'ಮೋದಿ ಮೋಸ' ಟ್ವಿಟ್ಟರ್ ನಲ್ಲಿ ಬಿಜೆಪಿಗೆ ಫುಲ್ ಗೂಸಾ

Posted By:
Subscribe to Oneindia Kannada

ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ (ಸೆ 21) ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರಮುಖ ವಿರೋಧ ಪಕ್ಷ ಬಿಜೆಪಿ ಗೈರಾದ ನಂತರ ಸಾರ್ವಜನಿಕ ವಲಯದಲ್ಲಿ ಮತ್ತು ಸಾಮಾಜಿಕ ತಾಣದಲ್ಲಿ ಪಕ್ಷ ತೀವ್ರ ಟೀಕೆಗೆ ಗುರಿಯಾಗುತ್ತಿದೆ.

ಹದಿನೇಳು ಸಂಸದರು ಮತ್ತು ದಕ್ಷಿಣಭಾರತದಲ್ಲಿ ಬಿಜೆಪಿಗೆ 'ಗೇಟ್ ವೇ' ಯಾಗಿರುವ ಕರ್ನಾಟಕದಲ್ಲಿನ ಸಮಸ್ಯೆ ಬಿಜೆಪಿಗಾಗಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಬೇಕಾಗಿಲ್ಲ ಎಂದು ಟೀಕಾ ಪ್ರಹಾರ ಹರಿದು ಬರುತ್ತಿದೆ. (ಬಿಜೆಪಿ ನಾಯಕರೇ ನಿಮ್ಮ ಪಲಾಯನವಾದ ತಪ್ಪು)

#ModiMosa ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಸರ್ವಪಕ್ಷ ಸಭೆಗೆ ಬಿಜೆಪಿ ಗೈರಾಗಿದ್ದು ಮತ್ತು ಕಾವೇರಿ ವಿಚಾರದಲ್ಲಿ ಮೋದಿ ತಾಳಿರುವ ದಿವ್ಯಮೌನದ ಬಗ್ಗೆ ಸಾಮಾಜಿಕ ತಾಣದಲ್ಲಿ ಟ್ವಿಟ್ಟಿಗರು ಜಾಲಾಡಿಸುತ್ತಿದ್ದಾರೆ.

ಕಾವೇರಿ ನದಿನೀರು ಹಂಚಿಕೆ ವಿಚಾರದಲ್ಲಿ ಈ ಹಿಂದೆ ಸಿದ್ದರಾಮಯ್ಯ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ನಾವು ಭಾಗವಹಿಸಿದ್ದೆವು. ಸಭೆಯಲ್ಲಿ ತೆಗೆದುಕೊಂಡ ಸರ್ವಾನುಮತದ ನಿರ್ಣಯದ ವಿರುದ್ದ ಸರಕಾರ ತಮಿಳುನಾಡಿಗೆ ನೀರು ಹರಿಸಿದೆ.

ಸಭೆಯಲ್ಲಿ ನಮ್ಮ ಸಲಹೆಗೆ ಬೆಲೆಕೊಡದ ಮೇಲೆ ನಾವ್ಯಾಕೆ ಅಲ್ಲಿಗೆ ಹೋಗಬೇಕೆಂದು ಬಿಜೆಪಿ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಬದಲಿಗೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಪ್ರಧಾನಿ ಮೋದಿ ಮತ್ತು ಜನಸಂಪನ್ಮೂಲ ಸಚಿವೆ ಉಮಾಭಾರತಿಯವರನ್ನು ಭೇಟಿಯಾಗಿ ರಾಜ್ಯದ ಕಾವೇರಿ ಸಮಸ್ಯೆಯನ್ನು ವಿವರಿಸಿದ್ದರು.

ಕೆಲವೊಂದು ಟ್ವೀಟ್ ಸ್ಯಾಂಪಲ್, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...

ಬಿಜೆಪಿ ತಮಿಳುನಾಡು

ನಮ್ಮ ದೇಶದ ಪ್ರಧಾನ ಸೇವಕ ನರೇಂದ್ರ ಮೋದಿ ಪಕ್ಷಪಾತ ನಿಲುವನ್ನು ತಾಳಿದ್ದಾರೆ. ಬಿಜೆಪಿ ತಮಿಳುನಾಡಿನಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ.

ಮೋದಿ ಯಾಕೆ ತಲೆ ಹಾಕುತ್ತಿಲ್ಲ

ಉತ್ತರ ಭಾರತ ಮೂಲದ ನನ್ನ ಗೆಳೆಯರು ಕೇಳುತ್ತಿದ್ದಾರೆ ಮೋದಿ ಯಾಕೆ ಕಾವೇರಿ ವಿಚಾರದಲ್ಲಿ ತಲೆಹಾಕುತ್ತಿಲ್ಲ.

ಯಡ್ಡಿ ದೋಖಾ

ಕಾವೇರಿ ವಿಚಾರದಲ್ಲಿ ಬಿಜೆಪಿ ತೆಗೆದುಕೊಂಡ ನಿಲುವಿಗೆ ಜನ ಸರಿಯಾದ ಪಾಠ ಕಲಿಸಲಿದ್ದಾರೆ.

ಕಾವೇರಿ ನೀರು ಹಂಚಿಕೆ

ಬಿಜೆಪಿ, ನರೇಂದ್ರ ಮೋದಿ ಕಲಿಯುವುದು ಯಾವಾಗ? ಜನಸಾಮಾನ್ಯರ ಕನಿಷ್ಠ ಅಗತ್ಯಗಳನ್ನು ಇವರು ಪೂರೈಸುವುದು ಯಾವಾಗ?

ಬಿಜೆಪಿಗೆ ನಾಚಿಕೆಯಾಗಬೇಕು

ಕರ್ನಾಟಕ ಬಿಜೆಪಿ ಮತ್ತು ಪ್ರಧಾನಿ ಮೋದಿಗೆ ನಾಚಿಕೆಯಾಗಬೇಕು. ಕಾವೇರಿಯಂತಹ ಗಂಭೀರ ವಿಚಾರದಲ್ಲಿ ಮೌನವಹಿಸಿದ್ದು ತಪ್ಪು.

ಬಿಜೆಪಿಯ ನಾಲಾಯಕ್ ಸಂಸದರು

ಜೆಡಿಎಸ್ ಸಂಸದರು ರಾಜೀನಾಮೆ ನೀಡಿದರು, ಜನರ ಸಮಸ್ಯೆಯ ಜೊತೆ ಆಟವಾಡಬೇಡಿ.

ನಿಮ್ಮ ಹೇಳಿಕೆ ತಪ್ಪು

ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಸಾಧ್ಯವಿಲ್ಲ ಎನ್ನುವುದು ಸುಳ್ಳು

ಕರ್ನಾಟಕದ ಸಮಸ್ಯೆ ಬೇಕಾಗಿಲ್ಲ

ಆಂಧ್ರ, ತೆಲಂಗಾಣದ ಸಮಸ್ಯೆ ಬಗೆಹರಿಸುವ ಇವರಿಗೆ ಕರ್ನಾಟಕದ ಸಮಸ್ಯೆ ಬೇಕಾಗಿಲ್ಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After BJP skipped All party meeting called by Karnataka CM Siddaramiah, ModiMosa hashtag trending in twitter.
Please Wait while comments are loading...