ಎಲ್ಲರಿಗೂ ವಸತಿ - ಒಂದು ಗಮನಾರ್ಹವಾದ ಸವಾಲಾಗಿದೆಯೇ? ಸಮೀಕ್ಷೆ
ಕೈಗೆಟುಕುವ ಮತ್ತು ಸಮರ್ಪಕವಾದ ವಸತಿಗಳು ಜನರಿಗೆ ಗೌರವಯುತ ಜೀವನವನ್ನು ನಡೆಸಲು, ನಗರ ಮತ್ತು ರಾಜ್ಯಕ್ಕೆ ಆಂತರಿಕ ಆರ್ಥಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಅವಶ್ಯಕವಾಗಿದೆ. ಎಲ್ಲರಿಗೂ ಕೈಗೆಟಕುವ ದರದಲ್ಲಿ, ಸಮರ್ಪಕವಾದ ವಸತಿ ಸೌಲಭ್ಯವನ್ನು ಒದಗಿಸುವ ಜವಾಬ್ದಾರಿಯು ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಸೇರಿದೆ.
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕೈಗೆಟುಕುವ ವಸತಿಯು ಸಮಸ್ಯೆಗಿಂತ ಹೆಚ್ಚಾಗಿ ಸವಾಲಾಗಿ ಪರಿಣಮಿಸಿದೆ. ಆರ್ಥಿಕವಾಗಿ ದುರ್ಬಲ ಹಾಗು ಮಧ್ಯಮ ವರ್ಗದವರು ಉತ್ತಮ ಮೂಲಸೌಕರ್ಯ ಹೊಂದಿರುವ ಮತ್ತು ಭದ್ರತೆಯನ್ನು ಒಳಗೊಂಡ ಆಸ್ತಿಯನ್ನು ಹುಡುಕುತ್ತಿದ್ದಾರೆ.

ಹೆಚ್ಚಿನ ಮಾರುಕಟ್ಟೆ ಬೆಲೆ ಮತ್ತು ವಸತಿ ಭೂಮಿಯ ಅಲಭ್ಯತೆ ಇರುವುದರಿಂದ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮನೆಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಇದನ್ನು ಪರಿಹರಿಸಲು ವಸತಿ ವಲಯದಲ್ಲಿ ಕೈಗೆಟುಕುವ ವಸತಿಗೆ ಅನುಗುಣವಾದ ಮಾಹಿತಿಯೊಂದಿಗೆ ವಸತಿ ನೀತಿಗಳ ಅಗತ್ಯವಿದೆ.
ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯದ ಮಾರ್ಗಸೂಚಿ ಅನುಸಾರ ವಸತಿ ಘಟಕಗಳು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ 21-27 ಚ.ಮೀ ಮತ್ತು ಕಡಿಮೆ ಆದಾಯದ ಗುಂಪಿನ ವರ್ಗಕ್ಕೆ 28-60 ಚ.ಮೀ. ಬಳಸಬಹುದಾದ ಪ್ರದೇಶದ ನಡುವೆ ಇರಬೇಕು. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ತಮ್ಮ ಸರಹದ್ದಿನಲ್ಲಿ ಉದ್ದೇಶಿತ ವಸತಿ ಘಟಕಗಳ ಸರಿಯಾದ ಪರಿಗಣನೆಯೊಂದಿಗೆ, ಮನೆಗಳ ಮಾರಾಟದ ಬೆಲೆಯನ್ನು ನಿಗದಿಪಡಿಸುತ್ತವೆ ಎಂದು ಉಲ್ಲೇಖಿಸಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ
ಕೇಂದ್ರ ಸರ್ಕಾರವು 2023-24ರ ಬಜೆಟ್ ನಲ್ಲಿ 79,000 ಕೋಟಿ ರೂ.ಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ (PMAY) ಮೀಸಲಿಡುವ ಮೂಲಕ ನಗರ ಬಡ ಜನರಿಗೆ ಕೈಗೆಟುಕುವ ದರದಲ್ಲಿ ವಸತಿ ಕಲ್ಪಿಸಲು ಮುಂದಾಗಿದೆ. ಹಿಂದಿನ ಬಜೆಟಿಗೆ ಹೋಲಿಸಿದರೆ PMAYಗಾಗಿ ಶೇ 66 ರಷ್ಟು ನಿಧಿಯು ಹೆಚ್ಚಳವಾಗಿದೆ. ಅಲ್ಲದೆ, ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (CLSS) ವಿಸ್ತರಣೆಯು ಮನೆ ಖರೀದಿದಾರರಿಗೆ ತಮ್ಮ ವಸತಿ ಖರೀದಿಯನ್ನು ಮಾಡಲು ಆರ್ಥಿಕ ಸ್ವಾಯತ್ತತೆಯನ್ನು ನೀಡುತ್ತದೆ, PMAY ಅಡಿಯಲ್ಲಿ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಮನೆ ನಿರ್ಮಾಣದ ಗುರಿಯೊಂದಿಗೆ ವಸತಿ ಸೌಲಭ್ಯದ ಆದ್ಯತೆಯೊಂದಿಗೆ 500 ಕೋಟಿ ರೂ.ಗಳನ್ನು 2023-24 ರ ಬಜೆಟ್ನಲ್ಲಿ ಹಂಚಿಕೆ ಮಾಡಿದೆ.

ಕರ್ನಾಟಕದ ನಗರ ಪ್ರದೇಶಗಳಲ್ಲಿ ವ್ಯಾಪಕವಾದ ವಸತಿ ಕೊರತೆ
ಪ್ರಸ್ತುತವಾಗಿ ಕರ್ನಾಟಕದ ನಗರ ಪ್ರದೇಶಗಳಲ್ಲಿ ವ್ಯಾಪಕವಾದ ವಸತಿ ಕೊರತೆಯಿದ್ದು, ಇದು ಭವಿಷ್ಯದಲ್ಲಿ ನಗರಗಳಿಗೆ ವಲಸೆ ಬರುವುದರಿಂದ ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಕರ್ನಾಟಕ ಸರ್ಕಾರದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, "ಎಲ್ಲರಿಗೂ ವಸತಿ - ಒಂದು ಗಮನಾರ್ಹದ ಸವಾಲಾಗಿಯೇ ಉಳಿದಿದೆ" ಎಂದರೆ ತಪ್ಪಾಗಲಾರದು. ಭಾರತದ ಜನಗಣತಿಯ ವರದಿಗಳ ಪ್ರಕಾರ, 2011ರಲ್ಲಿ ಬೆಂಗಳೂರಿನ ಜನಸಂಖ್ಯೆ 84,43,675 ಹೊಂದಿದ್ದರೂ, ಮೆಟ್ರೋಪಾಲಿಟನ್ ಜನಸಂಖ್ಯೆಯು 85,20,435 ಆಗಿದ್ದು, ಅದರಲ್ಲಿ ಶೇ 8.39 ರಷ್ಟು ಜನರು ಕೊಳಗೇರಿಗಳಲ್ಲಿ ವಾಸಿಸುತ್ತಿದ್ದಾರೆ.
ದಶಮಾನದ ಅಭಿವೃದ್ಧಿ ದರದ ಆಧಾರ
1961 ರಿಂದ 2011 ರವರೆಗಿನ ದಶಮಾನದ ಅಭಿವೃದ್ಧಿ ದರದ ಆಧಾರದ ಮೇಲೆ, ರಾಜ್ಯದ ನಗರ ಜನಸಂಖ್ಯೆಯು ವಾರ್ಷಿಕ ಶೇ 3 ರಷ್ಟು ಸಂಯುಕ್ತ ದರದಲ್ಲಿ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದರರ್ಥ 2022-23ರ ವೇಳೆಗೆ ಇನ್ನೂ 15 ಲಕ್ಷಕಿಂತ ಹೆಚ್ಚು ಕುಟುಂಬಗಳು ನಗರ ಪ್ರದೇಶಗಳಿಗೆ ಸೇರುವ ಅಂದಾಜಿರಬಹುದು. ಇವುಗಳಲ್ಲಿ ಶೇ 50-60 ರಷ್ಟು ಕುಟುಂಬಗಳು ಬಡತನ ರೇಖೆಗಿಂತ ಕೆಳೆಗಿನ ಕುಟುಂಬಗಳಾಗಿರುತ್ತವೆ.
ಬೆಂಗಳೂರಿನಲ್ಲಿ ಪ್ರತಿ 10 ಜನರ ಪೈಕಿ ನಾಲ್ವರು ವಲಸಿಗರು
2011ರ ಜನಗಣತಿಯ ಪ್ರಕಾರ, ಬೆಂಗಳೂರಿನಲ್ಲಿ ಪ್ರತಿ 10 ಜನರ ಪೈಕಿ ನಾಲ್ವರು ವಲಸಿಗರಾಗಿದ್ದಾರೆ. ಬೆಂಗಳೂರಿನ ಒಟ್ಟು ಜನಸಂಖ್ಯೆಯ ಶೇ 42.12% ರಷ್ಟು ಜನರು ಅಂತರ್-ರಾಜ್ಯ ಹಾಗು ಅಂತರ್-ಜಿಲ್ಲೆಗಳಿಂದ ವಲಸೆ ಬಂದವರಾಗಿದ್ದಾರೆ. ಕರ್ನಾಟಕ ಸರ್ಕಾರವು 2016 ರಲ್ಲಿ ನಗರ ಪ್ರದೇಶಗಳಿಗಾಗಿ ತನ್ನ ಕೈಗೆಟುಕುವ ವಸತಿ ನೀತಿಯನ್ನು ಅಧಿಸೂಚನೆ ಹೊರಡಿಸಿದ್ದು ಮತ್ತು ಅದು ಹೊಸ ವಸತಿಗಳನ್ನು ನಿರ್ಮಿಸುವತ್ತ ಒತ್ತು ನೀಡಲಾಗಿದೆ.
ಇತ್ತೀಚೆಗೆ ರಿಯಲ್ ಸಂಸ್ಥೆ ಹಾಗು ಜನಾಗ್ರಹ ಸಂಸ್ಥೆಯು "ಮಾರುಕಟ್ಟೆ ಆಕಾರ ಸೂಚಕಗಳು 2022" ಎಂಬ ದ್ವಿತೀಯ ಸಂಶೋಧನೆಯನ್ನು ಬಹುಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳಿಂದ ಈ ಕೆಳಗಿನ ಅಂಶಗಳನ್ನು ಕಂಡುಕೊಂಡಿತು.

1. ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು ಅಧಿಕಾರ ವಿಕೇಂದ್ರೀಕರಣದ ಸಂದರ್ಭದಲ್ಲಿ ಹಲವಾರು ಇಲಾಖೆ/ಸಂಸ್ಥೆಗಳಿಂದ ಪರಸ್ಪರ ಹೊಂದಾಣಿಕೆಯಿಲ್ಲದೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
2. ಸಂಗ್ರಹಿಸಿದ ಮಾಹಿತಿಯನ್ನು ಗಣಕೀಕರಣವಿಲ್ಲದೆ ನಿರ್ವಹಿಸಲಾಗುತ್ತದೆ.
3. ಕೈಗೆಟುಕುವ ವಸತಿ ಸೌಲಭ್ಯಗಳ ಬಗ್ಗೆ ಕೇಂದ್ರ ಮಟ್ಟದಲ್ಲಿ ಮಾಹಿತಿ ಲಭ್ಯವಿಲ್ಲ.
4. ಪ್ರಸ್ತುತ ನಿರ್ವಹಣೆಯ ಮಾಹಿತಿ ವ್ಯವಸ್ಥೆಯಲ್ಲಿ ಕರ್ನಾಟಕ RERA ಸಂಸ್ಥೆಯು ಕೈಗೆಟುಕುವ ವಸತಿ ಯೋಜನೆಗಳ ಮೇಲಿನ ಅಥವಾ ಪ್ರಧಾನ ಮಂತ್ರಿ ಆವಾಸ್ ಯೋಜನಾ ಮಾಹಿತಿಗೆ ಊಹೆಗಳನ್ನು ಪ್ರಾಕ್ಸಿಗಳಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.
5. ಕೈಗೆಟುಕುವ ದರದ ವಸತಿಗಳ ನಿರ್ಮಾಣ, ವೆಚ್ಚ, ಮಾರಾಟ, ಹಂಚಿಕೆ ನಿರ್ಧಾರ ಹಾಗು ನಿರ್ವಹಣೆಗಳಲ್ಲಿ ದತ್ತಾಂಶದ ಕೊರತೆಯನ್ನು ನೀಗಿಸುವ ಮೂಲಕ ಅವಶ್ಯಕ ಮಾಹಿತಿಯ ಪ್ರಾಮುಖ್ಯತೆಯನ್ನು ಈ ವರದಿಯಲ್ಲಿ ತಿಳಿಸಲಾಗಿದೆ.
2022ರ ವೇಳೆಗೆ ಭಾರತವನ್ನು ಕೊಳೆಗೇರಿ ಮುಕ್ತ ಮಾಡುವ ಗುರಿಯೊಂದಿಗೆ "ವಸತಿ ಮತ್ತು ನಗರ ಬಡತನ ನಿರ್ಮೂಲನೆ" (MoHUA) ಕೇಂದ್ರ ವಸತಿ ಇಲಾಖೆಯು "ಎಲ್ಲರಿಗೂ ವಸತಿ" ಎಂಬ ಒಂದು ಮಹತ್ವಾಕಾಂಕ್ಷಿ ಯೋಜನೆಯನ್ನು, ಜೂನ್ 2015ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ಪ್ರಾರಂಭಿಸಿತು. ಈ ಯೋಜನೆಯಲ್ಲಿ ಆರ್ಥಿಕವಾಗಿ ದುರ್ಬಲ/ಕೆಳ ವರ್ಗದವರು ಮತ್ತು ಮಧ್ಯಮ ಆದಾಯ ವರ್ಗಗಳಲ್ಲಿ ನಗರ ವಸತಿ ಕೊರತೆಯನ್ನು ಪರಿಹರಿಸುವ ಉದ್ದೇಶದೊಂದಿಗೆ ಸರ್ಕಾರದ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿಗಳ ಸಹಾಯದಿಂದ ವಸತಿ ಸೌಲಭ್ಯವನ್ನು ಕಲ್ಪಿಸುತ್ತಿದೆ.
ಬೆಂಗಳೂರು ನಗರಕ್ಕೆ 1,91,520 ವಸತಿಗಳು ಮಂಜೂರು
ಈ ಯೋಜನೆಯಡಿಯಲ್ಲಿ ಬೆಂಗಳೂರು ನಗರಕ್ಕೆ 1,91,520 ವಸತಿಗಳು ಮಂಜೂರಾಗಿದ್ದು, ಅದರ ಪೈಕಿ 1,44,071 ವಸತಿಗಳು ನಿರ್ಮಾಣ ಹಂತದಲ್ಲಿದ್ದು, 76,180 ವಸತಿಗಳು ಪೂರ್ಣಗೊಂಡಿವೆ ಎಂದು PMAY ತನ್ನ ಜಾಲತಾಣದಲ್ಲಿ ತಿಳಿಸಿದೆ. ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳಿಗೆ ಕಾರ್ಯಾತ್ಮಕ ವಿಕೇಂದ್ರೀಕರಣದ ಸಂದರ್ಭದಲ್ಲಿ, ಹಲವಾರು ನಿಗಮ, ಮಂಡಳಿ, ಸಹಕಾರಿ ಸಂಘಗಳು, ಇಲಾಖೆಗಳು, ಸಾರ್ವಜನಿಕ ಮತ್ತು ಖಾಸಗಿ ಗುತ್ತಿಗೆದಾರರು ಕೂಡ ಕೈಗೆಟುಕುವ ದರದಲ್ಲಿ ವಸತಿ ಸಮುಚ್ಛಯಗಳನ್ನು ಕಲ್ಪಿಸುತ್ತಿವೆ.
ಡಾ.ಬಿ.ಆರ್ ಅಂಬೇಡ್ಕರ್ ನಿವಾಸ್ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ದೇವರಾಜ್ ಅರಸು ವಸತಿ ಯೋಜನೆ, ಒಂದು ಲಕ್ಷ ವಸತಿ ಯೋಜನೆ, BBPMಯ ಒಂಟಿ ಮನೆ ಯೋಜನೆಗಳೊಂದಿಗೆ ಸಾರ್ವಜನಿಕ ಮತ್ತು ಖಾಸಗಿ ಗುತ್ತಿಗೆದಾರರು ಕೂಡ ಕೈಗೆಟುಕುವ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡುತ್ತಿದ್ದಾರೆ. ಆದರೂ ಸಹ ಬೇಡಿಕೆಗೆ ಅನುಗುಣವಾಗಿ ವಸತಿಗಳು ಪೂರೈಕೆಯಾಗುತ್ತಿಲ್ಲದಿರುವುದು ವಿಷಾದನೀಯ.
ಭೂಮಿಯ ಗಾತ್ರ ಮತ್ತು ವಸತಿ ವೆಚ್ಚಗಳು
ಭೂಮಿಯ ಗಾತ್ರ ಮತ್ತು ವಸತಿ ವೆಚ್ಚಗಳು ಭೌಗೋಳಿಕವಾಗಿ ಗಮನಾರ್ಹವಾಗಿ ಬದಲಾಗುತ್ತಿರುತ್ತವೆ. ಅದಕ್ಕನುಗುಣವಾಗಿ ಬೇಡಿಕೆ ಮತ್ತು ಪೂರೈಕೆಯು ಬದಲಾಗುತ್ತಿರುತ್ತದೆ. ಸರ್ಕಾರಗಳು ಈ ಬೇಡಿಕೆಗಳಿಗೆ ಅನುಗುಣವಾಗಿ ಪೂರೈಕೆ ಮಾಡಲು ಯೋಜನೆಗಳನ್ನು ರೂಪಿಸುವ ಮೂಲಕ ನಿರ್ಧಾರ ಕೈಗೊಳ್ಳುತ್ತಿದು, ಯಾವ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ನಿರ್ಧಾರ ಕೈಗೊಳ್ಳುತ್ತಿವೆ ಎಂಬುದು ಅಸ್ಪಷ್ಟವಾಗಿದೆ.
ಆರ್ಥಿಕವಾಗಿ ದುರ್ಬಲ/ಕೆಳ ಹಾಗು ಮಧ್ಯಮ ವರ್ಗದ ಜನರರಿಗೆ ಉತ್ತಮ ಸೌಲಭ್ಯದ ಕೈಗೆಟುಕುವ ವಸತಿಯನ್ನು ಸರಿಯಾದ ಅಳತೆಯ ಮಾನದಂಡಗಳ ಪ್ರಕಾರ ಕುಟುಂಬಗಳಿಗೆ ಒದಗಿಸಲು ನಗರ, ರಾಜ್ಯ ಹಾಗು ಕೇಂದ್ರೀಯ ಮಟ್ಟದಲ್ಲಿ ಕೈಗೆಟುಕುವ ವಸತಿ ಸೌಲಭ್ಯದ ಬಗೆಗಿನ ಮಾಹಿತಿಯನ್ನು ಸಂಗ್ರಹಿಸಿ ನಿರ್ವಹಿಸುವ ಅವಶ್ಯಕತೆ ಇದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಬೇರೆಬೇರೆ ಯೋಜನೆಗಳ ಅಡಿಯಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸುತ್ತಿವೆ, ಆದರೆ ಲಭ್ಯವಿರುವ ಭೌಗೋಳಿಕ ಪ್ರದೇಶದ ಆಯ್ಕೆ, ನಿರ್ಮಾಣದ ಹಂತಗಳು ಹಾಗೂ ಗುಣಮಟ್ಟ, ವಸತಿಗಳ ಗಾತ್ರ ಹಾಗು ವಸತಿಗಳಿಗೆ ತಗಲುವ ವೆಚ್ಚ. ಈ ಅಂಶಗಳ ಬಗ್ಗೆ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರ ಹಾಗು ಮಾನದಂಡಗಳ ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ. ಈ ವಿಷಯ ಕುರಿತು ಮಾಹಿತಿಯು ಜನಸಾಮಾನ್ಯರಿಗೆ ಅಲ್ಲದೆ, ಸರ್ಕಾರೀ ಸಂಸ್ಥೆಗಳಿಗೆ ಹಾಗು ಖಾಸಗಿ ಗುತ್ತಿಗೆದಾರರಿಗೆ ತಮ್ಮ ವಸತಿ ನೀತಿ ಮತ್ತು ಯೋಜನೆಗಳನ್ನು ರೂಪಿಸಲು, ಅನುಷ್ಠಾನಗೂಳಿಸಲು ಮತ್ತು ಪರಿಷ್ಕರಿಸಲು ನೆರವಾಗುವುದು.
ರಿಯಲ್ ಸಂಸ್ಥೆ ಹಾಗು ಜನಾಗ್ರಹ ಸಂಸ್ಥೆ
ವಿವಿಧ ಇಲಾಖೆಗಳು/ಸಂಸ್ಥೆಗಳು/ನಿಗಮಗಳು ಬೇರೆಬೇರೆ ಯೋಜನೆಗಳ ಅಡಿಯಲ್ಲಿ ಕಲ್ಪಿಸುವ ವಸತಿ ಸೌಲಭ್ಯಗಳ ಬಗ್ಗೆ ಪರಸ್ಪರ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವ ಅವಶ್ಯಕತೆ ಇದೆ. ರಿಯಲ್ ಸಂಸ್ಥೆ ಹಾಗು ಜನಾಗ್ರಹ ಸಂಸ್ಥೆಯು ನಡೆಸಿದ "ಮಾರುಕಟ್ಟೆ ಆಕಾರ ಸೂಚಕಗಳು 2022" ಸಂಶೋಧನೆಯಲ್ಲಿ ವಸತಿ ನಿರ್ಮಾಣ ಮತ್ತು ಹೂಡಿಕೆ, ಮಾರಾಟ ಮತ್ತು ಬಾಡಿಗೆ, ವಸತಿಗಳ ನಿರ್ವಹಣೆ ಮತ್ತು ನಿರ್ವಹಣೆ, ಬೇಡಿಕೆ ಮತ್ತು ಪೂರೈಕೆಗಳ ಬಗ್ಗೆ ಮಾಧ್ಯಮಿಕ ದತ್ತಾಂಶಗಳನ್ನು ಸಂಗ್ರಹಿಸಿದ್ದು, ಈ ಸಂಶೋಧನೆಯಿಂದ ದೊರೆತ ಮಾಹಿತಿಯು ಅಸಮರ್ಪಕವಾಗಿರುವುದು ಕಂಡುಬಂದಿದ್ದು, ಲಭ್ಯವಿರುವ ದತ್ತಾಂಶಗಳನ್ನು ಪ್ರಮಾಣೀಕರಣದ ಅಗತ್ಯವಿದೆ.
ಕೈಗೆಟಕುವ ವಸತಿಗಳಿಗೆ ಸಂಬಂಧಿಸಿದ ಮಾಹಿತಿ
ಜೊತೆಗೆ ಕೈಗೆಟಕುವ ವಸತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಾಲಕಾಲಕ್ಕೆ ನವೀಕರಿಸುವ ಅಗತ್ಯವಿದೆ. ಪ್ರಸ್ತುತ ಚುನಾಯಿತ ರಾಜ್ಯ ಸರ್ಕಾರವು ಜಾರಿಯಲ್ಲಿರುವ ಕೈಗೆಟುಕುವ ವಸತಿಗಳ ಸೌಲಭ್ಯಗಳನ್ನು ವಿಶ್ಲೇಷಿಸಿ, ಪಾರದರ್ಶಕವಾದ ನಿರ್ಧಾರವನ್ನು ಪರಿಣಾಮಕಾರಿಯಾಗಿ ತೆಗೆದುಕೊಳ್ಳುವ ಮೂಲಕ, ಆರ್ಥಿಕವಾಗಿ ದುರ್ಬಲ/ಕೆಳ ವರ್ಗದವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ನೆಲೆನಿಲ್ಲುವಂತೆ ಮಾಡಲು ಮತಷ್ಟು ಶ್ರಮಿಸಬೇಕಾಗಿದೆ.
-
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ












Click it and Unblock the Notifications