assembly elections 2023: ಬೆಂಗಳೂರಿನ ಹಾಲಿ ಶಾಸಕರಿಗೆ ಸಿಗುತ್ತಾ ಟಿಕೆಟ್? ಇಲ್ಲಿದೆ ನೋಡಿ ರಾಜಕೀಯ ಪಕ್ಷಗಳ ಲೆಕ್ಕಾಚಾರ!?

ಬೆಂಗಳೂರು,ಮಾರ್ಚ್ 3: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಿದ್ದು, ಈಗಾಗಲೇ ಮೂರು ಪಕ್ಷಗಳ ರಾಜಕಾರಣಿಗಳು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಇತ್ತ ಆಮ್ ಆದ್ಮಿ ಪಕ್ಷವು ತಮ್ಮ ಪಕ್ಷವನ್ನ ಭದ್ರಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಫುಲ್ ಆಕ್ಟಿವ್ ಆಗಿವೆ.

ಇನ್ನೂ ರಾಜ್ಯ ರಾಜಧಾನಿ ಬೆಂಗಳೂರು ನಗರ ವ್ಯಾಪ್ತಿಯ 28 ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ತಯಾರಿ ನಡೆಸಿದ್ದು, ಮೂರು ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಗೆ ಬೆಂಗಳೂರು ನಗರ ವ್ಯಾಪ್ತಿಯ ಮೇಲೆ ಹೆಚ್ಚಿನ ಒತ್ತು ನೀಡಿವೆ. ಏಕೆಂದರೆ 2023 ರ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯ ರಾಜಧಾನಿ ಬೆಂಗಳೂರು ಬಿಬಿಎಂಪಿ ಚುನಾವಣೆಯ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿಯಲ್ಲಿ ಸಾಕಷ್ಟು ರೂಪರೇಷೆಯನ್ನ ಸಿದ್ದಪಡಿಸಿದ್ದಾರೆ. ಹೀಗಾಗಿ ಹೆಚ್ಚಿನ ವಿಧಾನಸಭಾ ಕ್ಷೇತ್ರವನ್ನ ಗೆಲ್ಲುವ ಅನಿವಾರ್ಯತೆ ರಾಜಕೀಯ ಪಕ್ಷಗಳಿವೆ.

ಈಗಾಗಲೇ ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ಸಿಗುತ್ತಾ? ಎಂದ ಪ್ರಶ್ನೆಗಳು ಕಾಡುತ್ತಿವೆ. ಆನೇಕಲ್ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಈಗಾಗಲೇ ರಾಜಕೀಯ ನಾಯಕರು ಚುನಾವಣಾ ಪ್ರಚಾರವನ್ನ ನಡೆಸುತ್ತಿವೆ.

ಬೆಂಗಳೂರಿನಲ್ಲಿ ರಾಜಕೀಯ ಪಕ್ಷಗಳ ತಯಾರಿ ಹೇಗಿದೆ?

ಬೆಂಗಳೂರಿನಲ್ಲಿ ರಾಜಕೀಯ ಪಕ್ಷಗಳ ತಯಾರಿ ಹೇಗಿದೆ?

ಮುಂಬರುವ ಬಿಬಿಎಂಪಿ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪಕ್ಷಗಳು ತಮ್ಮದೆ ಆದ ತಂತ್ರಗಾರಿಕೆಯೊಂದಿಗೆ ಚುನಾವಣಾ ತಯಾರಿಯನ್ನ ನಡೆಸಿವೆ. ಈ ನಡುವೆ ಯಾರಿಗೆ ಟಿಕೆಟ್ ಕೊಡ್ಬೇಕು. ಈ ಬಾರಿ ಅಭ್ಯರ್ಥಿಗಳ ಬದಲಾವಣೆ ಆದರೆ ಕ್ಷೇತ್ರದ ಪರಿಸ್ಥಿತಿ ಏನಾಗುತ್ತೇ ಎಂಬ ಲೆಕ್ಕಾಚಾರ ಜೋರಾಗಿದ್ದು, 2018 ಯಲ್ಲಿ ಕಳೆದುಕೊಂಡ ಕ್ಷೇತ್ರಗಳನ್ನ ಮತ್ತೆ ಪಡೆಯುವ ತವಕದಲ್ಲಿ ರಾಜಕೀಯ ಪಕ್ಷಗಳಿವೆ.

ಬೆಂಗಳೂರು ನಗರದ 28 ಕ್ಷೇತ್ರಗಳ ಫೈಕಿ ಬಿಜೆಪಿ 15 ಶಾಸಕರನ್ನ ಹೊಂದಿದ್ದರೆ, ಕಾಂಗ್ರೆಸ್ 12 ಶಾಸಕರನ್ನ ಹೊಂದಿದೆ, ಇನ್ನೂ ಜೆಡಿಎಸ್ ಓರ್ವ ಶಾಸಕ ಇದ್ದಾರೆ. ಹೀಗಾಗಿ ಇರುವಂತ ಕ್ಷೇತ್ರಗಳನ್ನ ಮೊದಲು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನಗಳು ನಡೆದಿವೆ. ಇನ್ನೂ ಈ ಬಾರಿ ಈಗಾಗಲೇ ಇರುವಂತಹ ಹಾಲಿ ಶಾಸಕರಿಗೆ ಟಿಕೆಟ್ ಸಿಗಲಿದ್ದು, ಕಳೆದುಕೊಂಡ ಕ್ಷೇತ್ರಗಳನ್ನ ಯಾವ ಅಭ್ಯರ್ಥಿಯನ್ನ ಕಣಕ್ಕಿಳಿಸಬೇಕು, ಕ್ಷೇತ್ರ ಮರಳಿ ಪಡೆಯಲು ಯಾವ ತಯಾರಿ ಅನಿವಾರ್ಯ ಎಂಬ ಲೆಕ್ಕಾಚಾರವನ್ನ ರಾಜಕೀಯ ಪಕ್ಷಗಳು ನಡೆಸಿವೆ.

ಆಡಳಿತರೂಢ ಬಿಜೆಪಿಯ ತಂತ್ರಗಾರಿಗೆ ಏನು?

ಆಡಳಿತರೂಢ ಬಿಜೆಪಿಯ ತಂತ್ರಗಾರಿಗೆ ಏನು?

ಈ ಬಾರಿಯೂ ಬಿಬಿಎಂಪಿ ಅಧಿಕಾರದ ಗದ್ದುಗೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಬೆಂಗಳೂರು ನಗರದ ಒಟ್ಟು 28 ಕ್ಷೇತ್ರಗಳ 23 ಕ್ಷೇತ್ರಗಳನ್ನ ಗೆಲ್ಲಲ್ಲೇ ಬೇಕು ಎಂದು ಪಣ ತೊಟ್ಟಿದೆ. ಈ ಹಿಂದೆ 2018 ರಲ್ಲಿ ಸೋಲು ಕಂಡ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಲಾಗಿದೆ ಎನ್ನಲಾಗಿದೆ.

ಇನ್ನೂ ಪಕ್ಷದಿಂದ ಟಿಕೆಟ್ ನೀಡುವ ಅಭ್ಯರ್ಥಿ ಕಾರ್ಯವೈಖರಿಯ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, ಬೆಂಗಳೂರ ನಗರ ವ್ಯಾಪ್ತಿಯಲ್ಲಿ ಈಗಾಗಲೇ ಮೂರು ಬಾರಿ ಕ್ಷೇತ್ರವಾರು ಸಮೀಕ್ಷೆಗಳನ್ನು ನಡೆಸಿದ್ದು, ಈ ಸಮೀಕ್ಷೆಯಲ್ಲಿ ಹಾಲಿ ಶಾಸಕರೇ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಇನ್ನೂ ಬೆಂಗಳೂರು ದಕ್ಷಿಣ ಭಾಗದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಈ ಭಾಗದಲ್ಲಿ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಸಿದ್ದತೆಯನ್ನ ಬಿಜೆಪಿ ನಡೆಸಲಾಗಿದೆ.

2018 ರಲ್ಲಿ ಸೋಲು ಕಂಡ ಬ್ಯಾಟರಾಯನಪುರ, ಶಾಂತಿನಗರ, ಚಾಮರಾಜಪೇಟೆ, ಜಯನಗರ, ಹೆಬ್ಬಾಳ ಸೇರಿದಂತೆ ಇನ್ನೂ ಕೆಲ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ನಿರ್ಧರಿಸಿದ್ದೇರೆ ಎನ್ನಲಾಗಿದ್ದು, 23 ಕ್ಷೇತ್ರವನ್ನ ಗೆಲ್ಲುವ ತವಕದಲ್ಲಿರುವ ಬಿಜೆಪಿ ಬೆಂಗಳೂರನ ಪ್ರಭಾನಿ ಶಾಸಕರನ್ನ ಬೇರೆ ಕ್ಷೇತ್ರದಿಂದ ಕ್ಷಣಕ್ಕಿಳಿಸಿ ಗೆಲ್ಲುವ ತಯಾರಿ ನಡೆಸಿದೆ ಎನ್ನಲಾಗಿದೆ.

 ಕಾಂಗ್ರೆಸ್ ನ ಹಾಲಿ ಶಾಸಕರಿಗೆ ಟಿಕೆಟ್ ಫಿಕ್ಸ್! ಕಾಂಗ್ರೆಸ್ ಪ್ಲಾನ್ ಏನು?

ಕಾಂಗ್ರೆಸ್ ನ ಹಾಲಿ ಶಾಸಕರಿಗೆ ಟಿಕೆಟ್ ಫಿಕ್ಸ್! ಕಾಂಗ್ರೆಸ್ ಪ್ಲಾನ್ ಏನು?

ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಹಾಲಿ ಶಾಸಕರಿಗೆ ಟಿಕೆಟ್ ಸಿಗುತ್ತೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡ ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಕ್ಷೇತ್ರಗಳಲ್ಲೂ ಆಂತರಿಗೆ ಸಮೀಕ್ಷೆಯನ್ನ ನಡೆಸಿದ್ದು, ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದು ಕನ್ಫರ್ಮ್ ಆಗಿದೆ. ಈ ಬಾರಿ ಹೆಚ್ಚಿನ ಸ್ಥಾನವನ್ನ ಪಡೆಯಲು ಕಾಂಗ್ರೆಸ್ ತಯಾರಿ ನಡೆಸಿದೆ.

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಪ್ರಾಬಲ್ಯ ಹೊಂದಿರುವ ರಾಮಲಿಂಗರೆಡ್ಡಿಯವರು ಬೆಂಗಳೂರಿನಲ್ಲಿ ಈ ಬಾರಿ 22 ಕ್ಷೇತ್ರಗಳನ್ನ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ. ಇನ್ನೂ ೀ ಬಾರಿ ಜಯನಗರ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಜಯ ನಗರ ಕ್ಷೇತ್ರದಲ್ಲಿ ಬೇರೆಯವರಿಗೆ ಟಿಕೆಟ್ ನೀಡುವ ಸಾದ್ಯತೆ ಇಲ್ಲ ಎಂದು ರಾಮಲಿಂಗರೆಡ್ಡಿ ಹೇಳಿದ್ದಾರೆ. ಈ ಬಾರಿ ಗೆಲ್ಲಲು ಸಾಧ್ಯ ಇರುವಂತ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಗಮನ ಹರಿಸಿದೆ.

ಕೆಲ ಕ್ಷೇತ್ರದಲ್ಲಿ ಹಿಡಿತ ಸಾಧಿಸುವ ತವಕದಲ್ಲಿ ಜೆಡಿಎಸ್ ?

ಕೆಲ ಕ್ಷೇತ್ರದಲ್ಲಿ ಹಿಡಿತ ಸಾಧಿಸುವ ತವಕದಲ್ಲಿ ಜೆಡಿಎಸ್ ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಕಂಡಿತ್ತು. ಆದರೆ ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಶಾಸಕ ಕೆ. ಗೋಪಾಲಯ್ಯ ಬಿಜೆಪಿ ಪಕ್ಷ ಸೇರ್ಪಡೆಯ ಬಳಿಕ ದಾಸರಹಳ್ಳಿಯ ಓರ್ವ ಜೆಡಿಎಸ್ ಶಾಸಕರಿದ್ದಾರೆ. ಈಗಾಗಲೇ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನ ಜೆಡಿಎಸ್ ಘೋಷಿಸಿದ್ದು, ಬಿರುಸಿನ ಪ್ರಚಾರವನ್ನ ಜೆಡಿಎಸ್ ಅಭ್ಯರ್ಥಿಗಳು ನಡೆಸುತ್ತಿದ್ದಾರೆ.

ಈಗಾಗಲೇ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರವನ್ನ ಕಳೆದುಕೊಂಡಿರುವ ಜೆಡಿಎಸ್ ಮತ್ತೆ ಆ ಕ್ಷೇತ್ರವನ್ನ ಮರಳಿ ಪಡೆಯುವ ತವಕದಲ್ಲಿದ್ದು, ಬೆಂಗಳೂರು ನಗರ ಭಾಗದ ಯಶವಂತಪುರ ಕ್ಷೇತ್ರದಲ್ಲೂ ಗೆಲ್ಲಬೇಕು ಎಂದು ಪಣತೊಟ್ಟಿದೆ. ಯಶವಂತಪುರ ಕ್ಷೇತ್ರವನ್ನೂ ಈ ಬಾರಿ ಗೆಲ್ಲುತ್ತೇವೆ ಎಂದು ಜೆಡಿಎಸ್ ವಿಶ್ವಾಸವನ್ನ ವ್ಯಕ್ತಪಡಿಸಿದೆ.

ಒಟ್ಟಾರೆ ಮೂರು ಪಕ್ಷಗಳ ಜೊತೆಗೆ ಈಗಾಗಲೇ ಆಮ್ ಆದ್ಮಿ ಪಕ್ಷವೂ ಸಹ ಈ ಬಾರಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ತಯಾರಿ ನಡೆಸಿದ್ದು, ಈ ಬಾರಿ ವಿಧಾನಸಭಾ ಚುನಾವಣೆ ಮುಂದಿನ ಬಿಬಿಎಂಪಿ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಹೇಳಲಾಗಿದೆ. ಇನ್ನೂ ಯಾರಿಗೆ ಟಿಕೆಟ್ ಸಿಗುತ್ತೆ.? ಗೆಲ್ಲಬಹುದತಂಹ ಕ್ಷೇತ್ರಗಳಲ್ಲಿ ಯಾರನ್ನ ಕಣಕ್ಕಿಸುತ್ತಾರೆ ಎಂಬುದನ್ನ ಕಾದುನೋಡ್ಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+