Air India Express: ಕರ್ನಾಟಕದ ಈ ನಗರಗಳ ಸಂಪರ್ಕಕ್ಕೆ 2 ಹೊಸ ವಿಮಾನ ಸೇರ್ಪಡೆ, ವೇಳಾಪಟ್ಟಿ, ವಿವರ
ಮಂಗಳೂರು, ನವೆಂಬರ್ 15: ಪ್ರಮುಖ ವೈಮಾನಿಕ ಸಂಸ್ಥೆಳಲ್ಲಿ ಒಂದಾಗಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಸಂಸ್ಥೆಯು ಉದ್ಯಾನ ನಗರಿ ಬೆಂಗಳೂರಿನಿಂದ- ಕರಾವಳಿಯ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಎರಡು ಹೊಸ ವಿಮಾನಗಳ ಪರಿಚಯಿಸಲು ಮುಂದಾಗಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂದು ನವೆಂಬರ್ 15ರ ಬುಧವಾರದಿಂದ ಪ್ರಾರಂಭವಾಗುವ ಚಳಿಗಾಲದ ವೇಳಾಪಟ್ಟಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (MIA) ಮಂಗಳವಾರ ಬಿಡುಗಡೆ ಮಾಡಿದೆ.

ಬೆಂಗಳೂರು-ಮಂಗಳೂರು ಈ ಎರಡು ನಗರಗಳಿಗೆ ಮಾತ್ರವಲ್ಲದೆ ಚೆನ್ನೈ, ಕಣ್ಣೂರು, ತಿರುವನಂತಪುರಂ ಮತ್ತು ವಾರಣಾಸಿಗೆ ಸಂಪರ್ಕ ಕಲ್ಪಿಸುವ ಹೆಚ್ಚಿನ ವಿಮಾನಗಳ ಸೇವೆ ಒದಗಿಸುವ ಭರವಸೆಯನ್ನು ಈ ಏರ್‌ಲೈನ್ ನೀಡಿದೆ. ಮುಂದಿನ ದಿನಗಳಲ್ಲಿ ದೇಶಿಯ ವಿಮಾನ ಪ್ರಯಾಣಿಕರು ಈ ಸಂಸ್ಥೆಯಿಂದ ಹೊಸ ವಿಮಾನಗಳನ್ನು ನಿರೀಕ್ಷಿಬಹುದಾಗಿದೆ.
ಹೊಸ ವಿಮಾನಗಳನ್ನು ಪರಿಚಯಿಸುತ್ತಿದ್ದು, ಈ ಮೂಲಕ ದೇಶಿಯವಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಆಗುವ ಸಾಧ್ಯತೆಗಳು ಇವೆ. ಪ್ರಯಾಣಿಕರಿಗೆ ಅನುಕೂಲವಾಗಲು ಉದ್ದೇಶಿತ ಈ ನೂತನ ವಿಮಾನಗಳ ಹಾರಾಟದಿಂದ ಪ್ರವಾಸಿ ತಾಣ, ವ್ಯಾಪಾರ, ವಹೀವಾಟು ಸೇರಿದಂತೆ ಹಲವು ಲಾಭಗಳಿವೆ ಎಂದು ಮಂಗಳೂರು ಅಂತಾರಾಷ್ಟ್ರೀ ವಿಮಾನ ನಿಲ್ದಾಣದ (MIA) ಅಧಿಕಾರಿಗಳು ಹೇಳಿದ್ದಾರೆ.

ದೇಶಿಯ ಸಂಚಾರದ ವೇಳಾಪಟ್ಟಿ
ವಿಮಾನದ ಸಮಯವನ್ನು ಗ್ರಾಹಕರ ಅನುಕೂಲಕ್ಕಾಗಿ ಬದಲಾಯಿಸಲಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣಿಕರಿಗೆ ಸಹಾಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವಿಮಾನ IX 782 ಇದು ವಾರಣಾಸಿಯಿಂದ ಬೆಳಗ್ಗೆ 8 ಗಂಟೆಗೆ ಸಂಚಾರ ಆರಂಭಿಸುತ್ತದೆ. ಬೆಳಗ್ಗೆ 10.30ಕ್ಕೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಲ್ಯಾಂಡ್ ಆಗಲಿದೆ. ವಿಮಾನವನ್ನು ಬದಲಾಯಿಸದೆ 55 ನಿಮಿಷಗಳ ತ್ವರಿತ ವಿರಾಮದ ನಂತರ, ಅದು ಬೆಂಗಳೂರಿನಿಂದ 11.10ಕ್ಕೆ ಹೊರಟು ಮಧ್ಯಾಹ್ನ 12.10 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (MIA) ಆಗಮಿಸುತ್ತದೆ.
ಹತ್ತು ದಿನ ಮಾತ್ರ ವಾರಣಾಸಿ ಸಂಚಾರ ಸೌಲಭ್ಯ
ಮುಖ್ಯವಾಗಿ ವಾರಣಾಸಿಯಿಂದ ಮಂಗಳೂರು ಸಂಪರ್ಕಿಸುವ ಈ ವಿಮಾನ ಸಂಚಾರ ಇದೇ ತಿಂಗಳ ನವೆಂಬರ್ 25 ರವರೆಗೆ ಕೇವಲ 10 ದಿನಗಳವರೆಗೆ ಮಾತ್ರ ಲಭ್ಯವಿರುತ್ದೆ. ನಂತರ ನವೆಂಬರ್ 26ರಿಂದ ಇದೇ ವಿಮಾನಗಳು ಬೆಂಗಳೂರಿನ ಮಾರ್ಗವಾಗಿ ಮಂಗಳೂರುನಿಂದ ಚೆನ್ನೈಗೆ ಸಂಪರ್ಕ ಕಲ್ಪಿಸುತ್ತವೆ. ಇತರೆ ವಿಮಾನ ಸಂಚಾರ ಸಮಯವನ್ನು ಆದಷ್ಟು ಶೀಘ್ರವೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಿಳಿಸುವುದಾಗಿ ಹೇಳಿದೆ.












Click it and Unblock the Notifications