• search

ಸರ್ಕಾರಿ ನೌಕರಿಯ ವಯೋಮಿತಿ ಹೆಚ್ಚಿಸಿ, ನಿರುದ್ಯೋಗಿಗಳಿಗೆ ನ್ಯಾಯ ಒದಗಿಸಿ

By Manjunatha
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಜುಲೈ 31: ಸರ್ಕಾರದ ವಿಳಂಬ ನೀತಿಯಿಂದ ವಯಸ್ಸು ಹೆಚ್ಚಾಗಿ ಸರ್ಕಾರಿ ನೌಕರಿಗೆ ಅರ್ಹರಾಗಿದ್ದರೂ ನೌಕರಿಯಿಂದ ವಂಚಿತರಾಗಿರುವವರಿಗೆ, ಸರ್ಕಾರಿ ನೌಕರಿಗೆ ವಿಧಿಸಲಾಗಿರುವ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಿ ನ್ಯಾಯ ಒದಗಿಸಬೇಕು ಎಂಬ ಒತ್ತಾಯ ಜೋರಾಗಿ ಕೇಳಿಬರುತ್ತಿದೆ.

  'ಆಕಾಂಕ್ಷಿ; ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಹಿತ ರಕ್ಷಣಾ ವೇದಿಕೆ'ಯು ಈ ಕುರಿತು ಹೋರಾಟ ಮಾಡುತ್ತಿದ್ದು, ಸರ್ಕಾರವು ನಿಯಮದಂತೆ ಸಮಯಕ್ಕೆ ಸರಿಯಾಗಿ ಹುದ್ದೆಗಳ ಭರ್ತಿ ಮಾಡಿಕೊಳ್ಳದೆ, ಅರ್ಹತೆ ಇದ್ದರೂ ವಯಸ್ಸಿನ ಕಾರಣದಿಂದ ಸರ್ಕಾರಿ ನೌಕರಿ ಪಡೆಯಲು ವಂಚಿತರಾಗುತ್ತಿರುವ ಲಕ್ಷಾಂತರ ಜನರ ಪರವಾಗಿ ಈ ವೇದಿಕೆ ಧನಿ ಎತ್ತಿದೆ.

  ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಕುಮಾರಸ್ವಾಮಿ

  ಆಂಧ್ರಪ್ರದೇಶ ಮತ್ತು ತೆಲಂಗಾಣ ಮಾದರಿಯಂತೆ ರಾಜ್ಯಸರ್ಕಾರಿ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ಹೆಚ್ಚಿಸಬೇಕೆಂದು ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಹಿತ ರಕ್ಷಣಾ ವೇದಿಕೆಯು ಒತ್ತಾಯಿಸುತ್ತಿದೆ. ಈ ಒತ್ತಾಯಕ್ಕೆ ಹಲವು ನಿರುದ್ಯೋಗಿ ಯುವಕರು ಧನಿಗೂಡಿಸಿದ್ದಾರೆ.

  ಸಿಎಂ, ಡಿಸಿಎಂ, ಸಿಎಸ್‌ಗೆ ಮನವಿ

  ಸಿಎಂ, ಡಿಸಿಎಂ, ಸಿಎಸ್‌ಗೆ ಮನವಿ

  ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ರಾಜ್ಯದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವು ಪ್ರಮುಖ ಸಚಿವರಿಗೆ ಹಾಗೂ ಆಡಳಿತ ಯಂತ್ರದ ಮೇಲ್ಮಟ್ಟದಲ್ಲಿನ ಅಧಿಕಾರಿಗಳಿಗೆ ಪತ್ರ ಮುಖೇನ ಮನವಿಗಳನ್ನು ಸಲ್ಲಿಸಿರುವ ವೇದಿಕೆ ಸದಸ್ಯರು ವಯೋಮಿತಿ ಸಡಿಲಿಕೆಯ ಅವಶ್ಯಕತೆ ಮತ್ತು, ವಯೋಮಿತಿ ಸಡಿಲೆಕೆ ಮಾಡಿರುವ ರಾಜ್ಯಗಳ ಉಲ್ಲೇಖಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.

  ಮೂರು ವರ್ಷ ನೇಮಕಾರಿ ಆದೇಶವನ್ನೇ ಹೊರಡಿಸಿಲ್ಲ

  ಮೂರು ವರ್ಷ ನೇಮಕಾರಿ ಆದೇಶವನ್ನೇ ಹೊರಡಿಸಿಲ್ಲ

  ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳಿಗೆ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ವಿಶೇಷ ಸ್ಥಾನ ಮಾನ ಕಲ್ಪಿಸಿ ಸರ್ಕಾರಿ ಹುದ್ದೆಗಳಲ್ಲಿ ಹಾಗೂ ವಿದ್ಯಾಭ್ಯಾಸದಲ್ಲಿ ಮೀಸಲಾತಿ ಕಲ್ಪಿಸಿ ಅದನ್ನು ಕಾರ್ಯರೂಪಕ್ಕೆ ತರುವ ಕಾರಣ 2012 ರಿಂದ 2015ರವರೆಗೆ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಲಿಲ್ಲ.

  ನೌಕರಿಗೆ ಅರ್ಹರಾಗಿದ್ದರೂ ವಂಚಿತರಾಗಿರುವ ಯುವಕರು

  ನೌಕರಿಗೆ ಅರ್ಹರಾಗಿದ್ದರೂ ವಂಚಿತರಾಗಿರುವ ಯುವಕರು

  ಈ ಅವಧಿಯಲ್ಲಿ ಹಲವು ಜನರಿಗೆ ನಿಗದಿತ ವಯೋಮೀತಿ ಮೀರಿದ ಕಾರಣ ಅವರೆಲ್ಲರೂ ಸರ್ಕಾರಿ ನೌಕರಿಗೆ ಅರ್ಹರಾಗಿದ್ದರೂ ವಯೋಮಿತಿ ಕಾರಣಕ್ಕೆ ಅನರ್ಹರಾಗಿದ್ದಾರೆ ಹಾಗಾಗಿ ಅರ್ಹ ವಂಚಿತರಿಗೆ ಅನ್ಯಾಯವಾಗುವುದನ್ನು ತಡೆಯಲು ಸರ್ಕಾರವು ವಯೋಮಿತಿಯನ್ನು ಹೆಚ್ಚಳ ಮಾಡಬೇಕು ಎಂದು ಆಕಾಂಕ್ಷಿ ವೇದಿಕೆ ಮನವಿ ಮಾಡಿದೆ.

  ಯಾವ ರಾಜ್ಯದಲ್ಲಿ ಎಷ್ಟು ಗರಿಷ್ಠ ವಯೋಮಿತಿ

  ಯಾವ ರಾಜ್ಯದಲ್ಲಿ ಎಷ್ಟು ಗರಿಷ್ಠ ವಯೋಮಿತಿ

  ವಯೋಮಿತಿ ಮೀರಿರುವ ನಿರೋದ್ಯೋಗಿ ಯುವಕರಿಗೆ ನ್ಯಾಯ ಒದಗಿಸಲೆಂದು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಸರ್ಕಾರಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಿದೆ. ದೇಶದ ಇತರ ರಾಜ್ಯಗಳಾದ ಗುಜರಾತ್, ರಾಜಸ್ಥಾನ, ಗೋವಾ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಸರ್ಕಾರಿ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 42 ರಿಂದ 44 ವರ್ಷಗಳಿವೆ.

  ಗರಿಷ್ಠ ವಯೋಮಿತಿ 44ಕ್ಕೆ ಹೆಚ್ಚಿಸಿ

  ಗರಿಷ್ಠ ವಯೋಮಿತಿ 44ಕ್ಕೆ ಹೆಚ್ಚಿಸಿ

  ನಮ್ಮ ರಾಜ್ಯದಲ್ಲಿ ಎ, ಬಿ, ಸಿ ಮತ್ತು ಡಿ ವರ್ಗದ ಸರ್ಕಾರಿ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 35 ವರ್ಷವಿದೆ. ಇತರೆ ಹಿಂದುಳಿದ ವರ್ಗಕ್ಕೆ 38 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 40 ವರ್ಷಕ್ಕೆ ನಿಗದಿ ಪಡಿಸಲಾಗಿದೆ. ಆದರೆ ಅವಕಾಶ ವಂಚಿತ ನಿರುದ್ಯೋಗಿ ಯುವಕರಿಗೆ ನ್ಯಾಯ ಒದಗಿಸಲೆಂದು ವಯೋಮಿತಿಯನ್ನು 44 ಕ್ಕೆ ಹೆಚ್ಚಿಸಬೇಕು ಎಂಬುದು ಆಕಾಂಕ್ಷಿ ವೇದಿಕೆಯ ಮನವಿ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Akankshi Vedike is demanding government to age relaxation in government jobs. Organization members already requested CM Kumaraswamy, DCm Parameshwar, CS S Murthi and many other ministers and officials.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more