Get Updates
Get notified of breaking news, exclusive insights, and must-see stories!

Alcohol Price Increase: ನಾಳೆಯಿಂದ ಮದ್ಯ ಪ್ರಿಯರಿಗೆ ಶಾಕ್‌, ಈ ಡ್ರಿಂಕ್ಸ್‌ ಬೆಲೆ ಹೆಚ್ಚಳ!

ರಾಜ್ಯದಲ್ಲಿ ಎಣ್ಣೆ ಪ್ರಿಯರಿಗೆ ರಾಜ್ಯ ಸರ್ಕಾರವು ಮತ್ತೊಂದು ಶಾಕ್‌ ಕೊಟ್ಟಿದೆ. ಮದ್ಯದ ಬೆಲೆ ಹೆಚ್ಚಳವಾಗಿದ್ದು ಹೊಸ ಬೆಲೆ ನಾಳೆಯಿಂದ ಅಂದರೆ ಜನವರಿ 20ರಿಂದಲೇ ಜಾರಿಗೆ ಬರಲಿದೆ. ಈಗಾಗಲೇ ರಾಜ್ಯ ಸರ್ಕಾರವು ವಿವಿಧ ವಸ್ತುಗಳ ಹಾಗೂ ಸೇವೆಗಳ ಬೆಲೆಯನ್ನು ಹೆಚ್ಚಳ ಮಾಡುತ್ತಿದೆ. ಇದರ ನಡುವೆ ಮದ್ಯ ಪ್ರಿಯರಿಗೂ ದೊಡ್ಡ ಶಾಕ್‌ ಕೊಡಲಾಗಿದೆ. ಈ ಹೊಸ ಹಾಗೂ ಪರಿಷ್ಕೃತ ದರವು ಸೋಮವಾರದಿಂದಲೇ ಜಾರಿಗೆ ಬರಲಿದೆ ಅಂತ ಹೇಳಲಾಗಿದೆ. ಕರ್ನಾಟಕದಲ್ಲಿ ಇದೀಗ ಮದ್ಯ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್‌ ಆಗಿದೆ. ಒಂದೊಂದು ಸೇವೆ ಹಾಗೂ ವಸ್ತುಗಳ ಬೆಲೆ ಏರಿಕೆಗೆ ಸಾರ್ವಜನಿಕರು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಲ್ಲೇ ಇದ್ದಾರೆ. ಇದರ ನಡುವೆ ಮದ್ಯದ ಬೆಲೆಯೂ ಭರ್ಜರಿ ಹೆಚ್ಚಳವಾಗಿದೆ. ಯಾವ ಮದ್ಯದ ಬೆಲೆ ಹೆಚ್ಚಳವಾಗ್ತಿದೆ ಎನ್ನುವ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆಲ್ಲಾ ಇದೀಗ ರಾಜ್ಯ ಸರ್ಕಾರವು ಹೊಸ ವರ್ಷದ ಮೊದಲ ತಿಂಗಳೇ ದೊಡ್ಡ ಶಾಕ್‌ ಕೊಟ್ಟಿದೆ. ರಾಜ್ಯದಲ್ಲಿ ಈಗಾಗಲೇ ವಿವಿಧ ವಸ್ತುಗಳ ಬೆಲೆ ಏರಿಕೆಯನ್ನು ಮಾಡುವ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರ ಶಾಕ್‌ ಕೊಟ್ಟಿದೆ. ಈಗ ಮದ್ಯ ಪ್ರಿಯರಿಗೆ ಅದರಲ್ಲೂ ಮುಖ್ಯವಾಗಿ ಬಿಯರ್‌ ಪ್ರಿಯರಿಗೆ ಶಾಕ್‌ ಕೊಟ್ಟಿದೆ. ರಾಜ್ಯದಲ್ಲಿ ಅಬಕಾರಿ ಇಲಾಖೆಯಿಂದ ನಿರೀಕ್ಷಿತ ಮಟ್ಟದ ಆದಾಯ ಸರ್ಕಾರಕ್ಕೆ ಬರದೆ ಇರುವುದರಿಂದ ಬರುತ್ತಿಲ್ಲ. ಹೊಸ ವರ್ಷದ ಪ್ರಾರಂಭದಲ್ಲಿ ಭರ್ಜರಿ ಮದ್ಯ ಮಾರಾಟವಾಗಿದೆ ನಿಜ. ಆದರೆ ವರ್ಷ ಪೂರ್ತಿ ನಿರೀಕ್ಷಿತ ಆದಾಯ ಬಂದಿಲ್ಲ. ಹೀಗಾಗಿ ಇದೀಗ ರಾಜ್ಯ ಸರ್ಕಾರವು ಮದ್ಯದ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದೆ. ಯಾವ ಮದ್ಯದ ಬೆಲೆ ಹಾಗೂ ಎಷ್ಟು ಬೆಲೆ ಏರಿಕೆ ಆಗಲಿದೆ ಎನ್ನುವ ವಿವರ ನೋಡೋಣ...

Alcohol Price Increase Shock for Alcohol lovers from January 20th

ಬಿಯರ್‌ ಪ್ರಿಯರಿಗೆ ಬಿಸಿ

ನೀವು ತಣ್ಣಗಿನ ಬಿಯರ್‌ ಸ್ವಾದ ನೋಡಬೇಕು ಅಂತ ಅಂದ್ಕೊಂಡಿದ್ದೀರಾ. ಹಂಗಾದರೆ ನಾಳೆಯಿಂದ ತಣ್ಣಗಿನ ಬಿಯರ್‌ ಕುಡಿಯೋಕೆ ಮುಂಚೆ ಸ್ವಲ್ಪ ದುಡ್ಡು ಎಷ್ಟಿದೆ ಅಂತ ನೋಡಿಕೊಳ್ಳಿ. ಹೌದು ಮದ್ಯ ಪ್ರಿಯರಲ್ಲಿ ಬಿಯರ್‌ ಕುಡಿಯುವವರಿಗೆ ಸಪರೇಟ್‌ ಫ್ಯಾನ್‌ ಬೇಸ್‌ ಇದೆ. ಆದರೆ ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಮತ್ತೆ ಶಾಕ್‌ ಕೊಟ್ಟಿದೆ. ಕರ್ನಾಟಕದಲ್ಲಿ ಮದ್ಯ ಮಾರಾಟದಿಂದ ನಿರೀಕ್ಷಿತ ಆದಾಯ ಬರ್ತಿಲ್ಲ ಅಂತ ಈ ರೀತಿ ಬೆಲೆ ಏರಿಕೆಗೆ ರಾಜ್ಯ ಸರ್ಕಾರ ಮುಂದಾಗಿದೆ ಅಂತ ಹೇಳಲಾಗಿದೆ.

ಕಿಕ್‌ ಪ್ರಿಯರಿಗೆ ಬೆಲೆ ಏರಿಕೆಯ ಕಿಕ್‌ ಕೊಡಲಿಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.‌ ಇದೀಗ ಪ್ರೀಮಿಯಂ (ಸ್ಟ್ರಾಂಗ್ ಬಿಯರ್‌) ಮದ್ಯ ಬಾಟಲ್​ಒಂದಕ್ಕೆ ಕನಿಷ್ಠ 15 ರಿಂದ 50 ರೂಪಾಯಿ ವರೆಗೆ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಕರ್ನಾಟಕದಲ್ಲಿ ಬಿಯರ್‌ ಬೆಲೆ ಜಾಸ್ತಿ ಮಾಡಬೇಕು ಎನ್ನುವ ಪ್ರಸ್ತಾವನೆ ಇತ್ತು. ಆದರೆ ಇದಕ್ಕೆ ಅನುಮೋದನೆ ಸಿಗದೆ ಮುಂದೂಡಿಕೆಯಾಗುತ್ತಿತ್ತು. ಇದೀಗ ಜನವರಿ 20ರಿಂದ ಪ್ರತಿ ಬಿಯರ್​ನ ಬೆಲೆಯು ಅಲ್ಕೋಹಾಲ್​ ಅಂಶದ ಅನುಸಾರ ಏರಿಕೆಯಾಗಲಿದೆ.

Alcohol Price Increase Shock for Alcohol lovers from January 20th

ಇನ್ನು ಬಿಯರ್‌ ಬೆಲೆ ಹೆಚ್ಚಳ ಮಾಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪ್ರೀಮಿಯಂ ಬಿಯರ್​ ಬೆಲೆ ನಾಳೆಯಿಂದನೇ ಜಾಸ್ತಿ ಆಗ್ತಿದೆ. ಇದಕ್ಕೆ ಕಂಪನಿಗಳು ಹಾಗೂ ಮದ್ಯ ಪ್ರಿಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ದೇಶದ ವಿವಿಧ ರಾಜ್ಯಗಳಿಗೆ ಹೋಲಿಕೆ ಮಾಡಿದರೆ. ಬಿಯರ್‌ ಬೆಲೆ ಕರ್ನಾಟಕದಲ್ಲಿ ಹೆಚ್ಚಳವಾಗಿದೆ. ಇದೀಗ ಇನ್ನಷ್ಟು ಬೆಲೆ ಹೆಚ್ಚಳವಾದರೆ, ಬಿಯರ್‌ ಬೇಡಿಕೆ ಸಹ ಕಡಿಮೆ ಆಗುವ ಸಾಧ್ಯತೆ ಇದೆ ಅಂತ ಕೆಲವು ಬಿಯರ್‌ ಕಂಪನಿಗಳು ಅಭಿಪ್ರಾಯಪಟ್ಟಿವೆ.

ಇಂದಿನಿಂದ ಬೆಲೆ ಏರಿಕೆಯ ಶಾಕ್‌: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರವು ಸೋಮವಾರದಿಂದ ಶಾಕ್‌ ಕೊಟ್ಟಿದೆ. ಇಂದಿನಿಂದ ಪರಿಷ್ಕೃತ ಬಿಯರ್‌ ಬೆಲೆ ಜಾರಿಯಾಗಿದೆ. ಸ್ಟ್ರಾಂಗ್‌ ಬಿಯರ್‌ ಬೆಲೆಯು ಹೆಚ್ಚಳವಾಗಿದ್ದು. ಬಜೆಟ್‌ಗಿಂತ ಮುಂಚೆಯೇ ಮದ್ಯದ ಬೆಲೆಯನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ. ಇನ್ನು ಮುಂದಿನ ದಿನಗಳಲ್ಲಿ ಎಣ್ಣೆ ಬೆಲೆ ಇನ್ನೆಷ್ಟು ಹೆಚ್ಚಳವಾಗುತ್ತೋ ಎನ್ನುವ ಆತಂಕವೂ ಜನರಲ್ಲಿ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+