ಕಾಂಗ್ರೆಸ್ಸಿನ 'ಗೂಂಡಾ ರಾಜ್ಯ'ದ ಕನಸು ನನಸಾಗುವತ್ತ..!

ಬೆಂಗಳೂರು, ಅಕ್ಟೋಬರ್‌ 05: ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಹಾಗೂ ರಾಜ್ಯ ಬಿಜೆಪಿ ನಡುವೆ ಟ್ವೀಟ್‌ ವಾರ್‌ ಮುಂದುವರೆದಿದ್ದು, ಕಾಂಗ್ರೆಸ್ಸಿನ 'ಗೂಂಡಾ ರಾಜ್ಯ'ದ ಕನಸು ನನಸಾಗುವತ್ತ..! ಎಂದು ಬಿಜೆಪಿ ಕಿಡಿಕಾರಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಒಂದು ಕಡೆ ಕರ್ನಾಟಕ ಭಯೋತ್ಪಾದಕರು, ಜಿಹಾದಿಗಳ ಅಡಗುತಾಣವಾದರೆ, ಮತ್ತೊಂದಡೆ ರಾಜ್ಯದಲ್ಲಿ ದಲಿತರು, ಹಿಂದುಳಿದವರ ಮೇಲೆ ಹಲ್ಲೆ, ದೌರ್ಜನ್ಯ, ದರೋಡೆ ಪ್ರಕರಣಗಳು ಹೆಚ್ಚಾಗಿವೆ ಎಂದು ಹೇಳಿದೆ.

cases-of-violence-and-robbery-have-increased

ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಅಪರಾಧಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಗೂಂಡಾಗಳು, ಸಮಾಜಘಾತುಕರನ್ನು 'ಕಾಂಗ್ರೆಸ್‌ ಕಾರ್ಯಕರ್ತರು - ಅಮಾಯಕರು' ಎನ್ನುವ ಕಾರಣದಿಂದಲೇ ಈ ಪರಿ ಪ್ರಕರಣಗಳು ದಾಖಲಾಗಿವೆ..!

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಅಸಮರ್ಥ ಮಂತ್ರಿಗಳಿಂದಾಗಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಅರಾಜಕತೆ ಸೃಷ್ಟಿಯಾಗಿದೆ. ಗೂಂಡಾಗಳು, ಜಿಹಾದಿಗಳು ಬೀದಿಗಿಳಿದು ಕಲ್ಲು ತೂರುತ್ತಿದ್ದಾರೆ. ದಲಿತರ ಮೇಲೆ ದೌರ್ಜನ್ಯ ಸೇರಿ ಅಪರಾಧ ಪ್ರಕರಣಗಳ ಸಂಖ್ಯೆಯೂ ಏರುತ್ತಿದೆ. ಯಥಾ ಮುಖ್ಯಮಂತ್ರಿ ತಥಾ ಮಂತ್ರಿ ಎನ್ನುವಂತೆ ಗೃಹ ಸಚಿವ ಪರಮೇಶ್ವರ್ ಅವರು ನಡೆದುಕೊಳ್ಳುತ್ತಿದ್ದಾರೆ. ಇಲ್ಲಿ ಊರಿಗೆ ಊರೇ ಹೊತ್ತಿ ಉರಿಯುತ್ತಿದ್ದರೆ, ಗೃಹ ಸಚಿವರು ವಿದೇಶದಲ್ಲಿ ಬೆಂಕಿ ಕಾಯಿಸಿಕೊಳ್ಳಲು ಹೋಗಿದ್ದಾರೆ.

1990ರ ಜಮ್ಮು ಕಾಶ್ಮೀರಕ್ಕೂ ಇಂದಿನ ಕಾಂಗ್ರೆಸ್‌ ಆಡಳಿತದ ಕರ್ನಾಟಕಕ್ಕೂ ಇರುವ ಸಾಮ್ಯತೆ, ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ. ಶಿವಮೊಗ್ಗದಲ್ಲೂ ಪೊಲೀಸರ ಮೇಲೆ ಕಲ್ಲು ತೂರಾಟ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದಾಳಿ, ಶಿವಮೊಗ್ಗದಲ್ಲೂ ಹಿಂದೂಗಳ ಮೇಲೆ ದಾಳಿ ಎಂದು ಬಿಜೆಪಿ ಉಲ್ಲೇಖಿಸಿದೆ.

ಕಾಶ್ಮೀರದಲ್ಲಿ ಶಿಕ್ಷಕರ ಮನೆ ಧ್ವಂಸ, ಶಿವಮೊಗ್ಗದಲ್ಲೂ ಶಿಕ್ಷಕರ ಮನೆ ಧ್ವಂಸ ಹಾಗೂ ಕಾಶ್ಮೀರದಲ್ಲಿ ಜಿಹಾದಿಗಳಿಂದ ಮೆರವಣಿಗೆ ದಾಂಧಲೆ, ಶಿವಮೊಗ್ಗದಲ್ಲೂ ಜಿಹಾದಿಗಳಿಂದ ಮೆರವಣಿಗೆ ಪುಂಡಾಟ ಎಂದು ಟ್ವೀಟ್‌ ನಲ್ಲಿ ಬಿಜೆಪಿ ಹೇಳಿದೆ.

ಕಾಶ್ಮೀರದಲ್ಲಿ ತಲ್ವಾರ್‌ ಹಿಡಿದು ಭಯೋತ್ಪಾದಕರ ಓಡಾಟ, ಶಿವಮೊಗ್ಗದಲ್ಲೂ ತಲ್ವಾರ್‌ ಹಿಡಿದು ಆತಂಕವಾದಿಗಳ ಓಡಾಟ. ಅಲ್ಲದೇ ಕಾಶ್ಮೀರದಲ್ಲಿ ಆಡಳಿತ ನಡೆಸುತ್ತಿದ್ದ ಸರ್ಕಾರದ ಬೆಂಬಲ, ಶಿವಮೊಗ್ಗ ಘಟನೆಗೆ ಕಾಂಗ್ರೆಸ್‌ ಸರ್ಕಾರದ ಬೆಂಬಲ ಎಂದು ಬಿಜೆಪಿ ಕಿಡಿಕಾರಿದೆ.

ಶಿವಮೊಗ್ಗದಲ್ಲಿ ಭಯೋತ್ಪಾದಕರು, ಜಿಹಾದಿಗಳ ದಾಳಿಯಿಂದ ಹಿಂದೂಗಳು ಭಯಭೀತಗೊಂಡಿದ್ದಾರೆ. ಕಾಶ್ಮೀರದಿಂದ ಪಂಡಿತರನ್ನು ಒಕ್ಕಲೆಬ್ಬಿಸಿದಂತೆ, ಶಿವಮೊಗ್ಗದಿಂದಲೂ ವ್ಯವಸ್ಥಿತವಾಗಿ ದಾಳಿ ಮಾಡಿ ಹಿಂದೂಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಪಿಎಫ್‌ಐ ಗೂಂಡಾಗಳನ್ನು ಹೊರಬಿಟ್ಟು, ಭಯೋತ್ಪಾದಕರು, ಗೂಂಡಾಗಳನ್ನು ಅಮಾಯಕರು ಎಂದು ಬಿಡುಗಡೆ ಮಾಡುವ ಕಾಂಗ್ರೆಸ್‌ ಸರ್ಕಾರವೇ ಇದಕ್ಕೆಲ್ಲಾ ಹೊಣೆ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಸಮಾಜಘಾತುಕ ಜಿಹಾದಿಗಳನ್ನು ಅಮಾಯಕರೆಂದು ಬಿಡುಗಡೆ ಮಾಡುವ ಕಾಂಗ್ರೆಸ್‌ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ, ನಕಲಿ ಪ್ರಕರಣಗಳನ್ನು ದಾಖಲಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದೆ. ಹಿಂದೂ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ಮೇಲಿನ ಆರೋಪಗಳು ಸಾಬೀತಾಗದಿದ್ದರೂ ಆತನ ವಿರುದ್ಧ ಬೇರೆ ಪ್ರಕರಣಗಳಲ್ಲಿ ಸಿಲುಕಿಸಿ ಸರ್ಕಾರ ಹತ್ತಿಕ್ಕುವ ಕೃತ್ಯವೆಸಗುತ್ತಿದೆ.

ಸಿದ್ದರಾಮಯ್ಯ ಅವರ ಸರ್ಕಾರ ನ್ಯಾಯ ಒದಗಿಸಬೇಕೆಂದು ನಿರ್ದಿಷ್ಟಾವಧಿಯವರೆಗೂ ಉಪವಾಸ ಕೈಗೊಂಡು ಆಸ್ಪತ್ರೆಗೆ ದಾಖಲಾಗಿರುವ ಪುನೀತ್‌ರನ್ನು ಬಿಜೆಪಿಯ ಶಾಸಕರುಗಳಾ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+