ಮಂಡ್ಯದ ಗಾಯ ಮಾಯುವ ಮುನ್ನವೇ ಮತ್ತೆರಡು ಬಸ್ ದುರಂತ
ಬೆಂಗಳೂರು, ನವೆಂಬರ್ 26: ಮಂಡ್ಯದಲ್ಲಿ ಡಕೋಟಾ ಬಸ್ ನಾಲೆಗೆ ಬಿದ್ದು ಮೂವತ್ತು ಮಂದಿ ಜಲಸಮಾಧಿಯಾಗಿದ್ದರು. ಈ ನೋವು ಮಾಸುವ ಮುನ್ನವೇ ರಾಜ್ಯದಲ್ಲಿ ಇನ್ನೆರಡು ಬಸ್ ದುರಂತ ಸಂಭವಿಸಿದೆ.
ಒಂದು ಕೊಡಗಿನ ಕುಶಾಲನಗರದ ಹಾರಂಗಿ ಬಳಿಯ ಹೇರೂರಿನಿಂದ ಅರಕಲಗೂಡು ಸಮೀಪದಲ್ಲಿ ಸಂಭವಿಸಿದ್ದು ಬಸ್ ಗದ್ದೆಗೆ ಉರುಳಿದೆ, ಬೀಗರ ಔತಣಕೂಟಕ್ಕೆ ಹೋಗುತ್ತಿದ್ದ ಬಸ್ ಇದಾಗಿದ್ದು, ಬಸ್‌ನಲ್ಲಿದ್ದ 50 ಜನರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಉಳಿದವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮತ್ತೊಂದೆಡೆ ಯಲ್ಲಾಪುರ-ಶಿರಸಿ ಮಾರ್ಗದಲ್ಲಿ ನದಿಗೆ ಬಸ್ ಬಿದ್ದು 8 ಮಂದಿಗೆ ಗಂಭೀರ ಗಾಯಗಳಾಗಿದ್ದು, 10 ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಮಂಡ್ಯ ದುರಂತ ಸಂಭವಿಸಿ ಇನ್ನು ಎರಡು ದಿನವೂ ಕಳೆದಿಲ್ಲ ಅಷ್ಟರೊಳಗೆ ಎರಡು ಬಸ್ ದುರಂತಗಳು ಸಂಭವಿಸಿದ್ದು ಜನರನ್ನು ಆತಂಕಕ್ಕೀಡುಮಾಡಿದೆ. ಈಗಾಗಲೇ ಮಂಡ್ಯದಲ್ಲಿ ಮೃತಪಟ್ಟಿರುವ ಕುಟುಂಬಕ್ಕೆ ರಾಜ್ಯ ಸರ್ಕಾರ 1.5 ಕೋಟಿ ರೂ ಪರಿಹಾರ ಘೋಷಿಸಿದೆ.












Click it and Unblock the Notifications