ದೇಶದ್ರೋಹಿಗಳಿಗೆ ಗುಂಡು: ಮತ್ತೆ ಗುಡುಗಿದ ಸಚಿವ ಬಿ.ಸಿ ಪಾಟೀಲ್

ಬೆಂಗಳೂರು, ಮಾರ್ಚ್ 2: ದೇಶ ವಿರೋಧಿ ಹೇಳಿಕೆ ನೀಡುವವರನ್ನು ಗುಂಡಕ್ಕಿ ಕೊಲ್ಲುವಂತ ಕಾನೂನು ಜಾರಿ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.

Recommended Video

      BC Patil asks the law to take action against Anti nationalists | Oneindia Kannada

      ವಿಧಾನಸೌಧದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿಸಿ ಪಾಟೀಲ್ ''ದೇಶ ವಿರೋಧಿ ಹೇಳಿಕೆ ನೀಡುವವರನ್ನು ಗುಂಡಕ್ಕಿ ಕೊಲ್ಲುವಂತ ಕಾನೂನು ಜಾರಿ ಮಾಡುವಂತೆ ಕೇಂದ್ರ ಸರ್ಕಾಕ್ಕೆ ಮನವಿ ಮಾಡಿಕೊಳ್ಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲ ಯುವಕರು ಪ್ರಚಾರ ಪಡೆಯುವುದು ಒಂದು ರೀತಿಯ ಫ್ಯಾಷನ್ ಆಗಿದೆ. ಇಂತಹ ಬೆಳವಣಿಗೆಗಳು ದೇಶ ಮತ್ತು ದೇಶಭಕ್ತಿಯನ್ನು ನಾಶ ಮಾಡುತ್ತದೆ'' ಎಂದು ಹೇಳಿದ್ದಾರೆ.

      ಈ ಮುಂಚೆಯೂ 'ದೇಶ ವಿರೋಧಿಗಳನ್ನು ಗುಂಡಕ್ಕಿ ಕೊಲ್ಲಬೇಕು, ಅಂತವರಿ ಕಠಿಣ ಶಿಕ್ಷೆ ಜಾರಿಯಾಗುವಂತೆ ಕಾನೂನು ತರಬೇಕು' ಎಂದು ಬಿಸಿ ಪಾಟೀಲ್ ಗುಡುಗಿದ್ದರು.

      Agriculture Minister BC Patil Reaction About Slogans against India

      ಭಾರತದಲ್ಲಿ ದೇಶ ವಿರೋಧಿ ಹೇಳಿಕೆ ನೀಡುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಇತ್ತೀಚಿಗಷ್ಟೆ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಅಮೂಲ್ಯ ಲಿಯೋನಾ 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದರು. ಅಮೂಲ್ಯ ದೇಶ ವಿರೋಧಿ ಹೇಳಿಕೆಗೆ ಭಾರಿ ಖಂಡನೆ ವ್ಯಕ್ತವಾಗಿತ್ತು.

      ಕುಂದಾಪುರದಲ್ಲಿ ತಹಶೀಲ್ದಾರ್ ಕಚೇರಿ ಬಳಿ ವ್ಯಕ್ತಿಯೊಬ್ಬ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದರು. ಮೂಲತಃ ಕುಂದಾಪುರದ ವ್ಯಕ್ತಿಯಾದ ರಾಘವೇಂದ್ರ ಈ ಘೋಷಣೆ ಕೂಗಿದ್ದಾರೆ ಎಂದು ತಿಳಿದಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

      ಇನ್ನು ಕಲಬುರ್ಗಿಯಲ್ಲೂ ಪಾಕಿಸ್ತಾನ್ ಜಿಂದಾಬಾದ್ ಎಂಬ ಗೋಡೆ ಬರಹ ಕಂಡುಬಂದಿದ್ದು, ತನಿಖೆ ಮಾಡಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+