• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಜೆಟ್‌ ಹಿನ್ನೆಲೆ, ರಾಜ್ಯ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟ ಆಶಾ ಕಾರ್ಯಕರ್ತೆಯರು

|

ಬೆಂಗಳೂರು,ಫೆಬ್ರವರಿ 11: ಮಾರ್ಚ್ ಮೊದಲ ವಾರದಲ್ಲಿ ಕರ್ನಾಟಕ ಬಜೆಟ್ ಮಂಡನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಡಿ-ಗ್ರೂಪ್ ಸಿಬ್ಬಂದಿಯಂತಹ ಇತರ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಸಂದರ್ಭದಲ್ಲಿ ಘೋಷಿಸಲಾದ 10,000 ರೂ ಕೋವಿಡ್ ಅಪಾಯ ಪ್ರೋತ್ಸಾಹ ಧನವನ್ನು ಸಹ ಇನ್ನೂ ನೀಡಿಲ್ಲ.

ಬೆಂಗಳೂರು:ಬಿಬಿಎಂಪಿ ಆಯುಕ್ತ ಮಂಜುನಾಥ್ ಸೇರಿ ಹಲವರಿಗೆ ಕೊರೊನಾ ಲಸಿಕೆ

ಕೊರೊನಾ ಕರ್ತವ್ಯದಲ್ಲಿರುವ ಆಶಾ ಕಾರ್ಮಿಕರಿಗೆ ರಾಜ್ಯ ಸರ್ಕಾರ ಈ ಹಿಂದೆ 3,000 ರೂ.ಗಳ ಅಪಾಯ ಪ್ರೋತ್ಸಾಹ ಧನ ನೀಡುವುದಾಗಿ ಭರವಸೆ ನೀಡಿತ್ತು, ಆದರೆ ಅದು ಅವರೆಲ್ಲರನ್ನೂ ತಲುಪಲಿಲ್ಲ. ಆ ಹಣವನ್ನು ಸಹ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.

ಜುಲೈ ತಿಂಗಳ ಬಾಕಿ ಇರುವ ಪ್ರೋತ್ಸಾಹಕ ಆಧಾರಿತ ವೇತನ ಮತ್ತು ಗೌರವಧನವನ್ನು ತೆರವುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಶಾ ಕಾರ್ಯಕರ್ತೆಯರ ಒಕ್ಕೂಟ ಮನವಿ ಮಾಡಿದೆ.

ತಮ್ಮ ಗೌರವ ಧನವನ್ನು 12,000 ರೂಗಳಿಗೆ ಹೆಚ್ಚಿಸುವುದು ಬೇಡಿಕೆಗಳಲ್ಲಿ ಸೇರಿದೆ. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ನಿರ್ದಿಷ್ಟ ಕರ್ತವ್ಯ ಪೂರ್ಣಗೊಳಿಸಿದ್ದಕ್ಕಾಗಿ ರಾಜ್ಯ ಸರ್ಕಾರದಿಂದ 4,000 ರೂ. ಮತ್ತು ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಧನ ಪಡೆಯುತ್ತಿದ್ದಾರೆ.

   ಎಟಿಎಂ ಹಣ ಕದ್ದು ಎಸ್ಕೇಪ್ ಆಗಿದ್ದ ಡ್ರೈವರ್ ಅರೆಸ್ಟ್ | Oneindia Kannada

   ಆನ್‌ಲೈನ್ ಪೋರ್ಟಲ್‌ನಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಅವರ ಪೂರ್ಣಗೊಂಡ ಕಾರ್ಯಗಳು ಸಹ ನವೀಕರಿಸಲ್ಪಡುವುದಿಲ್ಲ ಮತ್ತು ಅವರ ಪ್ರೋತ್ಸಾಹ ಧನ ಇನ್ನೂ ಅವರನ್ನು ತಲುಪಿಲ್ಲ್ಲ. ಆದ್ದರಿಂದ, ಅವರ ಬೇಡಿಕೆಗಳಲ್ಲಿ ಪೋರ್ಟಲ್‌ನಲ್ಲಿನ ತಾಂತ್ರಿಕ ತೊಂದರೆಗಳನ್ನು ಸರಿಪಡಿಸುವುದು ಸಹ ಸೇರಿದೆ.

   English summary
   Ahead of the state budget to be presented in the first week of March, ASHA (Accredited Social Health Activists) workers’ union, which is affiliated to the All India United Trade Union Centre (AIUTUC), submitted a list of demands to Chief Minister B S Yediyurappa on Wednesday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X