ಕರ್ನಾಟಕ: ಗ್ಯಾರಂಟಿ ಯೋಜನೆಗಳಿಂದ ಕೃಷಿಗೆ ಕಾರ್ಮಿಕರ ಅಭಾವ: ಕಾಫಿ ಬೆಳೆಗಾರರು, ಮುಖಂಡರು ಹೇಳಿದ್ದಿಷ್ಟು

ಬೆಂಗಳೂರು, ಆಗಸ್ಟ್ 28: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳಿಂದ ಸದ್ಯ ಕೃಷಿ ವಲಯಕ್ಕೆ ಕಾರ್ಮಿಕ ಕೊರತೆ ಸೃಷ್ಟಿಯಾಗುವಂತೆ ಮಾಡಿದೆ. ತೋಟಗಾರಿಕೆ, ಕಾಫಿ ಬೆಳೆಗಾರರು ಸೇರಿದಂತೆ ಒಟ್ಟಾರೆ ಕೃಷಿಗೆ ಕೌಶಲ್ಯಯುತ ಕಾರ್ಮಿಕರ ಸಂಖ್ಯೆಯಲ್ಲಿ ಇಳಿ ಮುಖವಾಗಿದೆ.

ಕಾಂಗ್ರೆಸ್ ಸರ್ಕಾರ ಉಚಿತ ಘೋಷಣೆಗಳಾದ 200 ಯುನಿಟ್ ಉಚಿತ ವಿದ್ಯುತ್, ಅಕ್ಕಿ ಪೂರೈಕೆ , ಉಚಿತ ಬಸ್ ಪ್ರಯಾಣ, ಯುವನಿಧಿ ಹೀಗೆ ಐದು ಗ್ಯಾರೆಂಟಿ ಯೋಜನೆಗಳ ಅನುಷ್ಠಾನಗೊಳಿಸಿದೆ. ಕೆಲವು ಜಾರಿಗೆ ಬರಬೇಕಿದೆ. ಆದರೆ ಇದರಿಂದ ಕೃಷಿ ವಲಯ ಕೆಲಸಗಾರರ ಕೊರತೆಯ ಭಯ ಎದುರಿಸುವಂತಾಗಿದೆ.

Agriculture Faced Labour Shortage Due To Congress Govt Guarantee Schemes In State

ಮೂಲಗಳ ಪ್ರಕಾರ, ರಾಜ್ಯದಲ್ಲಿ ಕೃಷಿ ಉದ್ಯಮವು 30 ಲಕ್ಷ ಕಾರ್ಮಿಕರನ್ನು ಒಳಗೊಂಡರೆ, ಕಾಫಿ ಉದ್ಯಮವು ಕೇವಲ 5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. 8 ಗಂಟೆಗಳ ಕೆಲಸಕ್ಕೆ ಕಾರ್ಮಿಕರಿಗೆ ದಿನಕ್ಕೆ 360 ರೂ.ನಿಂದ 460 ರೂ. ಕೂಲಿ ಏರಿಕೆ, ಬೋನಸ್ ಮತ್ತು ಪಿಎಫ್‌ನಂತಹ ಪ್ರಯೋಜನಗಳನ್ನು ಪರಿಚಯಿಸಬೇಕು ಎಂಬುದು ಈ ವಲಯದ ಕಾರ್ಮಿಕ ಬೇಡಿಕೆಗಳಲ್ಲಿ ಪ್ರಮುಖವಾದವುಗಳು.

ಆತಂಕದಲ್ಲಿ ಕಾಫಿ ಬೆಳೆಗಾರರು

ಇವರ ಈ ಬೇಡಿಕೆಗಳು ರಾಜ್ಯಾದ್ಯಂತ ರೈತ ಸಂಘಗಳು ಮತ್ತು ಕಾಫಿ ಉದ್ಯಮ ಆತಂಕಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರವು ಉಚಿತ ಯೋಜನೆ ನೀಡುತ್ತಿದ್ದು, ಇದರಿಂದ ಕಾರ್ಮಿಕರ ಕೊರತೆ ಆಗಿದೆ. ಇದು ಎಸ್ಟೇಟ್‌ಗಳ ಮೇಲೆ ಪರಿಣಾಮ ಬೀರಿದೆ. ಈ ಸ್ಥಿತಿ ಹಿಗೆ ಮುಂದುವರಿದರೆ, ತೋಟಗಾರಿಕೆ, ಕಾಫಿ ಬೆಳೆಯುವುದು ಕಷ್ಟವಾಗಲಿದೆ ಎಂದು ಕಾಫಿ ಬೆಳೆಗಾರ ಮತ್ತು ಕಾಫಿ ಬೋರ್ಡ್ ಆಫ್ ಇಂಡಿಯಾದ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಎನ್ (ಕೊಡಗು) ಅವರು ತಿಳಿಸಿದರು ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಚಿಕ್ಕಮಗಳೂರಿನ ಕಾಫಿ ಬೆಳೆಗಾರರೊಬ್ಬರು ಮಾತನಾಡಿ, ಕಾಫಿ ಉದ್ಯಮ ಹಿಂದಿನಿಂದಲೇ ಕಾರ್ಮಿಕರ ಕೊರತೆ ಎದುರಿಸುತ್ತಿದೆ. ಸರ್ಕಾರದ ಉಚಿತ ಕೊಡುಗೆ ಪಡೆದವರು ಸ್ಥಳೀಯ ಕಾರ್ಮಿಕರು ಕೆಲಸ ಬಿಟ್ಟಿದ್ದಾರೆ. ಯಾರು ಕೃಷಿ ಕೆಲಸಕ್ಕೆ ಬರುತ್ತಿಲ್ಲ. ಈ ಬಿಕ್ಕಟ್ಟನ್ನು ನಿವಾರಿಸಲು, ನಾವು ದೇಶದ ಇತರ ರಾಜ್ಯಗಳ ಕಾರ್ಮಿಕರನ್ನು ಕರೆಸಿಕೊಂಡಿದ್ದೇವೆ. ಆದರೆ ಅವರಲ್ಲಿ ಯಾರು ನುರಿತ ಅನುಭವಿ ಕೆಲಸಗಾರರು ಇಲ್ಲ ಎಂದು ಅವರು ತಿಳಿಸಿದರು.

Agriculture Faced Labour Shortage Due To Congress Govt Guarantee Schemes In State

ಗ್ಯಾರಂಟಿಗಳಿಂದ ಕಾರ್ಮಿಕರಲ್ಲಿ ತೃಪ್ತಿಭಾವ?

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಪ್ರತಿಕ್ರಿಯಿಸಿ, ಚುನಾವಣೆಗೆ ಮುನ್ನ ಘೋಷಿಸಿದ್ದ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಇದರಿಂದ ಕಾರ್ಮಿಕ ವಲಯದಲ್ಲಿ ಆತ್ಮತೃಪ್ತಿ ಮೂಡಿದ್ದು, ಅವರು ಕೆಲಸ ಬಾರದಂತಾಗಿದೆ. ಇದರಿಂದ ಕಾರ್ಮಕರ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಭರವಸೆಗಳನ್ನು ಈಡೇರಿಸಲಾಯಿತು. ಅದಾದ ಬಳಿಕ ಹಾಸನ ಮತ್ತು ಕಲಬುರಗಿ ಜಿಲ್ಲೆಗಳ ಕಾರ್ಮಿಕರ ಕೃಷಿ, ತೋಟಗಾರಿಕೆ ಕೆಲಸಕ್ಕೆ ತೆರಳುವುದನ್ನೆ ಬಿಟ್ಟರು. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (MNREGA) ವಾರ್ಷಿಕವಾಗಿ 120 ದಿನಗಳ ಉದ್ಯೋಗದ ಭರವಸೆ ನೀಡುತ್ತದೆ, ಇದು ಸಹ ರೈತರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ತಿಳಿದು ಬಂದಿದೆ.

ಯೋಜನೆಗಳ ಹೊರತಾಗಿ ಹಣಕಾಸಿನ ನಿರ್ವಹಣೆ ಹೇಗೆ?

ಅದಲ್ಲದೇ ಚುನಾವಣಾ ಗ್ಯಾರಂಟಿಗಳು ಕಾರ್ಮಿಕರ ಜೀವನೋಪಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು ಎಂದು ಕಾರ್ಮಿಕ ಸಂಘಟನೆಗಳು ತಿಳಿಸಿವೆ. ಅಲ್ಲದೇ ಕಾರ್ಮಿಕರು ಮಾಸಿಕ ಕನಿಷ್ಠ 13,000 ರೂ.ಗಳಿಂದ 14,000 ರೂ.ವರೆಗಿನ ಅನೌಪಚಾರಿಕ ಕೆಲಸದಲ್ಲಿ ತೊಡಗುತ್ತಿದ್ದಾರೆ ಎಂದು ಕರ್ನಾಟಕದ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ ತಿಳಿಸಿದೆ.

ಒಂದು ಕುಟುಂಬದ ಅಗತ್ಯ ಪೂರೈಸಲು ಸರ್ಕಾರ ನೀಡುವ ಹಣ ಹೇಗೆ ಸಾಕಾಗುತ್ತದೆ. ಅಲ್ಲದೇ ಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣಕಾಸಿನ ನಿರ್ವಹಣೆ, ಇನ್ನಿತರ ಖರ್ಚುಗಳನ್ನು ಹೇಗೆ ಮಾಡುತ್ತಾರೆ ಎಂಬದು ತಿಳಿಯದ ಸಂಗತಿಯಾಗಿದೆ. ಆದರೆ ವಾಸ್ತವರದಲ್ಲಿ ಗ್ಯಾರಂಟಿ ಯೋಜನೆಗಳಿಂದ ಸಿಗುವ ಅಕ್ಕಿ, ಹಣ ಇನ್ನಿತರ ಸೌಕರ್ಯದಿಂದ ಕುಟುಂಬದ ಎಲ್ಲ ಅಗತ್ಯತೆ ಪೂರೈಸಲು ಆಗುವುದಿಲ್ಲ ಎಂಬುದು ವಾಸ್ತವವಾಗಿದೆ. ಸದ್ಯ ಗೃಹಲಕ್ಷ್ಮೀ ಮತ್ತು ಯುವ ನಿಧಿ ಯೋಜನೆ ಜಾರಿಗೆ ಆಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+