್ಯದೊಳಗೆ ಸುಮಾರು ಎಂಟು ಲಕ್ಷ ರೈತರ ರಾಷ್ಟ್ರೀಯ ಬ್ಯಾಂಕುಗಳ ಸಾಲಮನ್ನಾ ಆಗಲಿದೆ. ಪ್ರಧಾನಿಯವರಿಗೆ ಕೆಲವೊಂದು ತಪ್ಪು ಮಾಹಿತಿ ಹೋಗಿರುವುದರಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ.

      ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲಿದ್ದಾರೆ

      ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲಿದ್ದಾರೆ

      ಒಟ್ಟು 15 ಜನ ಶಾಸಕರು ಬಿಜೆಪಿಗೆ ಹಾರಲಿದ್ದು, ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ 15 ಶಾಸಕರು ಯಾರ್ಯಾರು ಎಂಬ ಮಾಹಿತಿ ಪೂರ್ಣವಾಗಿಲ್ಲ ಆದರೆ. ಕೆಲವು ಶಾಸಕರ ಮೇಲೆ ಸ್ವತಃ ಕೆಪಿಸಿಸಿ ಮತ್ತು ಮಾಧ್ಯಮಗಳು ಗುಮಾನಿ ವ್ಯಕ್ತಪಡಿಸಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+