ಮಡಿಕೇರಿ: ಡಿ.10ರವರೆಗೆ ಸಭೆಸಮಾರಂಭ ನಿಷೇಧ

ಮಡಿಕೇರಿ, ಡಿಸೆಂಬರ್, 02: ಟಿಪ್ಪು ಜಯಂತಿಯಂದು ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮ್ಯಾಜಿಸ್ಟೀರಿಯಲ್ ವಿಚಾರಣೆ ಆರಂಭಗೊಂಡಿದ್ದು, ಯಾವುದೇ ಅಶಾಂತಿ ನಿರ್ಮಾಣವಾಗಬಾರದೆಂದು ಡಿಸೆಂಬರ್ 2 ರಿಂದ 10ರ ವರೆಗೆ ಸಾರ್ವಜನಿಕ ಸಭೆ ಸಮಾರಂಭಗಳ ಮೇಲೆ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ನಿಷೇಧ ಹೇರಿದ್ದಾರೆ.

ಸಂಘಟನೆ, ಸಮುದಾಯಗಳು ಹಮ್ಮಿಕೊಳ್ಳುವ ಸಭೆ ಸಮಾರಂಭಗಳಲ್ಲಿ ಪ್ರಚೋದನಕಾರಿ ಹೇಳಿಕೆಗೆ, ಭಾಷಣಗಳಿಗೆ ಅವಕಾಶ ಇದ್ದು, ಅನಗತ್ಯ ಗಲಾಟೆಗಳಿಗೆ ಎಡೆ ಮಾಡಿಕೊಡುತ್ತದೆ. ಕಾನೂನು ಸುವ್ಯವಸ್ಥೆ ಕದಡುವ ಸಂಭವ ಇರುವುದರಿಂದ 'ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ 35 ರ ಅನ್ವಯ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಆದೇಶ ಹೊರಡಿಸಿದ್ದಾರೆ.['ಕರ್ನಾಟಕದ ಕಾಶ್ಮೀರ' ಕೊಡಗು ಪ್ರವಾಸಿಗರಿಲ್ಲದೆ ಖಾಲಿ..ಖಾಲಿ]

All public programmes is ban in Madikeri from december 2nd to 10th

ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮಾಹಿತಿ ಕಲೆ ಹಾಕಿರುವ ಪ್ರಕಾರ ಮಡಿಕೇರಿಯಲ್ಲಿ ಟಿಪ್ಪು ಸುಲ್ತಾನ್ ಗಲಭೆಯ ಮುಂದಿನ ವಿಚಾರಣೆ ಡಿಸೆಂಬರ್ 4 ಶುಕ್ರವಾರ ಮತ್ತು 5 ರ ಶನಿವಾರ ಎರಡು ದಿನ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಸಾರ್ವಜನಿಕ, ಧಾರ್ಮಿಕ, ರಾಜಕೀಯ ಬಹಿರಂಗ ಸಭೆ-ಸಮಾರಂಭ, ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ಭಿತ್ತಿಪತ್ರ ಅಂಟಿಸುವುದು, ಭಿತ್ತಿಪತ್ರ ವಿತರಿಸುವುದು ಹಾಗೂ ಮುತ್ತಿಗೆ ಹಾಕುವುದು ಮುಂತಾದವುಗಳನ್ನು ನಿಷೇಧಿಸಲಾಗಿದೆ.[700 ಬ್ರಾಹ್ಮಣರನ್ನು ನೇಣಿಗೇರಿಸಿದ್ದ ದಿನದಂದು ಟಿಪ್ಪು ಜಯಂತಿ ಆಚರಿಸಲಾಯಿತೇ?]

ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದೆಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+