ವಿಧಾನಸಭೆ ಚುನಾವಣೆ, 15 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ
ಬೆಂಗಳೂರು, ಅಕ್ಟೋಬರ್ 16 : 2018ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕರ್ನಾಟಕ ಕಾಂಗ್ರೆಸ್ ಮಹತ್ವದ ಬದಲಾವಣೆ ಮಾಡಿದೆ. 15 ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ.
ಸೋಮವಾರ ಎಐಸಿಸಿ ಈ ಕುರಿತು ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಕಳೆದ ವಾರ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು. ಇಂದು ನೂತನ ಅಧ್ಯಕ್ಷರ ಪಟ್ಟಿ ಬಿಡುಗಡೆಯಾಗಿದೆ.

* ಚಿಕ್ಕೋಡಿ - ಲಕ್ಷ್ಮಣ್ ಚಿಂಗಾಲೆ
* ಬೆಳಗಾವಿ - ವಿನಯ್ ನಾಗಲಗಟ್ಟಿ
* ಬಳ್ಳಾರಿ ನಗರ - ರಫೀಕ್
* ದಕ್ಷಿಣ ಕನ್ನಡ - ಕೆ.ಹರೀಶ್ ಕುಮಾರ್
* ಕಲಬುರಗಿ - ಜಗದೇವ ಗುತ್ತೇದಾರ್
* ಹಾವೇರಿ - ಸಯ್ಯದ್ ಅಜಮ್ ಖಾದ್ರಿ
* ಕೊಡಗು - ಎಂ.ಬಿ.ಶಿವಮುದ್ದಪ್ಪ
* ಉಡುಪಿ - ಜನಾರ್ದನ್ ತೋನ್ಸೆ
* ರಾಮನಗರ - ಎಸ್.ಗಂಗಾಧರ್
* ಬೆಂಗಳೂರು ಉತ್ತರ - ಎಂ.ರಾಜ್ ಕುಮಾರ್
* ಬೆಂಗಳೂರು ಕೇಂದ್ರ - ಜಿ.ಶೇಖರ್
* ಬೆಂಗಳೂರು ದಕ್ಷಿಣ - ಜಿ.ಕೃಷ್ಣಪ್ಪ
* ಹುಬ್ಬಳ್ಳಿ ನಗರ - ಅಲ್ತಾಫ್ ಹಲ್ಲೂರು
* ಬೀದರ್ - ಬಸವರಾಜ್
* ಚಿಕ್ಕಬಳ್ಳಾಪುರ - ಜಿ.ಕೇಶವರೆಡ್ಡಿ












Click it and Unblock the Notifications