ಎಲ್ಲಾ ದುಡ್ಡು ಡಿಕೆಶಿಗೆ ಸೇರಿದ್ದಲ್ಲ : ಡಿಕೆ ಸುರೇಶ್ ಭಿನ್ನರಾಗ

Subscribe to Oneindia Kannada

ಬೆಂಗಳೂರು, ಆಗಸ್ಟ್ 4: ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಸಂಬಂಧ ಅವರ ಸಹೋದರ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಗ್ಯಾಲರಿ: ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ

"ಒಟ್ಟು 70 ಸ್ಥಳಗಳಲ್ಲಿ ರೈಡ್ ಮಾಡಿದ್ದಾರೆ. ಹಾಗಂಥ ವಶಪಡಿಸಿಕೊಂಡ ಹಣ ಎಲ್ಲವೂ ಡಿಕೆ ಶಿವಕುಮಾರ್ ಅಥವಾ ಕುಟುಂಬಸ್ಥರಿಗೆ ಸೇರಿದ್ದಲ್ಲ," ಅಂತ ಸುರೇಶ್ ಭಿನ್ನ ಹೇಳಿಕೆ ನೀಡಿದ್ದಾರೆ.

All money doesn't belong to DK Shivakumar or family : DK Suresh

ಈ ಮೂಲಕ ಡಿಕೆಶಿ ಮನೆಯಲ್ಲಿ ಸಿಕ್ಕಿದ ಹಣ ಬೇರೆಯವರಿಗೂ ಸೇರಿದ್ದಾಗಿರಬಹುದು ಎಂಬುದನ್ನು ಸುರೇಶ್ ಪರೋಕ್ಷವಾಗಿ ಹೇಳಿದ್ದಾರೆ.

ಹನ್ನೊಂದು ವರ್ಷದಿಂದ ಡಿಕೆಶಿ ಮೇಲಿತ್ತು ಆದಾಯ ತೆರಿಗೆ ತೂಗುಗತ್ತಿ

"ಎಐಸಿಸಿ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಎಲ್ಲರೂ ನಮಗೆ ಬೆಂಬಲ ನೀಡುತ್ತಿದ್ದಾರೆ. ಹಿರಿಯ ನಾಯಕರೂ ಬೆಂಬಲ ಸೂಚಿಸಿ ಕರೆ ಮಾಡಿದ್ದಾರೆ. 'ನಾವೆಲ್ಲಾ ಜತೆಗಿದ್ದೇವೆ. ಇದೆಲ್ಲಾ ರಾಜಕೀಯ ಪ್ರತೀಕಾರದ ದಾಳಿ' ಎಂದು ಹೇಳಿದ್ದಾರೆ. ನಾವು ಬಿಜೆಪಿಯನ್ನು ಎದುರಿಸಲು ಒಗ್ಗಟ್ಟಾಗಿದ್ದೇವೆ. ಗುಜರಾತ್ ಶಾಸಕರೂ ಹೆದರಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಶಾಸಕರೆಲ್ಲಾ ಉತ್ಸಾಹದಲ್ಲಿದ್ದಾರೆ," ಎಂಬುದಾಗಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
“They (Income Tax Officials) have raided total 70 places. That all money doesn't belong to DK Shivakumar or family,” said DK Suresh, brother of Power minister DK Shivakumar.
Please Wait while comments are loading...